ಲಂಡನ್ ನಲ್ಲಿ ಶಿವಣ್ಣನನ್ನು ಭೇಟಿ ಮಾಡಿದ ಸಲ್ಮಾನ್ ಸಹೋದರ
ನಟ ಶಿವರಾಜ್ ಕುಮಾರ್ ಸದ್ಯ ಲಂಡನ್ ನಲ್ಲಿ ಇದ್ದಾರೆ. ಈ ವೇಳೆ ಅವರನ್ನು ಬಾಲಿವುಡ್ ಸ್ಟಾರ್ ಭೇಟಿ ಮಾಡಿದ್ದಾರೆ.
ಬಿ ಟೌನ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಲಂಡನ್ ನಲ್ಲಿ ಶಿವರಾಜ್ ಕುಮಾರ್ ರನ್ನು ಭೇಟಿ ಮಾಡಿದ್ದಾರೆ. ಇಬ್ಬರು ನಟರು ಕೆಲಕಾಲ ಜೊತೆಗೆ ಮಾತನಾಡಿ ಒಂದು ಫೋಟೋ ತೆಗೆದುಕೊಂಡಿದ್ದಾರೆ.
ಶಿವಣ್ಣನನ್ನು ಸೊಹೈಲ್ ಭೇಟಿ ಮಾಡಿದ ಫೋಟೋವನ್ನು ನಿರ್ಮಾಪಕ ಹಾಗೂ ಶಿವರಾಜ್ ಕುಮಾರ್ ಆಪ್ತ ಕೆ ಪಿ ಶ್ರೀಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೇರೆ ದೇಶದಲ್ಲಿ ನಮ್ಮ ಭಾರತೀಯರು ಸಿಕ್ಕರೆ ಖುಷಿ ಆಗುತ್ತದೆ. ಅದೇ ರೀತಿ ಶಿವರಾಜ್ ಕುಮಾರ್ ಹಾಗೂ ಸೊಹೈಲ್ ಕೂಡ ಸಂತಸ ಪಟ್ಟಿದ್ದಾರೆ. ಸಿಸಿಎಲ್ ಆಟದಿಂದ ಮತ್ತು ಸೈಮಾ ಅರ್ವಾಡ್ ಕಾರ್ಯಕ್ರಮದಿಂದ ಕನ್ನಡ ನಟರ ಪರಿಚಯವನ್ನು ಸೊಹೈಲ್ ಹೊಂದಿದ್ದಾರೆ.
ಅಂದಹಾಗೆ, ಭುಜದ ನೋವಿನಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಲಂಡನ್ ಆಸ್ಪತ್ರೆಗೆ ತೆರಳಿದ್ದಾರೆ. ಲಂಡನ್ ನಲ್ಲಿ ಇರುವ ಕಾರಣ ಈ ವರ್ಷ ಶಿವಣ್ಣ ಹುಟ್ಟುಹಬ್ಬ ಕೂಡ ಆಚರಣೆ ಮಾಡುತ್ತಿಲ್ಲ.
English summary
Bollywood actor Sohil Khan met kannada actor Shiva Rajkumar in london.


Click it and Unblock the Notifications