RR ನಗರ ಚುನಾವಣೆ: ಯಾವ ಸ್ಟಾರ್ ಮತದಾನ ಮಾಡಿದ್ರು, ಯಾರು ವೋಟ್ ಹಾಕಿಲ್ಲ?
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳು ಇಂದು ಮತದಾನದ ಹಕ್ಕು ಚಲಾಯಿಸಿದ್ದಾರೆ. ಆರ್ ಆರ್ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ನಟ-ನಟಿಯರು ವಾಸವಿದ್ದು, ಇಂದು ಬೆಳಗ್ಗಿನಿಂದಲೂ ಮತಗಟ್ಟೆಗಳ ಹೆಜ್ಜೆಯಿಟ್ಟು ಮತದಾನ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಅಮೂಲ್ಯ, ನೆನಪಿರಲಿ ಪ್ರೇಮ್, ಹಿರಿಯ ನಟ ಅವಿನಾಶ್, ಕಾರುಣ್ಯ ರಾಮ್ ಸೇರಿದಂತೆ ಹಲವು ಕಲಾವಿದರು ಮತದಾನ ಮಾಡಿದ್ರು. ಕೆಲವು ಸ್ಟಾರ್‌ಗಳು ಕಾರಣಾಂತರಗಳಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಹಾಗಾದ್ರೆ, ಆರ್ ಆರ್ ನಗರದಲ್ಲಿಂದು ಯಾರೆಲ್ಲ ವೋಟ್ ಹಾಕಿದ್ದಾರೆ ಎಂದು ಚಿತ್ರಗಳ ಸಮೇತ ನೋಡೋಣ ಬನ್ನಿ...ಮುಂದೆ ಓದಿ.....

ಮೌಂಟ್ ಕಾರ್ಮೆಲ್ ಮತಗಟ್ಟೆಯಲ್ಲಿ ದರ್ಶನ್ ಮತದಾನ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದು ಆರ್ ಆರ್ ನಗರದ ಮೌಂಟ್ ಕಾರ್ಮೆಲ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಮತಗಟ್ಟೆ ಬಳಿ ಬಂದ ದರ್ಶನ್ ಅವರು, ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಕುಟುಂಬ ಸಮೇತ ಅಮೂಲ್ಯ ಮತದಾನ
ನಟಿ ಅಮೂಲ್ಯ ಅವರು ಇಂದು ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಪತಿ ಜಗದೀಶ್ ಹಾಗೂ ಅತ್ತೆ-ಮಾವ ಅವರೊಂದಿಗೆ ಮತಗಟ್ಟೆಗೆ ಆಗಮಿಸಿದ ಅಮೂಲ್ಯ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ನಂತರ ಮಾಧ್ಯಮದವರ ಬಳಿ ಮಾತನಾಡಿದ ಅಮೂಲ್ಯ ''ಎಲ್ಲರೂ ಮತದಾನ ಹಕ್ಕನ್ನು ಚಲಾಯಿಸಿ'' ಎಂದು ವಿನಂತಿಸಿದರು.

ಕಾರುಣ್ಯ ರಾಮ್ ಮತ್ತು ಸಹೋದರಿ
ಕನ್ನಡ ನಟಿ ಕಾರುಣ್ಯ ರಾಮ್ ಮತ್ತು ಸಹೋದರಿ ಸಮೃದ್ಧಿ ರಾಮ್ ಇಂದು ಆರ್ ಆರ್ ನಗರದಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮದವರು ಜೊತೆ ಮಾತನಾಡಿದ ನಟಿ ''ವೋಟ್ ಮಾಡುವುದು ಪ್ರತಿಯೊಬ್ಬರು ಹಕ್ಕು, ನಿಮ್ಮ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ಮತಕ್ಕೆ ಅಮೂಲ್ಯ'' ಎಂದು ಹೇಳಿದರು.

ಪ್ರೇಮ್ ದಂಪತಿ
ನಟ ನೆನಪಿರಲಿ ಪ್ರೇಮ್ ನಾಗರಭಾವಿಯಲ್ಲಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಪತ್ನಿಯ ಜೊತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಅಭಿಮಾನಿಗಳು ಸಹ ಮತದಾನ ಮಾಡುವಂತೆ ಮನವಿ ಮಾಡಿದರು. 'ನಾನು ನನ್ನ ಕುಟುಂಬದೊಂದಿಗೆ ಮತ ಚಲಾಯಿಸಿದ್ದೇನೆ. ನಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ನೀವು ಮತ ಚಲಾಯಿಸಿ. ಪ್ರಜಾ ಪ್ರಭುತ್ವ ಉಳಿಸಿ' ಎಂದು ವಿನಂತಿಸಿದ್ದಾರೆ.

ಎಸ್ ನಾರಾಯಣ್ ಕುಟುಂಬ
ಆರ್. ಆರ್. ನಗರ ವ್ಯಾಪ್ತಿಯ ಸೆಂಟ್ ಜೋಸೆಫ್ ಶಾಲೆಯಲ್ಲಿ ನಟ-ನಿರ್ದೇಶಕ ಎಸ್. ನಾರಾಯಣ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಎಸ್ ನಾರಾಯಣ್, ಪತ್ನಿ ಹಾಗೂ ಇಬ್ಬರು ಮಕ್ಕಳು ವೋಟ್ ಹಾಕಿದ್ದಾರೆ.

ಹಿರಿಯ ನಟ ಅವಿನಾಶ್
ಕನ್ನಡದ ಹಿರಿಯ ನಟ ಅವಿನಾಶ್ ಅವರು ಆರ್ ಆರ್ ನಗರದಲ್ಲಿ ಇಂದು ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವಿನಾಶ್ ''ಕೊರೊನಾ ಕುರಿತು ಎಲ್ಲ ಮುಂಜಾಗೃತೆ ತೆಗೆದುಕೊಳ್ಳಲಾಗಿದೆ. ವೋಟ್ ಹಾಕಿಲ್ಲ ಅಂದ್ರೆ ದುರಂತ. ಜನರು ಜವಾಬ್ದಾರಿ ಮರೆಯಬಾರದು. ಪ್ರಜ್ಞಾವಂತರು ಮಾತನಾಡುವುದು ಬಿಟ್ಟು ವೋಟ್ ಮಾಡಿ'' ಎಂದು ಹೇಳಿದ್ದಾರೆ.

ದಿಗಂತ್ ಮತದಾನ
ಯುವ ನಟ ದಿಗಂತ್ ಸಹ ಇಂದು ಆರ್ ಆರ್ ನಗರದಲ್ಲಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ''ಎಲೆಕ್ಷನ್ ಆಗಲಿ, ಬೈ ಎಲೆಕ್ಷನ್ ಆಗಲಿ ನಮ್ಮ ನಾಯಕರನ್ನು ಮಾಡಲು ನಾವು ಮತದಾನ ಮಾಡುವುದು ನಮ್ಮ ಕರ್ತವ್ಯ'' ಎಂದು ದಿಗಂತ್ ಅಭಿಪ್ರಾಯ ಪಟ್ಟರು.

ಹಾಸ್ಯ ನಟ ಪಿ.ಡಿ ಸತೀಶ್
ಕನ್ನಡದ ಹಾಸ್ಯ ನಟ ಪಿ.ಡಿ ಸತೀಶ್ ಅವರ ಸಹ ದಂಪತಿ ಸಮೇತ ಆರ್ ಆರ್ ನಗರದಲ್ಲಿ ತಮ್ಮ ಮತದಾನ ಮಾಡಿದ್ದಾರೆ.
Recommended Video

ಗಣೇಶ್ ಮತ ಹಾಕುವುದು ಅನುಮಾನ!
ಗೋಲ್ಡನ್ ಸ್ಟಾರ್ ಗಣೇಶ್ ಸಹ ಆರ್ ಆರ್ ನಗರ ವ್ಯಾಪ್ತಿಯಲ್ಲಿಯೇ ವಾಸವಾಗಿದ್ದಾರೆ. ಚಿತ್ರೀಕರಣ ನಿಮಿತ್ತ ಹೊರಗೆ ಹೋಗಿರುವುದರಿಂದ ಉಪಚುನಾವಣೆಯಲ್ಲಿ ಮತ ಹಾಕುವುದು ಅನುಮಾನ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ಗಣೇಶ್ ಮತದಾನ ಮಾಡಿಲ್ಲ.


Click it and Unblock the Notifications











