Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಸ್ಟೋರಿ ನೋಡಿದರೆ ಖಂಡಿತ 'ಶಾಕ್' ಆಗ್ತೀರಾ..!
''ಈ ಸ್ಟೋರಿ ನೋಡಿದರೆ 'ಶಾಕ್' ಆಗ್ತೀರಾ..! 'ಈ ವಿಡಿಯೋ ನೋಡಿದರೆ ಪಕ್ಕಾ 'ಶಾಕ್' ಆಗ್ತೀರಾ..!'' ಈ ರೀತಿಯ ಟೈಟಲ್ ಗಳನ್ನು ಕೇಳಿ ಕೇಳಿ ಶಾಕ್ ಎನ್ನುವ ಪದಕ್ಕೆ ಅರ್ಥವೇ ಹೋದಂತಾಗಿದೆ.
ಇತ್ತೀಚಿಗಂತೂ 'ಶಾಕ್' ಎನ್ನುವ ಪದ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಮತ್ತು ಅನವಶ್ಯಕವಾಗಿ ಬಳಕೆ ಆಗುತ್ತಿದೆ. ಕೆಲ ಯೂಟ್ಯೂಬ್ ಚಾನೆಲ್ ಗಳು ಯಾವುದೇ ಸುದ್ದಿ ಇದ್ದರೂ ಅದಕ್ಕೆ 'ನೀವು ಶಾಕ್ ಆಗ್ತೀರಾ' ಎಂಬ ಟೈಟಲ್ ಆಗಿ ನೀಡಿ ಅದನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ.
ಮೇಘನಾ ಗಾಂವ್ಕರ್ ಡ್ಯಾನ್ಸ್ ಮಾಡಿದ್ರೆ, ಶ್ವೇತಾ ಚೆಂಗಪ್ಪ ಫೇಸ್ ಬುಕ್ ಲೈವ್ ಗೆ ಬಂದ್ರೆ, ಜಗ್ಗೇಶ್ ಸೊಸೆ ನೋಡಿದ್ರೆ, ರಮ್ಯಾ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ ಅಂತ ಇರೋ ಬರೋ ಎಲ್ಲ ಸುದ್ದಿ (ಸಿಲ್ಲಿ ಸುದ್ದಿ)ಗಳಿಗೂ ಶಾಕ್ ಅಂತ ಹಾಕಿ ಹಾಕಿ ಕಡೆಗೆ ಇಂಟರ್ನೆಟ್ ಬಿಲ್ ನೋಡಿ ಜನರಿಗೆ ಶಾಕ್ ಆಗ್ತಿದೆ.
ಶೀರ್ಷಿಕೆಯಲ್ಲಿ 'ಶಾಕ್' ಇದ್ಯಲ್ಲ ಎಂಬ ಕಾರಣಕ್ಕೆ ವಿಡಿಯೋ ನೋಡಲು ಹೋದರೆ... ಜನರಿಗೆ ಖಾಲಿ ಪಾಲವ್... ಉಪ್ಪಿಲ್ಲದ ಉಪ್ಪಿನಕಾಯಿ... ಬೆಣ್ಣೆಯಿಲ್ಲದ ದಾವಣಗೆರೆ ದೋಸೆ ತಿಂದಂಥ ಫೀಲ್ ಬರುತ್ತೆ. ಕಡೆಗೆ ಇಂಟರ್ನೆಟ್ ಬಿಲ್ ಅಥವಾ ಬಾಕಿ ಇರುವ ಡೇಟಾ ನೋಡಿದ್ರೆ, ಜನರಿಗೆ ಕರೆಂಟ್ ನಿಂದ ಹೊಡೆಯುವ ಶಾಕ್ ಗಿಂತಲೂ ಹೆಚ್ಚಿನ ಶಾಕ್ ಆಗಿರುತ್ತೆ.
ತಮ್ಮ ವಿಡಿಯೋವನ್ನು ಹೆಚ್ಚು ಜನ ನೋಡಬೇಕು ಎಂಬ ಕಾರಣಕ್ಕೆ ಅವರು ಟೈಟಲ್ ನಲ್ಲಿ 'ಶಾಕ್' ಎಂದು ಹಾಕಿಬಿಡುತ್ತಾರೆ. ಆದರೆ ಈಗ ಜನ ಮಾತ್ರ 'ಶಾಕ್' ಎನ್ನುವ ಪದ ಕೇಳಿ ಕೇಳಿ ಸುಸ್ತಾಗಿ ಹೋಗಿದ್ದಾರೆ.