For Quick Alerts
  ALLOW NOTIFICATIONS  
  For Daily Alerts

  ಘೋಸ್ಟ್ ಮ್ಯೂಸಿಕ್‌ಗೆ ರೀಲ್ಸ್ ಮಾಡಿದ್ರೆ 25000 ಹಣ, ಶಿವಣ್ಣನ ಜತೆ ಹೆಜ್ಜೆ ಹಾಕುವ ಅವಕಾಶ!

  |

  ಆಧುನಿಕ ದಿನಗಳಲ್ಲಿ ಹೊಸ ಹೊಸ ಅಪ್‌ಡೇಟ್‌ಗಳು ಬಂದಂತೆ ಸಿನಿಮಾ ಕ್ಷೇತ್ರವೂ ಸಹ ಅಪ್‌ಡೇಟ್ ಆಗುತ್ತಿದೆ. ಅದು ಕಥೆಯಲ್ಲಿರಬಹುದು ಅಥವಾ ಚಿತ್ರದ ಪ್ರಚಾರದಲ್ಲಿರಬಹುದು ಚಿತ್ರತಂಡ ಹೊಸತನವನ್ನು ತಂದು ಟ್ರೆಂಡ್ ಸೆಟ್ ಮಾಡಲು ಯೋಚಿಸುತ್ತಲೇ ಇರುತ್ತವೆ. ವಿಭಿನ್ನ ಪೋಸ್ಟರ್ ಹಾಗೂ ಟೀಸರ್‌ನಿಂದ ಹಿಡಿದು ನೂತನ ಪ್ರಚಾರದವರೆಗೂ ಹೊಸತನದೊಂದಿಗೆ ಜನರನ್ನು ಸೆಳೆಯುವುದು ಚಿತ್ರತಂಡಗಳ ಪ್ಲಾನ್.

  ಹೀಗಾಗಿಯೇ ಹೊಸ ತಂತ್ರಜ್ಞಾನಗಳನ್ನೇ ಬಳಸಿಕೊಂಡು ಪ್ರಚಾರಕ್ಕೆ ಮುಂದಾಗಿವೆ ಚಿತ್ರತಂಡ. ಇದೇ ರೀತಿ ಟ್ರೋಲ್ ಪೇಜ್‌ಗಳನ್ನು ಬಳಸಿ ಚಿತ್ರದ ಪ್ರಮೋಷನ್‌ಗಳನ್ನು ಮಾಡಲಾಗುತ್ತಿತ್ತು. ಬಳಿಕ ರೀಲ್ಸ್ ಜನಪ್ರಿಯತೆ ಹಾಗೂ ರೀಚ್ ಹೆಚ್ಚಾದ ಕಾರಣ ಚಿತ್ರತಂಡಗಳ ಕಣ್ಣು ರೀಲ್ಸ್ ಮೇಲೂ ಬಿತ್ತು. ಹೌದು, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾವಳಿ ಜೋರಾಗಿಯೇ ಇದೆ. ದಿನದೊಂದಷ್ಟು ಸಮಯವನ್ನು ಕೆಲವರು ರೀಲ್ಸ್ ಮಾಡಿ ಕಳೆದರೆ, ಇನ್ನೂ ಕೆಲವರು ರೀಲ್ಸ್ ನೋಡಿ ಕಳೆಯುತ್ತಾರೆ.

  ಹೀಗಾಗಿ ಈ ರೀಲ್ಸ್ ಕೂಡ ಈಗ ಪ್ರಚಾರದ ಒಂದು ಭಾಗವಾಗಿ ಮಾರ್ಪಟ್ಟಿದೆ. ಇದನ್ನೇ ಸಿನಿಮಾ ಕ್ಷೇತ್ರವೂ ಸಹ ಉಪಯೋಗಪಡಿಸಿಕೊಳ್ಳುತ್ತಿದ್ದು, ಕೆಲ ತಾರೆಯರು ರೀಲ್ಸ್ ಮಾಡುವ ಸಾಮಾಜಿಕ ಜಾಲತಾಣದ ಕೆಲ ಯುವಕ ಯುವತಿಯರ ಜೊತೆ ತಮ್ಮ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿ ಪ್ರಚಾರವನ್ನು ಮಾಡಿದ್ದರು. ಈ ವಿಧಾನದಲ್ಲಿ ಇದೀಗ ಘೋಸ್ಟ್ ಚಿತ್ರತಂಡ ಒಂದು ಹೆಜ್ಜೆ ಮುಂದಿಟ್ಟಿದ್ದು, ಇತ್ತೀಚೆಗಷ್ಟೆ ಬಿಡುಗಡೆಗೊಂಡಿರುವ ಘೋಸ್ಟ್ ಚಿತ್ರದ ಮ್ಯೂಸಿಕ್‌ಗೆ ರೀಲ್ಸ್ ಮಾಡಿ, ಯಾರ ರೀಲ್ಸ್ ಚೆನ್ನಾಗಿರುತ್ತದೆಯೋ ಆ ಓರ್ವರಿಗೆ 25000 ರೂಪಾಯಿ ಬಹುಮಾನ ಹಾಗೂ ಶಿವ ರಾಜ್‌ಕುಮಾರ್ ಅವರನ್ನು ಭೇಟಿಯಾಗುವ ಅವಕಾಶ ಲಭಿಸಲಿದೆ, ಅಷ್ಟೇ ಅಲ್ಲದೇ ಶಿವ ರಾಜ್‌ಕುಮಾರ್ ಜತೆ ರೀಲ್ಸ್ ಮಾಡುವ ಅವಕಾಶ ಕೂಡ ಸಿಗಲಿದೆ ಎಂದು ಪ್ರಕಟಿಸಿದೆ.

  ಈ ಮೂಲಕ ರೀಲ್ಸ್ ಮಾಡುವ ಯುವಕ ಯುವತಿಯರು ಪೈಪೋಟಿಗೆ ಬಿದ್ದು ಇನ್ನಷ್ಟು ಹೆಚ್ಚು ರೀಲ್ಸ್ ಮಾಡಲಿದ್ದು, ಚಿತ್ರಕ್ಕೆ ಒಂದೊಳ್ಳೆ ಪ್ರಚಾರವೂ ಸಿಗಲಿದೆ, ನೆಟ್ಟಿಗರಿಗೆ ಮನರಂಜನೆಯೂ ಸಿಗಲಿದೆ ಹಾಗೂ ಆ ಯುವಕ ಯುವತಿಯರಿಗೆ ಒಂದೊಳ್ಳೆ ವೇದಿಕೆ ಕೂಡ ಸಿಕ್ಕಂತಾಗಲಿದೆ.

  English summary
  Social media influencers now can do reel for Ghost bgm and get a chance to win 25000. Read on
  Thursday, January 19, 2023, 20:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X