'ತಲ್ವರ್ ಪೇಟೆ'ಯಲ್ಲಿ ವಸಿಷ್ಠ ಸಿಂಹ ಜೊತೆ ಕಾಣಿಸಿಕೊಂಡ ಸೋನಲ್
'ತಲ್ವರ್ ಪೇಟೆ'ಯಲ್ಲಿ ನಟ ವಸಿಷ್ಠ ಸಿಂಹ ಜೊತೆ ನಟಿ ಸೋನಲ್ ಮಂಟೋರಿಯಾ ಏನ್ಮಾಡ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ. ಸೋನಲ್ ಮತ್ತು ವಸಿಷ್ಠ ಸಿಂಹ 'ತಲ್ವರ್ ಪೇಟೆ' ಎನ್ನುವ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿಭಿನ್ನ ಟೈಟಲ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸೆಳೆದಿದೆ 'ತಲ್ವರ್ ಪೇಟೆ' ಸಿನಿಮಾ.
ನಟ ವಿಸಿಷ್ಠ ಸಿಂಹ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕನಾಗಿ, ಖಳನಟನಾಗಿ, ಪೋಷಕ ನಟನಾಗಿ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುತ್ತಿರುವ ವಸಿಷ್ಠ ಈಗ 'ತಲ್ವರ್ ಪೇಟೆ' ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.
ಇನ್ನು ಸೋನಲ್ 'ಪಂಚತಂತ್ರ' ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ನಟಿ. 'ಪಂಚತಂತ್ರ' ನಂತರ 'ಬುದ್ಧಿವಂತ-2' ಚಿತ್ರ ಅಭಿನಯಿಸುತ್ತಿರುವ ಸೋನಲ್ ಯೋಗರಾಜ್ ಭಟ್ರು ನಿರ್ದೇಶನದ 'ಗಾಳಿಪಟ-2' ಚಿತ್ರದಲ್ಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ಸೋನಲ್ ಈಗ ವಸಿಷ್ಠ ಜೊತೆ 'ತಲ್ವರ್ ಪೇಟೆ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅಂದ್ಹಾಗೆ 'ತಲ್ವರ್ ಪೇಟೆ' ಚಿತ್ರಕ್ಕೆ ರಾಮ್ ಲಕ್ಷ್ಮನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರೆ ಕಥೆ, ಚಿತ್ರಕಥೆ, ಮತ್ತು ಸಂಭಾಷಣೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಜುಲೈನಿಂದ ಚಿತ್ರೀಕರಣ ಪ್ರಾರಂಭಮಾಡಲಿದೆ.


Click it and Unblock the Notifications











