'ಹ್ಯಾಪಿ ಬರ್ತ್‌ಡೇ ಅಮೃತಕ್ಕಾ': ಬಡವ ರಾಸ್ಕಲ್ ನಟಿಗೆ ಕಾಫಿ ನಾಡು ಚಂದು ಮಸ್ತ್ ಸಾಂಗ್!

By ಫಿಲ್ಮಿಬೀಟ್ ಡೆಸ್ಕ್

ಕಾಫಿ ನಾಡು ಚಂದು ಸದ್ಯ ಸೋಶಿಯಲ್ ಮೀಡಿಯಾದ ಸ್ಟಾರ್. ಕಳೆದ ಕೆಲವು ದಿನಗಳಿಂದ ಯೂಟ್ಯೂಬ್ ಚಾನಲ್‌ಗಳು ಕಾಫಿನಾಡು ಚಂದು ಹಿಂದೆ ಬಿದ್ದಿವೆ. ಸೋಶಿಯಲ್ ಮೀಡಿಯಾದಲ್ಲಿ ಚಂದು ದಿನದಿಂದ ದಿನಕ್ಕೆ ಜನಪ್ರಿಯರಾಗುತ್ತಲೇ ಇದ್ದಾರೆ.

ಕಾಫಿ ನಾಡು ಚಂದು ಹಾಡುವ ಹಾಡುಗಳನ್ನು ನೆಟ್ಟಿಗರು ಎಂಜಾಯ್ ಮಾಡುತ್ತಿದ್ದಾರೆ. ತನ್ನದೇ ವಿಶಿಷ್ಟ ಶೈಲಿಯಲ್ಲಿ ಹಾಡಿನ ಮೂಲಕ ಶುಭ ಕೋರುವ ಚಂದು ಯುವಕರ ಪಾಲಿಗೆ ಮನರಂಜನೆಯೇ ಆಗಿ ಹೋಗಿದ್ದಾರೆ.

ಹುಟ್ಟುಹಬ್ಬ ಸೇರಿದಂತೆ ಶುಭ ಸಂದರ್ಭಗಳಿಗೆ ತನ್ನದೇ ಸ್ಟೈಲ್‌ನಲ್ಲಿ ವಿಶ್ ಮಾಡುವ ಕಾಫಿ ನಾಡು ಚಂದು ಫಾಲೋವರ್ಸ್ ಡಬಲ್ ಆಗಿದ್ದಾರೆ. ಇಷ್ಟು ದಿನ ಸಾಮಾನ್ಯ ಜನರಿಗೆ ವಿಶ್ ಮಾಡುತ್ತಿದ್ದ ಚಂದು ಈಗ ಸ್ಯಾಂಡಲ್‌ವುಡ್ ನಟಿ ಅಮೃತಾ ಅಯ್ಯಂಗಾರ್ ಬರ್ತ್‌ಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದೂ ಕೂಡ ನೆಟ್ಟಿಗರಿಗೆ ಕಿಕ್ ಕೊಡುತ್ತಿದೆ.

ಅಮೃತಾ ಬರ್ತ್‌ಡೇ

ಅಮೃತಾ ಬರ್ತ್‌ಡೇ

ಸ್ಯಾಂಡಲ್‌ವುಡ್‌ನ ಉದಯೋನ್ಮುಕ ನಟಿ ಅಮೃತಾ ಅಯ್ಯಂಗಾರ್ ಇಂದು ( ಜುಲೈ 26) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಡಾಲಿ ಧನಂಜಯ್, ಮೋಹಕ ತಾರೆ ರಮ್ಯಾ ಸೇರಿದಂತೆ ಸ್ಯಾಂಡಲ್‌ವುಡ್‌ ಸೆಲೆಬ್ರೆಟಿಗಳು ಅಮೃತಾ ಅಯ್ಯಂಗಾರ್‌ಗೆ ಶುಭಕೋರಿದ್ದಾರೆ. ಸಿನಿಮಾಗಳಲ್ಲಿ ಬ್ಯಾಕ್‌ ಟು ಬ್ಯಾಕ್ ಬ್ಯುಸಿಯಾಗಿರುವ ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬಕ್ಕೆ ಕಾಫಿ ನಾಡು ಚಂದು ಕೂಡ ಶುಭ ಕೋರಿದ್ದಾರೆ.

ಹ್ಯಾಪಿ ಬರ್ತ್‌ಡೇ ಅಮೃತಕ್ಕಾ

ಹ್ಯಾಪಿ ಬರ್ತ್‌ಡೇ ಅಮೃತಕ್ಕಾ

ಹೌದು, ಕಾಫಿ ನಾಡು ಚಂದು ಅಭಿಮಾನಿಗಳು ಈ ಹಾಡನ್ನು ಕೇಳಿ ಈಗಾಗಲೇ ನಕ್ಕು ನಕ್ಕು ಸುಸ್ತಾಗಿರುತ್ತಾರೆ. ಕಾಫಿ ನಾಡು ಚಂದು ಸೋಶಿಯಲ್ ಮೀಡಿಯಾದಲ್ಲಿ ನಟಿ ಅಮೃತಾ ಅಯ್ಯಂಗಾರ್‌ಗೆ ವಿಶ್ ಮಾಡಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ಹ್ಯಾಪಿ ಬರ್ತ್‌ ಡೇ ಅಮೃತಕ್ಕಾ.. ನಿಮಗೆ ವಂದನೆಗಳು ಅಮೃತಕ್ಕಾ" ಎಂದು ಹಾಡಿ ಶುಭಕೋರಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೃತಾಗೆ ಡಾಲಿ, ರಮ್ಯಾ ಶುಭಾಶಯ

ಅಮೃತಾಗೆ ಡಾಲಿ, ರಮ್ಯಾ ಶುಭಾಶಯ

ಸ್ಯಾಂಡಲ್‌ವುಡ್ ನಟಿ ಅಮೃತಾ ಅಯ್ಯಂಗಾರ್‌ಗೆ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಶುಭಕೋರಿದ್ದಾರೆ. ಕಾಫಿ ನಾಡು ಚಂದು ಜೊತೆ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಾದ ಡಾಲಿ ಧನಂಜಯ್ ಹಾಗೂ ಮೋಹಕ ತಾರೆ ರಮ್ಯಾ ಅಮೃತಾಗೆ ಶುಭ ಹಾರೈಸಿದ್ದಾರೆ. ಅಮೃತಾ ಅಯ್ಯಂಗಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ಇವರು ಕೂಡ ಒಬ್ಬರು.

More from Filmibeat

English summary
Social Media Star Coffee Nadu Chandu Song For Amrutha Iyengar Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X