ಖಾಸಗಿ ವಿಡಿಯೊ ಲೀಕ್ ಬೆದರಿಕೆ ಹಾಕಿದ್ದು ಸಿನಿಮಾದವ್ರೇ, ಯಾರಂತನೂ ಗೊತ್ತಿದೆ ಎಂದು ಬಾಯಿಬಿಟ್ಟ ಸುದೀಪ್!

ಇಂದು ( ಏಪ್ರಿಲ್ 5 ) ಸುದ್ದಿ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣ ಎಲ್ಲಿ ನೋಡಿದರೂ ಸಹ ಕಿಚ್ಚ ಸುದೀಪ್ ಅವರದ್ದೇ ಸುದ್ದಿಗಳು. ನಿನ್ನೆಯಿಂದಲೇ ಸುದೀಪ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡಿದ್ದವು. ಇನ್ನು ಪ್ರತಿ ಬಾರಿಯೂ ಎಲೆಕ್ಷನ್ ಸಮಯ ಬಂದಾಗ ಈ ರೀತಿ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈ ಬಾರಿ ಸುದೀಪ್ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು.

ಇನ್ನು ಈ ಸುದ್ದಿಯನ್ನು ಕಂಡು ಹಲವರು ಹಲವು ಬಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದರು. ಅದರಲ್ಲೂ ಅಭಿಮಾನಿಗಳು ಸುದೀಪ್ ಅವರಲ್ಲಿ ರಾಜಕೀಯಕ್ಕೆ ಬರಬೇಡಿ ಎಂದು ಮನವಿ ಮಾಡಿ ಟ್ವಿಟರ್ ಟ್ರೆಂಡ್ ಮಾಡಿದ್ದರು. ಒಂದೆಡೆ ಅಭಿಮಾನಿಗಳು ರಾಜಕೀಯಕ್ಕೆ ಬರಬೇಡಿ ಎಂದು ಮನವಿ ಮಾಡುತ್ತಿದ್ದರೆ ಮತ್ತೊಂದೆಡೆ ಸುದೀಪ್ ಅವರಿಗೆ ಬಂದ ಪತ್ರವೊಂದು ವೈರಲ್ ಆಗಿತ್ತು. ಹೌದು, ಸುದೀಪ್ ಮನೆಗೆ ಬೆದರಿಕೆ ಪತ್ರವೊಂದು ಬಂದಿತ್ತು.

Some people from Film Industry are only sent me threatening letter and I know them says Kichcha Suddep

ಇದರಲ್ಲಿ ಸುದೀಪ್ ಅವರನ್ನು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಲಾಗಿತ್ತು ಹಾಗೂ ನಿಮ್ಮ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ಇದು ಸುದೀಪ್ ಅಭಿಮಾನಿಗಳಲ್ಲಿ ಕೋಪ ಹಾಗೂ ಆತಂಕವನ್ನು ಉಂಟು ಮಾಡಿತ್ತು. ಈ ಕುರಿತು ಇದೀಗ ಮಾಧ್ಯಮದವರ ಜತೆ ಮಾತನಾಡಿದ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಹೌದು, ತಾವು ರಾಜಕೀಯಕ್ಕೆ ಬರುತ್ತಿರುವ ಕುರಿತು ಹರಿದಾಡಿದ್ದ ಸುದ್ದಿಗಳ ಕುರಿತು ತಮ್ಮ ನಿವಾಸದ ಎದುರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸುದೀಪ್ ನಾನು ರಾಜಕೀಯಕ್ಕೆ ಸೇರುವುದಿಲ್ಲ, ನನಗೆ ಆಸಕ್ತಿಯೂ ಸಹ ಇಲ್ಲ ಎಂದು ಖಡಕ್ ಆಗಿ ಹೇಳಿದರು. ಅಲ್ಲದೇ ತಾವು ತಮ್ಮ ಆಪ್ತ ಜಾಕ್ ಮಂಜುಗೆ ಟಿಕೆಟ್ ಕೇಳಿದ್ದಾರೆ ಎಂಬುದರ ಬಗ್ಗೆಯೂ ಸಹ ಮಾತನಾಡಿದ ಸುದೀಪ್ ನಾನು ಯಾರ ಬಳಿಯೂ ಟಿಕೆಟ್ ಕೇಳಿಲ್ಲ, ನಾನು ಅಂತಹ ಮಟ್ಟಕ್ಕೆ ಇಳಿಯುವವನೂ ಸಹ ಅಲ್ಲ ಎಂದು ತಿಳಿಸಿದರು. ಈ ಮೂಲಕ ತಾನು ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನು ಸುದೀಪ್ ಖಚಿತಪಡಿಸಿದ್ದರು.

ಇನ್ನು ಇದೇ ವೇಳೆ ತಮಗೆ ಬಂದಿದ್ದ ಬೆದರಿಕೆ ಪತ್ರದ ಬಗ್ಗೆಯೂ ಸಹ ಮಾತನಾಡಿದ ಕಿಚ್ಚ ಸುದೀಪ್ ಆ ಪತ್ರಕ್ಕೂ ಹಾಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು. "ಅಡ್ರೆಸ್ ಗೊತ್ತಿದೆ. ಲೆಟರ್ ಹಾಕಿದ್ದಾರೆ, ಪೋಸ್ಟ್ ಮಾಡಿದ್ದಾರೆ ಬರುತ್ತೆ ಲೆಟರ್. ಆ ವಿಚಾರನೂ ಹೊರಗಡೆ ಬರುತ್ತೆ. ತೆಗಿತೀನಿ ಹೊರಗಡೆ, ತೆಗೆಯದೇ ಅಂತೂ ಸುಮ್ಮನಿರಲ್ಲ. ಚಿತ್ರರಂಗದಲ್ಲಿ ಕೆಲವರು ಆಗುವವರು ಇರುತ್ತಾರೆ, ಕೆಲವರು ಆಗದೇ ಇರುವವರು ಇರುತ್ತಾರೆ. ಹಲವಾರು ಜನರ ಪ್ರೀತಿ ಸಂಪಾದನೆ ಮಾಡಿದವನು ನಾನು. ಅದರ ಬಗ್ಗೆ ಮಾತಾಡ್ತೀನಿ. ಯಾರೋ ಮಾಡಿರುವ ಲೆಟರ್ ಕುರಿತು ಯಾವ ರೀತಿ ಉತ್ತರ ಕೊಡಬೇಕೋ ಕೊಟ್ಟೇ ಕೊಡ್ತೀನಿ. ಕೊಡದೇ ಅಂತೂ ಸುಮ್ಮನೆ ಇರುವುದಿಲ್ಲ. ಏಕೆಂದರೆ ಅದು ಬೇರೆಯವರಿಗೂ ಒಂದು ಪಾಠ ಆಗಬೇಕಾಗುತ್ತೆ. ಅಡ್ರೆಸ್ ಗೊತ್ತಿದೆ ಅಂತ ಲೆಟರ್ ಹಾಕೋ ಕೆಲಸವನ್ನು ಯಾರು ಬೇಕಾದ್ರೂ ಕೂತ್ಕೊಂಡು ಮಾಡ್ತಾರೆ" ಎಂದು ಹೇಳಿಕೆ ನೀಡಿದರು.

Some people from Film Industry are only sent me threatening letter and I know them says Kichcha Suddep

ಇನ್ನೂ ಮುಂದುವರಿದು ಮಾತನಾಡಿದ ಸುದೀಪ್ ಇದು ರಾಜಕೀಯದವರ ಟಾರ್ಗೆಟ್ಟಾ ಎಂಬ ಪ್ರಶ್ನೆಗೆ ಉತ್ತರಿಸಿದರು. "100% ಹೇಳ್ತೀನಿ ಇದಕ್ಕೂ ರಾಜಕೀಯದವರಿಗೂ ಯಾವುದೇ ಸಂಬಂಧವಿಲ್ಲ, ನಮ್ಮ ಚಿತ್ರರಂಗದಲ್ಲಿರುವ ಕೆಲವರ ಕೆಲಸ ಇದು. ಅದು ಕೂಡ ಯಾರು ಅಂತಾನೂ ನನಗೆ ಗೊತ್ತು. ಆದರೆ ಇವತ್ತು ಅದನ್ನು ನಾನು ಹೇಳಲ್ಲ. ಯಾಕಂದ್ರೆ ಅದು ಯಾವ ರೀತಿ ಬರಬೇಕೋ ಅದೇ ರೀತಿ ಬರಬೇಕು. ಒಂದು ತಿಳ್ಕೊಳಿ, ನಾನು ಯಾವುದಕ್ಕೂ ಹೆದರೋನಲ್ಲ" ಎಂದು ಮಾತನಾಡಿದರು. ಈ ಮೂಲಕ ಚಿತ್ರರಂಗದವರೇ ಯಾರೋ ತನ್ನ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಸುದೀಪ್ ತಿಳಿಸಿದರು.

More from Filmibeat

English summary
Some people from Film Industry are only sent me threatening letter and I know them says Kichcha Suddep. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X