For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಟ್ಟುಹಬ್ಬಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ

  By Suneetha
  |

  ನಾಳೆ (ಫೆಬ್ರವರಿ 16) ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರಿಗೆ 39ನೇ ಹುಟ್ಟುಹಬ್ಬದ ಸಂಭ್ರಮ. ಇನ್ನು ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಬಾಸ್ ನ ಹುಟ್ಟುಹಬ್ಬ ಅಂದ್ರೆ ಕೇಳಬೇಕೆ?, ಅಭಿಮಾನಿಗಳಂತೂ ಈಗಲೇ ಸಂಭ್ರಮ ಶುರು ಹಚ್ಚಿಕೊಂಡು ಬಿಟ್ಟಿದ್ದಾರೆ.

  ಈಗಾಗಲೇ ರಾಜರಾಜೇಶ್ವರಿ ನಗರದ ನಟ ದರ್ಶನ್ ಅವರ ನಿವಾಸದ ಸುತ್ತಮುತ್ತ ಅಭಿಮಾನಿಗಳು ದರ್ಶನ್ ಅವರ ಸುಮಾರು 300 ಭಿತ್ತಿಚಿತ್ರಗಳನ್ನು ಹಾಕಿ ಅಲಂಕರಿಸಿದ್ದಾರೆ. ಇನ್ನು ಇದರ ಜೊತೆಗೆ 39 ಕೆ.ಜಿಯ ಕೇಕ್ ಕೂಡ ಸಿದ್ಧವಾಗುತ್ತಿದೆ.[ದರ್ಶನ್ ಬಗ್ಗೆ ನಟ ಸೃಜನ್ ಮಾಡಿದ ಕಾಮೆಂಟ್ ಏನು?]

  ಇನ್ನು ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗಳು ಈಗಾಗಲೇ ಆರಂಭವಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಹಾಸನ, ನೆಲಮಂಗಲ, ತುಮಕೂರು, ತಿಪಟೂರು ಮುಂತಾದೆಡೆ ದರ್ಶನ್ ಅಭಿಮಾನಿಗಳ ಸಂಘ ಅನಾಥಾಶ್ರಮಗಳಿಗೆ ಭೇಟಿ ನೀಡಿ ಧರ್ಮಾರ್ಥ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದೆ.[ಗೋವಾದಲ್ಲಿ ಠಿಕಾಣಿ ಹೂಡಿದ ದರ್ಶನ್ ಮತ್ತು ಬಳಗ]

  ಅಖಿಲ ಕರ್ನಾಟಕ ತೂಗುದೀಪ ಅಭಿಮಾನಿಗಳ ಸಂಘದ ಅಡಿಯಲ್ಲಿ ಸುಮಾರು 29 ನೋಂದಿತ ಅಭಿಮಾನಿ ಸಂಘಗಳಿದ್ದು, ಸುಮಾರು 2000ಕ್ಕೂ ಹೆಚ್ಚು ಅನಧಿಕೃತ ಅಭಿಮಾನಿ ಸಂಘಗಳಿವೆ ಎಂದು ಅಭಿಮಾನಿ ಸಂಘದ ಸದಸ್ಯರಲ್ಲಿ ಒಬ್ಬರಾದ ಪುನೀತ್ ಅವರು ನುಡಿಯುತ್ತಾರೆ.[ಮತ್ತೆ ದರ್ಶನ್ ಜೊತೆ 'ಬುಲ್ ಬುಲ್' ಬೆಡಗಿ ರೋಮ್ಯಾನ್ಸ್]

  ಸದ್ಯಕ್ಕೆ 'ಜಗ್ಗುದಾದ' ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ದರ್ಶನ್ ಅವರು ನಾಳೆ ಅಭಿಮಾನಿಗಳ ಜೊತೆ ತಮ್ಮ ನಿವಾಸದ ಬಳಿ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳಲಿದ್ದಾರೆ.

  English summary
  Challenging Star Darshan is turning 39 years tomorrow Feb 16. The pre-birthday celebrations for the grand birthday of 'Box Office Sultan' has already been kick-started near Darshan's residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X