ಅನುಶ್ರೀ ಸಂದರ್ಶನದ ವೇಳೆ ಪತಿ ತರುಣ್ ಸುಧೀರ್‌ಗೆ ಮುತ್ತಿಟ್ಟ ಸೋನಾಲ್: ವಿಡಿಯೋ ವೈರಲ್
ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪ್ರೀತಿಯನ್ನು ಗುಟ್ಟಾಗಿಯೇ ಇಟ್ಟಿದ್ದ ಈ ಜೋಡಿ ಮದುವೆ ವೇಳೆನೇ ರಿವೀಲ್ ಮಾಡಿತ್ತು. ಆ ಮಟ್ಟಿಗೆ ತಮ್ಮ ಪ್ರೀತಿಯ ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದರು.
ಹ್ಯಾಟ್ರಿಕ್ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ 'ಕಾಟೇರ' ನಿರ್ದೇಶಕ ಈಗ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಅತ್ತ ಸೋನಾಲ್ ಮಾಂಥೆರೋ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದರು. ಎರಡು ವರ್ಷ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಈಗ ತಮ್ಮ ಮನೆಯವರನ್ನು ಒಪ್ಪಿಸಿ ಹಿರಿಯ ಸಮ್ಮುಖದಲ್ಲಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿವಾಹದ ಬಳಿಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ರಕ್ಷಾ ಬಂಧನದ ದಿನ ಅಣ್ಣ ದರ್ಶನ್ ನೆನೆದು ಭಾವನಾತ್ಮಕವಾಗಿ ಪೋಸ್ ಮಾಡಿದ್ದು ಬಿಟ್ಟರೆ, ಈ ಜೋಡಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ತುಣುಕೊಂದು ಹರಿದಾಡುತ್ತಿದೆ. ಇದು ಆಂಕರ್ ಅನುಶ್ರೀಗೆ ನೀಡಿರುವ ಸಂದರ್ಶನ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.
ಇಲ್ಲಿ ಕಲರ್‌ಫುಲ್ ಸೆಟಪ್ ಅನ್ನು ಮಾಡಲಾಗಿದೆ. ಕೆಂಪು ಬಣ್ಣದ ಬಲೂನ್‌ಗಳನ್ನು ಇಡಲಾಗಿದೆ. ಜೊತೆಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಹಾರ್ಟ್ ಶೇಪ್‌ನ ಪ್ರಾಪರ್ಟಿಯನ್ನು ಇಡಲಾಗಿದೆ. ಅದರ ಮುಂಭಾಗದಲ್ಲಿ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಕೂಡ ಇದ್ದಾರೆ. ಇವರೊಂದಿಗೆ ತರುಣ್ ಸುಧೀರ್ ಆತ್ಮೀಯ ಗೆಳೆಯ ನೆನಪಿರಲಿ ಪ್ರೇಮ್ ಕೂಡ ಕಾಣಿಸುತ್ತಿದ್ದಾರೆ.
ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಪತಿ ತರುಣ್ ಸುಧೀರ್‌ಗೆ ಸೋನಾಲ್ ಮಾಂಥೆರೋ ಮುತ್ತಿಡುವ ವಿಡಿಯೋ ಸೆರೆಯಾಗಿದೆ. ಇದನ್ನು ಇನ್‌ಸ್ಟಾಗ್ರಾಂನಲ್ಲಿ ಯಾರೋ ಶೇರ್ ಕೂಡ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಈ ಸಂದರ್ಭ ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ಗೆ ನಡೆದ ಸಂದರ್ಭದ್ದು ಎಂದು ಹೇಳಲಾಗುತ್ತಿದೆ.
'ಕಾಟೇರ' ಸಿನಿಮಾ ಬಳಿಕ ತರುಣ್ ಸುಧೀರ್ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಿರ್ದೇಶಕನಾಗಿದ್ದಾರೆ. ಇದಕ್ಕೂ ಮುನ್ನ ತರುಣ್ ಸುಧೀರ್ ನಿರ್ದೇಶಿಸಿದ್ದ 'ರಾಬರ್ಟ್' ಸಿನಿಮಾದಲ್ಲಿ ಸೋನಾಲ್ ಮಾಂಥೆರೋ ನಟಿಸಿದ್ದರು. ಅಲ್ಲಿಂದ ಇವರಿಬ್ಬರಿಗೂ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೂ ತಿರುಗಿತ್ತು. ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಇಬ್ಬರಿಗೂ ಮದುವೆ ಆಗುವಂತೆ ಸಲಹೆ ನೀಡಿದ್ದರು.
ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋಗೆ ದರ್ಶನ್ ಅಣ್ಣನ ಸ್ಥಾನದಲ್ಲಿ ನಿಂತಿದ್ದರು. ಆದರೆ, ರೇಣುಕಾಸ್ವಾಮಿ ಮರ್ಡರ್ ಕೇಸ್‌ನ ಆರೋಪದ ಮೇಲೆ ಜೈಲು ಸೇರಿದ್ದರಿಂದ ಇವರ ಮದುವೆಗೆ ಬರುವುದಕ್ಕೆ ಆಗಲಿಲ್ಲ. ಇದನ್ನು ನೆನೆದು ಮದುವೆ ದಿನವೇ ತರುಣ್ ಸುಧೀರ್ ಜೋಡಿ ಕಣ್ಣೀರು ಹಾಕಿತ್ತು. ಏನೇ ಇದ್ರೂ ಇಬ್ಬರ ಅನ್ಯೋನ್ಯತೆಗೆ ಸಾಕ್ಷಿ ಎಂಬಂತೆ ಪತಿಗೆ ತರುಣ್‌ಗೆ ಚುಂಬಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











