Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಸೆಂಬರ್ನಲ್ಲಿ ತೆರೆಗೆ ಬರಲಿರುವ ಸಿನಿಮಾಗಳಿವು: ಯಾವುದು ಹಿಟ್? ಯಾವುದು ಫ್ಲಾಫ್?
ಕೊರೊನಾ ಕಾರಣಕ್ಕೆ ಸತತ ಎರಡು ವರ್ಷ ಬಹುತೇಕ ಬಂದ್ ಆಗಿದ್ದ ಕನ್ನಡ ಚಿತ್ರರಂಗ ಇದೀಗ ನಿಧಾನಕ್ಕೆ ಗರಿಗೆದರುತ್ತಿದೆ. ಒಂದೊಂದಾಗಿ ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ.
ಸ್ಟಾರ್ ನಟರು ಸಹ ತಮ್ಮ ಸಿನಿಮಾವನ್ನು ಚಿತ್ರಮಂದಿರಗಳಿಗೆ ತರುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳು ತೆರೆಗೆ ಬರಬೇಕಿದೆ.
ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಸಾಕಷ್ಟು ಒಳ್ಳೆಯ ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್ ಅಂಥಹಾ ಸ್ಟಾರ್ ನಟರ ಸಿನಿಮಾಗಳು ಸಹ ಈ ಎರಡು ತಿಂಗಳ ಅವಧಿಯಲ್ಲಿ ಬಿಡುಗಡೆ ಆಗಿವೆ. 'ರತ್ನನ್ ಪ್ರಪಂಚ' ಸಿನಿಮಾ ನೇರ ಒಟಿಟಿಗೆ ಬಿಡುಗಡೆ ಆಗಿ ಹಿಟ್ ಸಹ ಎನಿಸಿಕೊಂಡಿದ್ದು ವಿಶೇಷ. ಇದೀಗ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಹೊಸ್ತಿಲಲ್ಲಿದ್ದು, ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.
ಶ್ರೀಮುರಳಿ ಸಿನಿಮಾದಿಂದ ಆರಂಭ
ಡಿಸೆಂಬರ್ ತಿಂಗಳ ಮೂರನೇ ತಾರೀಖಿಗೆ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್, ಪೋಸ್ಟರ್ನಿಂದ ಗಮನ ಸೆಳೆದಿರುವ ಈ ಸಿನಿಮಾವನ್ನು ಮಹೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಜನಪ್ರಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಈ ಸಿನಿಮಾ ಹಿಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿ. ಜಗಪತಿ ಬಾಬು ವಿಲನ್.
ಡಿಸೆಂಬರ್ 10 ಮೂರು ಪ್ರಮುಖ ಸಿನಿಮಾಗಳು ತೆರೆಗೆ
ಡಿಸೆಂಬರ್ 10ಕ್ಕೆ ಕನ್ನಡ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಆ ದಿನದಂದು ಮೂರು ಪ್ರಮುಖ ಕನ್ನಡ ಸಿನಿಮಾ ಬಿಡುಗಡೆ ಆಗಲಿವೆ. ಶರಣ್ ನಟನೆಯ 'ಅವತಾರ ಪುರುಷ', ಪ್ರೇಮ್, ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ರವಿಚಂದ್ರನ್ ನಟನೆಯ 'ದೃಶ್ಯ 2' ಸಿನಿಮಾ ಸಹ ಡಿಸೆಂಬರ್ 10ರಂದೇ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಕ್ರಿಸ್ಮಸ್ ರಜೆಗೆ ಇಬ್ಬರು ನಟರ ಪೈಪೋಟಿ
ಆ ಬಳಿಕ ಡಿಸೆಂಬರ್ 24ರಂದು ಎರಡು ಪ್ರಮುಖ ಸಿನಿಮಾಗಳು ಪರಸ್ಪರ ಸ್ಪರ್ಧೆಗೆ ಇಳಿಯಲಿವೆ. ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಎರಡೂ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಡಾಲಿ ಧನಂಜಯ್ ಇಬ್ಬರಿಗೂ ಪ್ರತ್ಯೇಕವಾದ ಅಭಿಮಾನಿ ಬಳಗವಿದ್ದು, ಎರಡೂ ಸಿನಿಮಾಗಳು ಭರ್ಜರಿ ಓಪನಿಂಗ್ ಅನ್ನೇ ಪಡೆದುಕೊಳ್ಳುವ ನಿರೀಕ್ಷೆ ಇದೆ.
ಪರಭಾಷೆಯ ಸಿನಿಮಾಗಳೂ ಬಿಡುಗಡೆ ಆಗಲಿವೆ
ಈ ಸಿನಿಮಾಗಳನ್ನು ಹೊರತುಪಡಿಸಿದರೆ ಕೆಲವು ಪರಭಾಷೆಯ ಪ್ರಮುಖ ಸಿನಿಮಾಗಳು ಕನ್ನಡದಲ್ಲಿಯೂ ಡಬ್ ಆಗಿ ಬಿಡುಗಡೆ ಆಗಲಿವೆ. ಅವುಗಳಲ್ಲಿ ಪ್ರಮುಖವಾದುದು ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ 'ಮರಕ್ಕರ್'. ಮೋಹನ್ಲಾಲ್ ನಟಿಸಿರುವ ಈ ಸಿನಿಮಾವು ಡಿಸೆಂಬರ್ 02ರಂದು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ಇನ್ನು ಡಿಸೆಂಬರ್ 17ಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ನಟನೆಯ 'ಪುಷ್ಪ' ಸಿನಿಮಾವು ಕನ್ನಡ, ತೆಲುಗು ಭಾಷೆಗಳಲ್ಲಿ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ರಣ್ವೀರ್ ಸಿಂಗ್ ನಟನೆಯ '83' ಡಿಸೆಂಬರ್ 24ಕ್ಕೆ ಬಿಡುಗಡೆ ಆದರೆ ನಾನಿ, ಸಾಯಿ ಪಲ್ಲವಿ, ಕನ್ನಡಗಿ ಕೃತಿ ಶೆಟ್ಟಿ ನಟನೆಯ 'ಶ್ಯಾಮ್ ಸಿಂಘ ರಾಯ್' ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆ ಆಗಲಿದೆ.