For Quick Alerts
  ALLOW NOTIFICATIONS  
  For Daily Alerts

  ಜಯಂತಿ ಕೊನೆ ದಿನಗಳ ಹೇಗಿದ್ದವು? ಮಗ ಕೃಷ್ಣಕುಮಾರ್ ಹೇಳಿದ್ದು ಹೀಗೆ

  |

  ಅಭಿನಯ ಶಾರದೆ ಬಿರುದಾಂಕಿತ ಹಿರಿಯ ನಟಿ ಜಯಂತಿ ನಿಧನ ಹೊಂದಿದ್ದಾರೆ. 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಜಯಂತಿ ಅವರಿಗೆ 76 ವರ್ಷ ವಯಸ್ಸಾಗಿತ್ತು.

  ರಾಜ್ ಕುಮಾರ್ ಜೊತೆಗೆ 45 ಚಿತ್ರಗಳಲ್ಲಿ ನಟಿಸಿ ದಾಖಲೆ ಬರೆದಿದ್ರು ಜಯಂತಿ

  ಜಯಂತಿ ಅವರ ಅಗಲಿಕೆಯ ಬಗ್ಗೆ ನೋವಿನಂದಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಪುತ್ರ ಕೃಷ್ಣಕುಮಾರ್, ''ಅಮ್ಮನವರು ಬಹುಷಃ ಇಂದು ಮುಂಜಾನೆ 3 ಅಥವಾ 4 ಗಂಟೆಗೆ ಕೊನೆ ಉಸಿರೆಳೆದಿದ್ದಾರೆ ಎನಿಸುತ್ತದೆ. ನಿದ್ದೆಯಲ್ಲಿರುವಾಗ ಬಹಳ ಶಾಂತಿಯಿಂದ ಅವರು ಇಹಲೋಕ ಬಿಟ್ಟು ಇನ್ನೂ ಒಳ್ಳೆಯ ಸ್ಥಳಕ್ಕೆ ಹೋಗದ್ದಾರೆ ಎಂದು ನಾನು ನಂಬುತ್ತಿದ್ದೇನೆ'' ಎಂದಿದ್ದಾರೆ.

  ''ಅವರೊಬ್ಬ ಹೋರಾಟಗಾರ್ತಿಯಾಗಿದ್ದರು ಕಳೆದ ವರ್ಷ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಎಲ್ಲರಿಗೂ ಗೊತ್ತಿರುವಂತೆ ಬಹಳ ಗಂಭೀರ ಸ್ಥಿತಿಯಲ್ಲಿದ್ದರು. 46 ದಿನಗಳ ಕಾಲ ಸತತವಾಗಿ ಹೋರಾಡಿ ಅವರು ಹೊರಗೆ ಬಂದರು'' ಎಂದರು ಕೃಷ್ಣಕುಮಾರ್.

  ''ಕಳೆದ ವರ್ಷ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾದಾಗಂತಲೂ ಅವರಿನ್ನು ಚೇತರಿಸಿಕೊಳ್ಳುವುದು ಕಷ್ಟ ಎನ್ನಲಾಗಿತ್ತು. ಜೀವನ ಪರ್ಯಂತ ಆಮ್ಲಜನಕ ವ್ಯವಸ್ಥೆ ಮಾಡಬೇಕು ಎಂದಿದ್ದರು. ಆದರೆ ಅಮ್ಮ ಅದ್ಭುತವಾಗಿ ಚೇತರಿಸಿಕೊಂಡು ಆಮ್ಲಜನಕ ಸಿಲಿಂಡರ್ ಇಲ್ಲದೆ ಉಸಿರಾಡಲು ಆರಂಭಿಸಿದರು. ಅವರೊಬ್ಬ ಹೋರಾಟಗಾರ್ತಿಯಾಗಿದ್ದರು'' ಎಂದಿದ್ದಾರೆ ಕೃಷ್ಣಕುಮಾರ್.

  ''ತಾಯಿಯವರಿಗೆ ಸದಾ ಜನಗಳ ಜೊತೆ ಇರುವುದು ಇಷ್ಟವಾಗುತ್ತಿತ್ತು. ಸಂಬಂಧಿಗಳು, ಸಿನಿಮಾ ಗೆಳೆಯರು ಎಲ್ಲರನ್ನೂ ಅವರು ಭೇಟಿಯಾಗುತ್ತಲೇ ಇದ್ದರು. ಕರೆ ಮಾಡಿ ಮಾತನಾಡುತ್ತಿದ್ದರು'' ಎಂದಿದ್ದಾರೆ ಕೃಷ್ಣಕುಮಾರ್.

  ''ಕೊನೆಯ ದಿನಗಳಲ್ಲಿ ಅವರು ಬಹುಪಾಲು ಸಮಯದಲ್ಲಿ ಗೆಳೆಯರೊಟ್ಟಿಗೆ ಮಾತನಾಡುತ್ತಾ ಅಥವಾ ಐಪ್ಯಾಡ್‌ನಲ್ಲಿ ತಮ್ಮ, ತಮ್ಮ ಸಿನಿ ಜೀವನದ ಗೆಳೆಯರ ಹಳೆಯ ಸಿನಿಮಾಗಳು, ಹಳೆಯ ಹಾಡುಗಳನ್ನು ಕೇಳುತ್ತಾ ಸಮಯ ಕಳೆಯುತ್ತಿದ್ದರು'' ಎಂದು ಕೊನೆಯ ದಿನಗಳನ್ನು ಜಯಂತಿ ಅವರು ಹೇಗೆ ಕಳೆದರು ಎಂದು ಕೃಷ್ಣಕುಮಾರ್ ಮಾಹಿತಿ ನೀಡಿದರು.

  ಅಂತಿಮ ದರ್ಶನದ ಬಗ್ಗೆ ಮಾತನಾಡಿರುವ ಕೃಷ್ಣಕುಮಾರ್, ''ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಖು ಎಂಬ ಆಲೋಚನೆ ಇದೆ. ಆದರೆ ಕೊರೊನಾ ಸಮಯದಲ್ಲಿ ಅದೆಷ್ಟು ಸೂಕ್ತ ಎಂಬ ಆಲೋಚನೆಯೂ ಇದೆ. ನಮ್ಮಿಂದ ಬೇರೆಯವರಿಗೆ ತೊಂದರೆ ಆಗಬಾರದು ಎಂಬ ಕಾಳಜಿ ನಮ್ಮದು. ಈ ಬಗ್ಗೆ ತಾರಾ, ಗಿರಿಜಾ ಲೋಕೇಶ್ ಇನ್ನಿತರರು ಚರ್ಚೆ ಮಾಡುತ್ತಿದ್ದಾರೆ'' ಎಂದಿದ್ದಾರೆ ಕೃಷ್ಣಕುಮಾರ್.

  English summary
  Actress Jayanthi passed away. Her son Krishnakumar said how she spent her last days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X