For Quick Alerts
  ALLOW NOTIFICATIONS  
  For Daily Alerts

  ರಸ್ತೆ ಬದಿ ಅನಾಥವಾದ ಕಲಾವಿದೆ ಜಯಮ್ಮನ ಮೃತದೇಹ!

  |

  ನಿನ್ನೆಯಷ್ಟೆ ಅಸುನೀಗಿದ ಕನ್ನಡದ ಹಿರಿಯ ನಟಿ ಕಲಾವಿದೆ ಬಿ ಜಯ ಅವರ ಮೃತದೇಹವನ್ನು ರಸ್ತೆ ಬದಿ ಕೊಳಕು ಪ್ರದೇಶದಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅನಾಥ ವಾಗಿದೆ ಹಿರಿಯ ನಟಿ ಜಯ ಮೃತದೇಹ | B Jayamma | Filmibeat Kannada

  ಕನ್ನಡ ಸಿನಿಮಾರಂಗದಲ್ಲಿ ಹಲವು ದಶಕಗಳಿಂದಲೂ ನಟಿಸಿರುವ ಬಿ.ಜಯ ಅವರು ನಿನ್ನೆ ವಯೋ ಸಹಜ ಸಮಸ್ಯೆಯಿಂದ ಮೃತರಾದರು. ಅವರ ಅಂತ್ಯಕ್ರಿಯೆಯನ್ನು ಇಂದು ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಆದರೆ ಜಯಮ್ಮರವರ ಮೃತದೇಹವನ್ನು ರಸ್ತೆ ಬದಿ ಕೊಳಕು ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

  ರಸ್ತೆ ಬದಿಯಲ್ಲಿ ಕಸದ ರಾಶಿಯ ಬದಿಯಲ್ಲಿ ಜಯಮ್ಮನವರ ಶವ ಇರಿಸಲಾಗಿರುವ ವಿಡಿಯೋ ಚಿತ್ರೀಕರಣವನ್ನು ಕೆಲವರು ಮಾಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ, 'ನೋಡಿ ಕಲಾವಿದೆಗೆ ಬಂದಿರುವ ಸ್ಥಿತಿ ನೋಡಿ. ಸ್ಯಾಂಡಲ್‌ವುಡ್ ನಟರೆಲ್ಲಾ ಎಲ್ಲಿದ್ದೀರಿ. ಜೋಡೆತ್ತುಗಳು ಎಲ್ಲಿದ್ದಾವೇ? ಹಿರಿಯ ಕಲಾವಿದೆಗೆ ಎಂಥಾ ಸ್ಥಿತಿ ಬಂದಿದೆ ನೋಡಿ. ಸ್ಯಾಂಡಲ್‌ವುಡ್ ಮಂದಿ ಎಲ್ಲಿದ್ದೀರಿ ಬನ್ನಿ ಹಿರಿಯ ಕಲಾವಿದೆಯ ಅಂತಿಮ ಸಂಸ್ಕಾರ ಮಾಡಿ ಬನ್ನಿ' ಎಂದು ಕರೆಯುತ್ತಿದ್ದಾರೆ.

  'ಕುಟುಂಬದವರಿಗೆ ಆರ್ಥಿಕ ಸಂಕಷ್ಟವಿದೆ'

  'ಕುಟುಂಬದವರಿಗೆ ಆರ್ಥಿಕ ಸಂಕಷ್ಟವಿದೆ'

  ಜಯಮ್ಮನವರ ಮೃತದೇಹವನ್ನು ಅನಾಥವಾಗಿ ರಸ್ತೆ ಬದಿ ಇಡಲಾಗಿದೆ. ಅವರ ಕುಟುಂಬದವರು ಆರ್ಥಿಕ ಸಮಸ್ಯೆಯಲ್ಲಿದ್ದಾರೆ ಹಾಗಾಗಿ ಜಯಮ್ಮನವರ ಮೃತದೇಹವನ್ನು ಹೀಗೆ ರಸ್ತೆ ಬದಿಯಲ್ಲಿ ಅನಾಥವಾಗಿ ಇಟ್ಟು ಹೋಗಿದ್ದಾರೆ ಎಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೇಳುತ್ತಿರುವುದು ದಾಖಲಾಗಿದೆ.

  'ಸಣ್ಣ ಕಲಾವಿದರೆಂದರೆ ನಿರ್ಲಕ್ಷ್ಯ'

  'ಸಣ್ಣ ಕಲಾವಿದರೆಂದರೆ ನಿರ್ಲಕ್ಷ್ಯ'

  'ಯಾರೋ ದೊಡ್ಡವರು ಸತ್ತಾಗ ಕೆಂಪು ಹಾಸು ಹಾಕಿ ಅದ್ಧೂರಿಯಾಗಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಚಿತ್ರರಂಗದ ಹಿರಿಯ ನಟಿಯೊಬ್ಬರು ಕಾಲವಾಗಿದ್ದಾರೆ ಆದರೆ ಯಾರೂ ಇತ್ತ ನೋಡುವವರು ಸಹ ಇಲ್ಲ. ರುದ್ರಭೂಮಿಯಲ್ಲಿ ಶಾಸಕ ಜಮೀರ್ ಅಹ್ಮದ್ ಅಕ್ಕಿ ವಿತರಿಸುತ್ತಿದ್ದಾರೆ ಎಂದು ಅಲ್ಲ ಮೀಡೀಯಾದವರು ಅಲ್ಲಿಯೇ ಇದ್ದಾರೆ ಕರೆದರೂ ಇಲ್ಲಿಗೆ ಯಾರೂ ಬಂದಿಲ್ಲ' ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

  ಅತ್ಯ ಸಂಸ್ಕಾರದ ಚಿತ್ರಗಳು ಸಹ ವೈರಲ್ ಆಗಿವೆ

  ಅತ್ಯ ಸಂಸ್ಕಾರದ ಚಿತ್ರಗಳು ಸಹ ವೈರಲ್ ಆಗಿವೆ

  ಇನ್ನೂ ಕೆಲವು ಚಿತ್ರಗಳು ಸಹ ವೈರಲ್ ಆಗಿದ್ದು, ಅವು ಚಿತ್ರದಲ್ಲಿ ಜಯಮ್ಮನವರ ಅಂತ್ಯಸಂಸ್ಕಾರ ಮಾಡುತ್ತಿರುವ ಚಿತ್ರಗಳಾಗಿವೆ. ವಿಡಿಯೋದಲ್ಲಿ 'ಜಯಮ್ಮನವರನ್ನು ಅನಾಥರನ್ನಾಗಿ ಮಾಡಿದ್ದಾರೆ' ಎಂದು ಅಂಗಲಾಚಿದ್ದ ವ್ಯಕ್ತಿ ಆ ಚಿತ್ರದಲ್ಲಿಯೂ ಇದ್ದಾನೆ. ಮಹಿಳೆಯೊಬ್ಬರು ಜಯಮ್ಮನವರ ಮೃತದೇಹಕ್ಕೆ ಕೈ ಮುಗಿಯುತ್ತಿರುವ ದೃಶ್ಯವೂ ಚಿತ್ರದಲ್ಲಿದೆ. ಸಾರ್ವಜನಿಕರೇ ಸೇರಿ ಜಯಮ್ಮನ ಅಂತ್ಯಸಂಸ್ಕಾರ ಮಾಡಿದ್ದಾರೆಯೇ ಎಂಬ ಅನುಮಾನವೂ ಚಿತ್ರದಿಂದ ಮೂಡುತ್ತಿದೆ.

  ಸ್ಪಷ್ಟನೆ ಕೊಟ್ಟಿರುವ ಕುಟುಂಬದವರು

  ಸ್ಪಷ್ಟನೆ ಕೊಟ್ಟಿರುವ ಕುಟುಂಬದವರು

  ಆದರೆ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಯಮ್ಮನವರ ತಮ್ಮನ ಮಗಳು, 'ಜಯಮ್ಮನವರ ಮೃತದೇಹವನ್ನು ಅನಾಥವಾಗಿ ಬಿಟ್ಟಿರಲಿಲ್ಲ. ನಾವು ಪೂಜೆ ಮಾಡಿಕೊಳ್ಳುತ್ತಿದ್ದೆವು ಆಗ ಯಾರೋ ಕೆಲವರು ಹೀಗೆ ವಿಡಿಯೋ ಮಾಡಿಕೊಂಡಿದ್ದಾರೆ. ಅದನ್ನು ಟಿವಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಕುಟುಂಬದವರೇ ಶಾಸ್ತ್ರೋಪ್ತವಾಗಿ ಜಯಮ್ಮನವರ ಅಂತಿಮ ಸಂಸ್ಕಾರ ನೆರವೇರಿಸಿದ್ದೇವೆ ಎಂದಿದ್ದಾರೆ.

  English summary
  A video getting viral in the video some people alleging that senior artist B Jaya's carcass abandoned on the road by her family members.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X