twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ಕಾಲೆಳೆಯಲು ದೊಡ್ಡ ಕುತಂತ್ರ ನಡೆದಿದೆ: ಜಾಕ್ ಮಂಜು

    |

    'ಕೋಟಿಗೊಬ್ಬ 3' ಬಿಡುಗಡೆ ಗೊಂದಲದ ಬಗ್ಗೆ ಸ್ವತಃ ನಟ ಸುದೀಪ್ ಅನುಮಾನ ವ್ಯಕ್ತಪಡಿಸಿದ್ದರು. ''ಈ ಕೃತ್ಯ ಯಾರು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ'' ಎಂದು ಹೇಳಿದ್ದರು. ಸೂರಪ್ಪ ಬಾಬು ಸಹ ''ಕೆಲವರಿಂದ ನನಗೆ ಸಮಸ್ಯೆ ಆಯಿತು'' ಎಂದರು. ಇದೀಗ ನಿರ್ಮಾಪಕ, ವಿತರಕರೂ ಆಗಿರುವ ಜಾಕ್ ಮಂಜು 'ಕೋಟಿಗೊಬ್ಬ 3' ಸಿನಿಮಾ ಬಗ್ಗೆ ಮಾತನಾಡಿದ್ದು, ಕಿಚ್ಚ ಸುದೀಪ್ ಕಾಲೆಳೆಯಲು ಚಿತ್ರರಂಗದ ಕೆಲವರು ಕಾಯುತ್ತಿದ್ದಾರೆ ಎಂದಿದ್ದಾರೆ.

    ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜಾಕ್ ಮಂಜು, ''ಸುದೀಪ್ ವಿರುದ್ಧ ದೊಡ್ಡ ಕುತಂತ್ರ ನಡೆಯುತ್ತಲೇ ಇದೆ. ಈ ಬಾರಿ ಅವರು ಗೆದ್ದಿದ್ದಾರೆ ಎಂದೇ ಹೇಳಬೇಕು. ಇಂಥಹದ್ದೊಂದು ಕುತಂತ್ರ ನಡೆಯುತ್ತಿದೆ ಎಂಬುದನ್ನು ನಮಗೆ ಊಹಿಸಲು ಸಾಧ್ಯವಾಗಲಿಲ್ಲ. ಆದರೆ ನಾವೂ ಸಹ ಸುಮ್ಮನೆ ಕೂರುವುದಿಲ್ಲ. ಆದರೆ ಅವರಂತೆ ಬೇರೆಯವರಿಗೆ ತೊಂದರೆ ಕೊಡುವ ಕೆಲಸವನ್ನು ನಾವು ಮಾಡುವುದಿಲ್ಲ'' ಎಂದಿದ್ದಾರೆ.

    ''ಯಾರು ಎತ್ತರಕ್ಕೆ ಬೆಳೆಯುತ್ತಿರುತ್ತಾರೊ ಅವರ ಕಾಲೆಳೆಯಬೇಕು ಎಂದೇ ಗಾಂಧಿನಗರದಲ್ಲಿ ಕೆಲವರು ಕಾಯುತ್ತಿರುತ್ತಾರೆ. ಯಾರೊ ಕೆಲವರಿಗೆ ಸುದೀಪ್ ಅವರ ಕಾಲ್ ಶೀಟ್ ಸಿಕ್ಕಿರುವುದಿಲ್ಲ. ಅವರ ಸಿನಿಮಾ ಕಾರ್ಯಕ್ರಮಕ್ಕೆ ಸುದೀಪ್ ಹೋಗಲು ಸಾಧ್ಯವಾಗಿರುವುದಿಲ್ಲ. ನನಗೆ ಡೇಟ್ಸ್ ಕೊಡಲಿಲ್ಲವಾ ನಿನಗೆ ಸರಿಯಾಗಿ ಮಾಡ್ತೀನಿ ಅಂದುಕೊಂಡು ತೊಂದರೆ ಕೊಡಲು ಆರಂಭಿಸುತ್ತಾರೆ. ಅವರ ಜೊತೆಗೆ ಇನ್ನಷ್ಟು ಜನ ಸೇರಿಕೊಳ್ಳುತ್ತಾರೆ. ಇವರಿಗೆ ಸುದೀಪ್‌ಗೆ ತೊಂದರೆ ಕೊಡುವುದೇ ಉದ್ಯೋಗ'' ಎಂದ ಜಾಕ್ ಮಂಜು ಯಾರೊಬ್ಬರ ಹೆಸರನ್ನು ಹೇಳಲಿಲ್ಲ.

    ಸುದೀಪ್‌ ವಿರುದ್ಧ ಏಕೆ ದ್ವೇಷ: ಜಾಕ್ ಮಂಜು ಪ್ರಶ್ನೆ

    ಸುದೀಪ್‌ ವಿರುದ್ಧ ಏಕೆ ದ್ವೇಷ: ಜಾಕ್ ಮಂಜು ಪ್ರಶ್ನೆ

    ''ಏಕೆ ಸುದೀಪ್ ವಿರುದ್ಧ ಅವರು ದ್ವೇಷ ಸಾಧಿಸುತ್ತಿದ್ದಾರೆ ಗೊತ್ತಿಲ್ಲ. 'ಪೈಲ್ವಾನ್' ಸಿನಿಮಾ ಬರುತ್ತಿದ್ದಂತೆ ಅದರ ಪೈರಸಿ ಮಾಡ್ತಾರೆ, 'ಕೋಟಿಗೊಬ್ಬ 3' ಸಿನಿಮಾ ಬರುವ ಮುನ್ನವೇ ಪೈರಸಿ ಮಾಡುವುದಾಗಿ ಘೋಷಿಸುತ್ತಾರೆ. ಸುದೀಪ್ ಸಿನಿಮಾ ಬಿಡುಗಡೆ ಆಗಬೇಕಾದರೆ ಬೇಕೆಂದೇ ಅವರ ಸಿನಿಮಾ ವಿರುದ್ಧವಾಗಿ ಸಿನಿಮಾ ಬಿಡುಗಡೆ ಮಾಡುತ್ತೀರ'' ಎಂದು ಜಾಕ್ ಮಂಜು ಪ್ರಶ್ನೆ ಮಾಡಿದ್ದಾರೆ.

    ''ಸುದೀಪ್ ಸಿನಿಮಾ ಎದುರು ಬೇರೆ ಸಿನಿಮಾಗಳನ್ನು ಬಿಡುಗಡೆ ಮಾಡಿದಿರಿ''

    ''ಸುದೀಪ್ ಸಿನಿಮಾ ಎದುರು ಬೇರೆ ಸಿನಿಮಾಗಳನ್ನು ಬಿಡುಗಡೆ ಮಾಡಿದಿರಿ''

    ''ಇಬ್ಬರು ವಿತರಕರು ಮಾಡಿದ ಕೆಲಸದಿಂದ 'ಕೋಟಿಗೊಬ್ಬ 3' ಸಿನಿಮಾ ನಿಗದಿತ ದಿನದಂದು ಬಿಡುಗಡೆ ಆಗಲಿಲ್ಲ. ಆದರೆ ಅದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಒಬ್ಬ ಹಿರಿಯ ವಿತರಕರಾಗಿ ಅವರು ನಿರ್ಮಾಪಕರಿಗೆ ಬುದ್ಧಿ ಹೇಳಬೇಕಿತ್ತು, ಅದನ್ನು ಬಿಟ್ಟು ಹೀಗೆ ಹಿಂದೆ ನಿಂತು ಆಟ ಆಡಬಾರದು. ಸುದೀಪ್ ನಟನೆಯ 'ಕಿಚ್ಚ-ಹುಚ್ಚ' ಸಿನಿಮಾಕ್ಕೆ ಎದುರಾಗಿ 'ಜಾಕಿ' ಸಿನಿಮಾ ಬಿಡುಗಡೆ ಮಾಡಿಸಿದಿರಿ. 'ಮುಕುಂದ-ಮುರಾರಿ' ಸಿನಿಮಾಕ್ಕೆ ಎದುರಾಗಿ 'ಸಂತೂ ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಬಿಡುಗಡೆ ಮಾಡಿಸಿದಿರಿ'' ಎಂದು ಹೆಸರು ಹೇಳದೆ ನಿರ್ಮಾಪಕರೊಬ್ಬರನ್ನು ಬೈದರು.

    ''ಫೈನಾನ್ಸ್ ತಂದು ಸಿನಿಮಾ ಮಾಡಿ 19 ತಿಂಗಳು ಬಡ್ಡಿ ಕಟ್ಟಿದ್ದಾರೆ''

    ''ಫೈನಾನ್ಸ್ ತಂದು ಸಿನಿಮಾ ಮಾಡಿ 19 ತಿಂಗಳು ಬಡ್ಡಿ ಕಟ್ಟಿದ್ದಾರೆ''

    'ಕೋಟಿಗೊಬ್ಬ 3' ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಬಗ್ಗೆ ಮಾತನಾಡಿದ ಜಾಕ್ ಮಂಜು, ''2019 ಡಿಸೆಂಬರ್‌ನಲ್ಲಿ 'ಕೋಟಿಗೊಬ್ಬ 3' ಸಿನಿಮಾ ಚಿತ್ರೀಕರಣ ಮುಗಿಯಿತು, ಜನವರಿ-ಫೆಬ್ರವರಿಯಲ್ಲಿ ಬಿಡುಗಡೆ ಮಾಡುವವರಿದ್ದರು ಅಷ್ಟರಲ್ಲಿ ಲಾಕ್‌ಡೌನ್ ಆಯಿತು. ಸತತ 19 ತಿಂಗಳು ಸಿನಿಮಾವನ್ನು ಸುಮ್ಮನೆ ಇಟ್ಟುಕೊಂಡಿದ್ದರು ಸೂರಪ್ಪ ಬಾಬು. 80 ಕೋಟಿ ವೆಚ್ಚದ ಸಿನಿಮಾ ಅದು. ಚಂದನವನದ ಎಲ್ಲ ನಿರ್ಮಾಪಕರು ಫೈನಾನ್ಸ್ ತಂದೇ ಸಿನಿಮಾ ಮಾಡುವುದು. ಸೂರಪ್ಪ ಬಾಬು ಸಹ ಫೈನಾನ್ಸ್ ತಂದೇ ಸಿನಿಮಾ ಮಾಡಿದ್ದರು. ಸಮಯ ಹೆಚ್ಚಾದಂತೆ ಬಡ್ಡಿ ಹೆಚ್ಚಾಗುತ್ತಾ ಸಾಗಿತು. ಅವರ ಈ ಸಮಸ್ಯೆ ಅರಿತುಕೊಂಡ ಕೆಲವು ದುರುಳರು ಅವರನ್ನು ಸಂಪೂರ್ಣವಾಗಿ ಮುಗಿಸಿ ಬಿಡಲು ಹೀಗೆ ಮಾಡಿದ್ದಾರೆ'' ಎಂದಿದ್ದಾರೆ ಜಾಕ್ ಮಂಜು.

    ''ಸೂರಪ್ಪ ಬಾಬು-ಸುದೀಪ್ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಲಾರೆ''

    ''ಸೂರಪ್ಪ ಬಾಬು-ಸುದೀಪ್ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಲಾರೆ''

    ''ನಿರ್ಮಾಪಕ ಸೂರಪ್ಪ ಬಾಬು ಹಾಗೂ ಸುದೀಪ್ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ನಾನು ಹೇಳಲಾರೆ ಆದರೆ ಅವರ ಸಂಬಂಧ ಕೆಟ್ಟಿಲ್ಲ. ಸಿನಿಮಾಕ್ಕೆ ಸಂಬಂಧಿಸಿದಂತೆ ಕ್ರಿಯೇಟಿವ್ ಡಿಫರೆನ್ಸ್‌ಗಳು ಇಬ್ಬರ ನಡುವೆ ಇದ್ದಾವೆಯೇ ಹೊರತು ಬೇರೆ ಸಮಸ್ಯೆಗಳು ಇವೆ. ಸೂರಪ್ಪ ಬಾಬು ಅವರು ಈ ಕಾಲಕ್ಕೆ ಅಪ್‌ಗ್ರೇಡ್ ಆಗಿಲ್ಲ. ಮಧ್ಯವರ್ತಿಗಳ ಮೇಲೆ ಅವಲಂಬಿತರಾಗುವುದು ಹೆಚ್ಚು. ಪೋಲೆಂಡ್‌ಗೆ ಚಿತ್ರೀಕರಣಕ್ಕೆ ಹೋಗಿ ಮೋಸ ಹೋಗಿದ್ದಾರೆ. ಯಾರೊ ಮಧ್ಯವರ್ತಿಯನ್ನು ನಂಬಿ ಅಲ್ಲಿಗೆ ಚಿತ್ರೀಕರಣಕ್ಕೆ ತೆರಳಿ ಮೋಸ ಹೋಗಿದ್ದಾರೆ. ಅದರಿಂದ ಹಣ ಸಹ ಕಳೆದುಕೊಂಡರು. ಆರಂಭದಿಂದಲೂ ಅವರಿಗೆ ಅಡಚಣೆಗಳು ಕಾಡುತ್ತಲೇ ಇವೆ. ಈಗ ವಿಜಯದಶಮಿಯ ದಿನದಂದು ಎಲ್ಲವೂ ನಿವಾರಣೆ ಆಗುತ್ತಿದೆ'' ಎಂದರು ಜಾಕ್ ಮಂಜು.

    English summary
    Sudeep's friend and producer Jack Manju said some people in movie industry trying to pull down Sudeep.
    Saturday, October 16, 2021, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X