»   » 'ಕೆಲವು ನಾಯಕಿಯರು ವೇಶ್ಯೆಯರಿಗಿಂತ ಕೀಳು' ಎಂದ ನೇಹಾ

'ಕೆಲವು ನಾಯಕಿಯರು ವೇಶ್ಯೆಯರಿಗಿಂತ ಕೀಳು' ಎಂದ ನೇಹಾ

Posted By:
Subscribe to Filmibeat Kannada
ನೇಹಾ ಜ್ಞಾನವೇಲ್ ರಾಜಾ, ಕಾಸ್ಟ್ಯೂಮ್ ಡಿಸೈನರ್ ನಾಯಕಿಯರ ಬಗ್ಗೆ ಚೀಪ್ ಕಾಮೆಂಟ್ | Oneindia Kannada

ಸಿನಿಮಾರಂಗದಲ್ಲಿ 'ಕಾಸ್ಟಿಂಗ್ ಕೌಚ್' ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಹಾಗೂ ಬಾಲಿವುಡ್ ಇಂಡಸ್ಟ್ರಿಯ ಕೆಲವು ನಾಯಕಿಯರು ತಮಗಾದ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ನಟಿಯರು ಇಂಡಸ್ಟ್ರಿಯಲ್ಲಿ ಒಂದಲ್ಲ ಒಂದು ರೀತಿ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.

ಹೀಗಿರುವಾಗ, ಕಾಸ್ಟ್ಯೂಮ್ ಡಿಸೈನರ್ ನೇಹಾ ಅವರು ಬೆಚ್ಚಿಬೀಳಿಸುವ ಸಂಗತಿಯನ್ನ ಬಯಲು ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಕೆಲವು ನಟಿಯರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ನೇಹಾ ''ಕೆಲವು ಹೀರೋಯಿನ್ ಗಳು ವೇಶ್ಯೆಯರಿಗಿಂತ ಕಡೆ'' ಎಂದಿದ್ದಾರೆ.

ಇದು ಈಗ ಚಿತ್ರರಂಗದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ನೇಹಾ ಜ್ಞಾನವೇಲ್ ಅವರು ಯಾರ ಬಗ್ಗೆ ಹೇಳಲು ಹೊರಟಿದ್ದಾರೆ. ಅವರಿಗೆ ಯಾವ ನಾಯಕಿ ಏನೂ ಮಾಡಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಅಷ್ಟಕ್ಕೂ ಈ ನೇಹಾ ಯಾರು.? ಹೆಚ್ಚಿನ ಮಾಹಿತಿಗೆ ಮುಂದೆ ಓದಿ....

ತಮಿಳು ನಿರ್ಮಾಪಕನ ಪತ್ನಿಯಿಂದ ಆರೋಪ

ತಮಿಳು ಚಿತ್ರ ನಿರ್ಮಾಪಕ ಜ್ಞಾನವೇಲ್ ರಾಜ ಅವರ ಪತ್ನಿ ನೇಹಾ ಜ್ಞಾನವೇಲ್ ಅವರು ''ಕೆಲವು ನಟಿಯರು ವೇಶ್ಯೆಯರಿಗಿಂತ ಕಡೆ'' ಎಂದಿದ್ದಾರೆ. ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿರುವ ನೇಹಾ ಅವರ ಈ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಎಲ್ಲರಿಗೂ ಅನ್ವಯವಾಗಲ್ಲ. ಮದುವೆ ಆಗಿರುವ ಪುರುಷರ ಹಿಂದೆ ಬೀಳುವ ಕೆಲವರಿಗೆ ಮಾತ್ರ ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ.

ಮಹಿಳೆಯರು ಮಹಿಳೆರಿಗೇಕೆ ಶತ್ರು

ಯಾವುದೋ ವಿಷ್ಯದ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ನೇಹಾ ''ಮಹಿಳೆಯರು ಮಹಿಳೆಯರಿಗೇ ಯಾಕೆ ಶತ್ರುಗಳಾಗಿ ಬದಲಾಗುತ್ತಿದ್ದಾರೆ. ಅಡ್ಡದಾರಿ ಆಯ್ಕೆ ಮಾಡಿಕೊಳ್ಳುತ್ತಾ, ಅದೆಷ್ಟೋ ಸಂಸಾರಗಳಲ್ಲಿ ಹುಳಿ ಹಿಂಡಿವುದು ಸರಿಯೇ' ಎಂದು ಪ್ರಶ್ನಿಸಿದ್ದಾರೆ. ಆದ್ರೆ, ಇದು ಯಾರ ಬಗ್ಗೆ ಎಂಬುದು ಮಾತ್ರ ಕುತೂಹಲ ಕಾಡಿದೆ.

ನನಗೂ ನನ್ನ ಪತಿಗೂ ಭಿನ್ನಾಭಿಪ್ರಾಯವಿಲ್ಲ

ಇಷ್ಟೆಲ್ಲಾ ಟ್ವೀಟ್ ಮಾಡಿದ ಮೇಲೆ ಬಹುಶಃ ನೇಹಾ ಅವರ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮೇಲ್ನೊಟಕ್ಕೆ ಗೊತ್ತಾಗುತ್ತೆ. ಆದ್ರೆ, ಇದರ ಬಗ್ಗೆ ನೇಹಾ ಬೇರೆಯದ್ದೇ ಹೇಳುತ್ತಾರೆ. ''ನನಗೂ, ನನ್ನ ಪತಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸುತ್ತಲೂ ನಡೆಯುತ್ತಿರುವ ಕೆಲವು ಘಟನೆಗಳ ಬಗ್ಗೆ ನಾನು ಪ್ರತಿಕ್ರಿಯಿಸಿದೆ. ಪರ ಪುರುಷರ ಜೀವನದಲ್ಲಿ ಕೆಲವು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಅದರಿಂದ ಸಂಸಾರಗಳು ಹಾಳಾಗುತ್ತಿವೆ'' ಎಂದಿದ್ದಾರೆ.

ಟ್ವೀಟ್ ಡಿಲೀಟ್ ಮಾಡಿದ ನೇಹಾ

ನನಗೂ ನನ್ನ ಪತಿಗೂ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ನೀಡಿದ ನೇಹಾ ನಂತರ ಕೆಲವು ಪೋಸ್ಟ್ ಗಳನ್ನ ಡಿಲೀಟ್ ಮಾಡಿದ್ದಾರೆ. ಒಟ್ನಲ್ಲಿ ನೇಹಾ ಜ್ಞಾನವೇಲ್ ಅವರು ನೀಡಿರುವ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಇದರ ಮುಂದುವರೆದ ಭಾಗ ಏನಾಗಬಹುದು ಎಂದು ಕಾದುನೋಡಬೇಕಿದೆ.

English summary
Neha Gnanavel, popular costume designer tweeted some controversial statements about few actresses mentioning them as home wreckers, bed ready and sex workers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X