»   » ಯೋಗರಾಜ್ ಭಟ್ಟರ ಅಡ್ಡಕ್ಕೆ ಬಂದ ಅಭಿಸಾರಿಕೆ ಈಕೆ

ಯೋಗರಾಜ್ ಭಟ್ಟರ ಅಡ್ಡಕ್ಕೆ ಬಂದ ಅಭಿಸಾರಿಕೆ ಈಕೆ

Posted By:
Subscribe to Filmibeat Kannada

ಮುಗುಳುನಗೆ ಸಿನಿಮಾದ ನಂತರ ಯೋಗರಾಜ್ ಭಟ್ಟರು ಹೊಸ ತಂಡದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿದ್ದಾರೆ. ಕಾಲ್ ಕೆ ಜಿ ಪ್ರೀತಿ ಸಿನಿಮಾ ಹೀರೋ ವಿಹಾನ್ ಗೌಡ ಅವರನ್ನ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಮಾಡಿಕೊಂಡು. ಒಂದ್ ಒಳ್ಳೆ ಕಥೆಯನ್ನ ಆಯ್ಕೆ ಮಾಡಿ ಸಿನಿಮಾ ಮಾಡಲು ಸಿದ್ದರಾಗಿದ್ದಾರೆ ಯೋಗರಾಜ್ ಭಟ್ಟರು.

ತಮ್ಮ ಹೊಸ ಸಿನಿಮಾದ ಪಾತ್ರವೊಂದಕ್ಕೆ ಅಕ್ಷರ ಗೌಡರನ್ನ ಕರೆತಂದಿದ್ದ ಭಟ್ಟರು ಈಗ ಚಿತ್ರಕ್ಕೆ ಪ್ರಮುಖ ನಾಯಕಿಯನ್ನ ಆಯ್ಕೆ ಮಾಡಿದ್ದಾರೆ. 'ಅಭಿಸಾರಿಕೆ' ಹಾಗೂ 'ಎಂ ಎಲ್ ಎ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಸೋನಾಲ್ ಮಾಂಟರಿಯೋ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ.

Sonal Monteiro has been selected as the heroine of yograj bhat new film

ಸದ್ಯ ಬಾಲಿವುಡ್ ಚಿತ್ರದಲ್ಲಿ ಬ್ಯುಸಿ ಆಗಿರುವ ಸೋನಾಲ್, ವಿಹಾನ್ ಜೊತೆಯಲ್ಲಿ ಜೋಡಿಯಾಗಿ ಅಭಿನಯಿಸುವುದು ಬಹುತೇಕ ಕನ್ಫರ್ಮ್ ಆಗಿದೆ. ಮಂಗಳೂರಿನ ಮೂಲದ ಸೋನಾಲ್ ಸಿನಿಮಾ ಜರ್ನಿಯ ಪ್ರಾರಂಭದಲ್ಲೇ ಒಳ್ಳೆ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.

ಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ಸಿಕ್ಕ ನಾಯಕಿ ಇವರೇ

Sonal Monteiro has been selected as the heroine of yograj bhat new film

ಕಾಂತ್ ರಾಜ್ ಅವರ ಕಥೆಗೆ ಕಡ್ಡಿಪುಡಿ ಸಿನಿಮಾ ಖ್ಯಾತಿಯ ಮಾಸ್ತಿ ಚಿತ್ರಕತೆ ಬರೆಯುತ್ತಿದ್ದಾರೆ. ಸದ್ಯ ಸ್ಟಾರ್ ಕಾಸ್ಟ್ ಫೈನಲ್ ಮಾಡುತ್ತಿರುವ ಭಟ್ಟರು ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಶುರು ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

English summary
Sonal Monteiro has been selected as the heroine of yograj bhat new film. Kaal KG Preethi film fame hero Vihan Gowda is acting as hero in the film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X