ಸಂಚಾರಿ ವಿಜಯ್‌ ಬಗ್ಗೆ ಹರಿದಾಡುತ್ತಿವೆ ಕೆಲವು ಸುಳ್ಳುಗಳು

ಸಂಚಾರಿ ವಿಜಯ್ ನಿಧನರಾಗಿ ಕೆಲವು ದಿನಗಳಷ್ಟೆ ಆಗಿವೆ. ವಿಜಯ್‌ರ ಅಗಲಿಕೆಯ ನೋವು ದೂರವಾಗಲು ಬಹುಕಾಲವೇ ಬೇಕಾಗಿದೆ.

Recommended Video

ಸಂಚಾರಿ ವಿಜಯ್ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿ‌ ಒಂದಾ..ಎರಡಾ.. | Filmibeat Kannada

ಸಂಚಾರಿ ವಿಜಯ್ ಬದುಕನ್ನು ಹತ್ತಿರದಿಂದ ನೋಡಿದವರು, ಪರಿಚಿತರು, ಸ್ನೇಹಿತರು ಅಗಲಿದ ನಟನೊಂದಿಗೆ ತಾವು ಕಳೆದ ಕ್ಷಣದ ಬಗ್ಗೆ, ವಿಜಯ್ ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಕೆಲವು ಸುಳ್ಳುಗಳು, ಅತಿರಂಜಿತ ಹೇಳಿಕೆಗಳು ಸಹ ಇವೆ.

'ಕಷ್ಟದಲ್ಲಿದ್ದರು' ಎಂದು ಹೇಳಿ ವ್ಯಕ್ತಿಯ ಬಗ್ಗೆ ಕರುಣೆ ಮೂಡಿಸುವ ಮಾದರಿಯೊಂದು ಇತ್ತೀಚೆಗೆ ಬಹುವಾಗಿ ಕಂಡು ಬರುತ್ತಿದೆ. ವಿಜಯ್‌ ಸಂದರ್ಭದಲ್ಲಿಯೂ ಇದನ್ನೇ ಕೆಲವರು ಮಾಡಿದ್ದಾರೆ.

ಸಂಚಾರಿ ವಿಜಯ್‌ ಕಾರು ಮಾರಿಬಿಟ್ಟಿದ್ದರು, ಸಂಚಾರಿ ವಿಜಯ್‌ ಬಳಿ ಬಾಡಿಗೆ ಕಟ್ಟಲು ಹಣ ಇರಲಿಲ್ಲ, ಸಂಚಾರಿ ವಿಜಯ್‌ ಹೆಲ್ಮೆಟ್ ತೊಡದೆ ಅಜಾಗರೂಕತೆಯಿಂದ ವರ್ತಿಸುತ್ತಿದ್ದರು. ಹೀಗೆ ಹಲವು 'ಆರೋಪ'ಗಳು ವಿಜಯ್‌ ಬಗ್ಗೆ ಮಾಡಲಾಗುತ್ತಿವೆ. ವಿಜಯ್‌ರ ಹತ್ತಿರದ ಗೆಳೆಯರಲ್ಲಿ ಒಬ್ಬರಾದ ಸಿನಿಮಾಕರ್ಮಿ ವೀರೇಂದ್ರ ಮಲ್ಲಣ್ಣ ಫೇಸ್‌ಬುಕ್‌ನಲ್ಲಿ ವಿಜಯ್‌ ವ್ಯಕ್ತಿತ್ವದ ಬಗ್ಗೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

''ವಿಜಯ್ ಕಾರು ಮಾರಿದ್ದು ಆರ್ಥಿಕ ಮುಗ್ಗಟ್ಟಿನಿಂದ ಅಲ್ಲ''

''ವಿಜಯ್ ಕಾರು ಮಾರಿದ್ದು ಆರ್ಥಿಕ ಮುಗ್ಗಟ್ಟಿನಿಂದ ಅಲ್ಲ''

''ವಿಜಯ್ ಬಳಿ ಕಾರು ಮಾರಿದ್ದು ನಿಜ ಆದರೆ ಆರ್ಥಿಕ ಮುಗ್ಗಟ್ಟಿನಿಂದ ಅವರು ಕಾರು ಮಾರಿರಲಿಲ್ಲ. ಅವರ ಬಳಿ ಇನ್ನೊಂದು ಕಾರಿತ್ತು. ವಿಜಯ್‌ ಬೈಕ್‌ಗಿಂತಲೂ ಹೆಚ್ಚಾಗಿ ಕಾರನ್ನೇ ಬಳಸುತ್ತಿದ್ದರು. ವಿಜಯ್‌ಗೆ ಯಾವುದೇ ಆರ್ಥಿಕ ಮುಗ್ಗಟ್ಟಿರಲಿಲ್ಲ. ದೊಡ್ಡ ಶ್ರೀಮಂತ ಅಲ್ಲದಿದ್ದರೂ ಸ್ಥಿತಿವಂತರೇ ಆಗಿದ್ದರು. ಆದರೆ ಹೃದಯದಿಂದ ದೊಡ್ಡ ಶ್ರೀಮಂತ ಆಗಿದ್ದರು'' ಎಂದಿದ್ದಾರೆ.

ವಿಜಯ್ ಬಾಡಿಗೆ ಮನೆಯಲ್ಲಿ ವಾಸವಿರಲಿಲ್ಲ: ವೀರೇಂದ್ರ ಮಲ್ಲಣ್ಣ

ವಿಜಯ್ ಬಾಡಿಗೆ ಮನೆಯಲ್ಲಿ ವಾಸವಿರಲಿಲ್ಲ: ವೀರೇಂದ್ರ ಮಲ್ಲಣ್ಣ

''ವಿಜಯ್‌ ಬಾಡಿಗೆ ಮನೆಯಲ್ಲಿ ವಾಸವಿರಲಿಲ್ಲ ಬದಲಿಗೆ ಅವರು ಸಹೋದರರೊಟ್ಟಿಗೆ ಸೇರಿ ಮೂರಂತಸ್ಥಿನ ಮನೆ ಕಟ್ಟಿಕೊಂಡಿದ್ದರು. ಸಹೋದರರ ಜೊತೆಗೆ ಒಟ್ಟಿಗೆ ವಾಸವಿದ್ದರು'' ಎಂದಿದ್ದಾರೆ. ಆ ಮೂಲಕ ವಿಜಯ್‌ಗೆ ಬಾಡಿಗೆ ಕಟ್ಟಲು ಸಹ ಹಣವಿರಲಿಲ್ಲ ಎಂಬುದು ಸುಳ್ಳು ಎಂದಿದ್ದಾರೆ.

ತಮಾಷೆಗೆ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ

ತಮಾಷೆಗೆ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ

ವಿಡಿಯೋ ಒಂದರಲ್ಲಿಯಂತೂ ''ಈಗಿನ ಹುಡುಗಿಯರು ಬ್ಯಾಂಕ್‌ ಬ್ಯಾಲೆನ್ಸ್ ನೋಡಿ ಮದುವೆ ಆಗುತ್ತಾರೆ ನನ್ನಲ್ಲಿ ಬ್ಯಾಂಕ್‌ ಬ್ಯಾಲೆನ್ಸ್ ಇಲ್ಲ ಎಂದಿದ್ದರು ವಿಜಯ್ ಹಾಗಾಗಿಯೇ ಅವರಿಗೆ ಮದುವೆ ಆಗಿರಲಿಲ್ಲ'' ಎಂದು ಯುವತಿಯೊಬ್ಬರು ಕಣ್ಣೀರು ಹಾಕಿಕೊಂಡು ಹೇಳುತ್ತಿರುವ ವಿಡಿಯೋ ಹರಿದಾಡುತ್ತಿದೆ. ಆದರೆ ವಿಜಯ್‌ ಆ ವಿಷಯವನ್ನು ತಮಾಷೆಯಾಗಿ ಹೇಳಿದ್ದರೇ ಹೊರತು ಗಂಭೀರವಾಗಿ ಅಲ್ಲ ಎಂಬುದು ಆ ಯುವತಿಗೆ ಗೊತ್ತಾಗಿಲ್ಲ.

''ಹಿಂದಿನ ಸೀಟಿನಲ್ಲೂ ಕೂತರು ಬೆಲ್ಟ್ ಹಾಕಿಕೊಳ್ಳುತ್ತಿದ್ದರು''

''ಹಿಂದಿನ ಸೀಟಿನಲ್ಲೂ ಕೂತರು ಬೆಲ್ಟ್ ಹಾಕಿಕೊಳ್ಳುತ್ತಿದ್ದರು''

ಇನ್ನು ವಿಜಯ್‌ ಹೆಲ್ಮೆಟ್ ಹಾಕದೆ ಬೇಜವಾಬ್ದಾರಿಯಿಂದ ಮೆರೆದು ಬಿಟ್ಟರು ಎಂದು ಕೆಲವು ಹಿರಿಯ ನಟರೂ ಸಹ ಹೇಳಿದ್ದಾರೆ. ವೀರೇಂದ್ರ ಮಲ್ಲಣ್ಣ ಬರೆದುಕೊಂಡಿರುವಂತೆ, ವಿಜಯ್‌ ಬಹಳ ಜವಾಬ್ದಾರಿಯುತ ವ್ಯಕ್ತಿ ಆಗಿದ್ದರು. ''ವಿಜಯ್ ಎಂದೂ ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಿದ್ದನ್ನು ನಾನು ಕಂಡಿಲ್ಲ. ವೇಗವೆಂದರೆ ವಿಜಯ್‌ಗೆ ಬಹಳ ಭಯ. ಸುರಕ್ಷತೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳುತ್ತಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ಕೂತರೂ ಮರೆಯದೇ ಸೀಟ್‌ಬೆಲ್ಟ್ ಧರಿಸುತ್ತಿದ್ದರು. ಆದರೆ ಅಂದು ಹೆಲ್ಮೆಟ್ ಧರಿಸದೇ ತಪ್ಪು ಮಾಡಿಬಿಟ್ಟರು'' ಎಂದು ಬೇಸರಿಸಿಕೊಂಡಿದ್ದಾರೆ ವೀರೇಂದ್ರ ಮಲ್ಲಣ್ಣ.

More from Filmibeat

English summary
Some lies about Sanchari Vijay's personal life spreading in social media. Some of his close friends clarified about Vijay's personal life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X