ಡಾರ್ಲಿಂಗ್ ಕೃಷ್ಣ ಜೊತೆ 'ಶುಗರ್ ಫ್ಯಾಕ್ಟರಿ' ಸೇರಿದ 'ಪಂಚತಂತ್ರ' ಸುಂದರಿ
ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ ಸದ್ಯ 'ಲವ್ ಮಾಕ್ಟೇಲ್-2 'ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಲವ್ ಮಾಕ್ಟೇಲ್' ಸಕ್ಸಸ್ ಬಳಿಕ ಪಾರ್ಟ್-2 ನಲ್ಲಿ ಮಾಡಲು ನಿರ್ಧರಿಸಿದ್ದು, ಈಗಾಗಲೇ ಶೇ 60 ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. 'ಲವ್ ಮಾಕ್ಟೇಲ್' ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
'ಲವ್ ಮಾಕ್ಟೇಲ್-2' ಜೊತೆಗೆ ಕೃಷ್ಣ 'ಶುಗರ್ ಫ್ಯಾಕ್ಟರಿ' ಎನ್ನುವ ಹೊಸ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟೈಟಲ್ ಅನೌನ್ಸ್ ಮಾಡಿರುವ ಸಿನಿಮಾತಂಡ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ಧವಾಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಹಾಸ್ಯಭರಿತ ಸಿನಿಮಾ ಇದಾಗಿದೆ. ವಿಶೇಷ ಎಂದರೆ ಈ ಸಿನಿಮಾಗೆ ಈಗ ನಾಯಕಿ ಫಿಕ್ಸ್ ಆಗಿದ್ದಾರೆ. ಹೌದು 'ಪಂಚತಂತ್ರ' ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿರುವ ನಟಿ ಸೋನಲ್ ಮೊಂಥೆರೋ ಈ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಮತ್ತು ಸೋನಲ್ ತೆರೆಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸೋನಲ್ ಮಾತ್ರವಲ್ಲದೆ ಇನ್ನೂ ಇಬ್ಬರು ನಟಿಯರು ಇರಲಿದ್ದಾರಂತೆ. ಆದರೆ ಉಳಿದ ನಟಿಯರು ಯಾರು ಎನ್ನುವುದು ಬಹಿರಂಗ ವಾಗಿಲ್ಲ.

'ಶುಗರ್ ಫ್ಯಾಕ್ಟರಿ' ಚಿತ್ರಕ್ಕೆ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಮನಸಾಲಜಿ ಎನ್ನುವ ಸಿನಿಮಾ ಮಾಡಿದ್ದ ದೀಪಕ್ ಇದೀಗ ಶುಗರ್ ಫ್ಯಾಕ್ಟರಿ ಮೂಲಕ ಎರಡನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬಳಿಕ ಗೋವಾ, ಮೈಸೂರು ಮತ್ತು ವಿದೇಶದಲ್ಲೂ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ.
ಶುಗರ್ ಫ್ಯಾಕ್ಟರಿ ಸಿನಿಮಾ ಜೊತೆಗೆ ಡಾರ್ಲಿಂಗ್ ಕಷ್ಣ '[email protected]' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದೆ. ಇನ್ನೂ 'ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು' ಎನ್ನುವ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸದ್ಯ ಲವ್ ಮಾಕ್ಟೇಲ್-2 ನಲ್ಲಿ ಬ್ಯುಸಿ ಇರುವ ಕೃಷ್ಣ ಡಿಸೆಂಬರ್ ಒಳಗೆ ಸಿನಿಮಾ ಶೂಟಿಂಗ್ ಮುಗಿಸುವ ಪ್ಲಾನ್ ಮಾಡಿದ್ದಾರೆ. ಈ ನಡುವೆ ಕೃಷ್ಣ ಮತ್ತು ಮಿಲನಾ ನಾಗರಾಜ್ ಇಬ್ಬರು ಫೆಬ್ರವರಿ 14ರಂದು ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.


Click it and Unblock the Notifications











