'ಗರಡಿ' ಸಿನಿಮಾದಿಂದ ಹೊರನಡೆದ ರಚಿತಾ ರಾಮ್ ಜಾಗಕ್ಕೆ ಬಂದ್ರು ಮತ್ತೋರ್ವ ನಟಿ!
ಸ್ಯಾಂಡಲ್‌ವುಡ್ ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶಿಸಿರುವ 'ಗಾಳಿಪಟ 2' ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ವಿಕಟಕವಿ ಯೋಗರಾಜ್ ಭಟ್ 'ಗರಡಿ' ಎಂಬ ಹೊಸ ಚಿತ್ರವನ್ನು ನಿರ್ದೇಶನ ಮಾಡುವ ಬಗ್ಗೆ ಕೆಲವು ದಿನಗಳ ಹಿಂದೆಯೇ ಅನೌನ್ಸ್ ಮಾಡಿದ್ದರು.
ಅಲ್ಲದೇ ಗರಡಿ ಚಿತ್ರ ಸಾಕಷ್ಟು ವಿಚಾರಕ್ಕೆ ಸುದ್ದಿಯಲ್ಲಿತ್ತು. ಅದರಲ್ಲೂ ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಚಿತ್ರದ ನಾಯಕಿ ಅಂತ ಗೊತ್ತಾದಾಗ ಫ್ಯಾನ್ಸ್ ಮತ್ತಷ್ಟು ಖುಷಿ ಪಟ್ಟಿದ್ದರು. ಆದರೇ ಇದೀಗ ರಚಿತಾ ರಾಮ್ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದನ್ನ ಚಿತ್ರತಂಡ ರಿವೀಲ್ ಮಾಡಿದೆ.
ಗರಡಿ ಚಿತ್ರದಲ್ಲಿ ನಟ ಯಶಸ್ ಸೂರ್ಯಗೆ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಭಾರಿ ಕುತೂಹಲವನ್ನು ಮೂಡಿಸಿತ್ತು. ಯಾಕೆಂದರೇ ಯಶಸ್ ಸೂರ್ಯ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಗಳಾಗಿ ತೆರೆಮೇಲೆ ಕಾಣಿಸೋದ್ರಲ್ಲಿ ಇದ್ದರು. ಆದರೇ ಇದೆಲ್ಲದಕ್ಕೂ ಈಗ ಫುಲ್‌ಸ್ಟಾಪ್ ಬಿದ್ದಿದೆ. ಕಾರಣ ನಟಿ ರಚಿತಾ ರಾಮ್ ಗರಡಿ ತಂಡದಿಂದ ಹೊರನಡೆದಿರೋದು.

ಗರಡಿ ಚಿತ್ರದಿಂದ ಹೊರನಡೆದ ರಚಿತಾ ರಾಮ್
ಕೇಳೋದಕ್ಕೆ ಇದು ಶಾಕಿಂಗ್ ಅನ್ನಿಸಿದರೂ ಇದು ನಿಜ. ರಚಿತಾ ರಾಮ್ ಅವರು ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಗರಡಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಆಗಿಲ್ಲ ಎಂಬ ಕಾರಣಕ್ಕೆ ಗರಡಿ ತಂಡದಿಂದ ಹೊರಬಂದಿದ್ದಾರೆ. ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದ್ದು, ಚಿತ್ರತಂಡಕ್ಕೂ ಕೂಡ ನಿರಾಸೆ ಆಗಿದೆ. ಆದರೇ ಈಗ ರಚಿತಾ ರಾಮ್ ಜಾಗಕ್ಕೆ ಮತ್ತೋರ್ವ ನಟಿ ಫೈನಲ್ ಕೂಡ ಆಗಿದ್ದಾರೆ. ಅವರು ಯಾರು ಅಂತ ಮುಂದೆ ಓದಿ.

ರಚಿತಾ ಹೊರನಡೆದಿರೋದು ಫ್ಯಾನ್ಸ್‌ಗೆ ಬೇಸರ
ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ 'ಗರಡಿ' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ಒಂದು ವಿಶೇಷ ಪಾತ್ರದಲ್ಲಿ ಅಭಿನಯ ಕೂಡ ಮಾಡುತ್ತಿದ್ದಾರೆ. ರಚಿತಾ ರಾಮ್ ಜಾಗಕ್ಕೆ ಸದ್ಯ ನಟಿ ಸೋನಾಲ್ ಮೊಂತೆರೋ ನಾಯಕಿಯಾಗಿ ಬಂದಿದ್ದಾರೆ. ಪಂಚತಂತ್ರ ಚಿತ್ರದಲ್ಲಿ ನಟಿಸಿದ್ದ ಸೋನಾಲ್ ಈಗ ಗರಡಿ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಪಂಚತಂತ್ರ ಸಿನಿಮಾದ ನಂತರ ಯೋಗರಾಜ್ ಭಟ್ ಜೊತೆ ಸೋನಾಲ್ ಮೊಂತೆರೋ ಕೆಲಸ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ.

ರಾಬರ್ಟ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿದ್ದ ನಟಿ
ಎಲ್ಲರಿಗೂ ತಿಳಿದಿರುವಂತೆ ಸೋನಾಲ್ ಮಂತೆರೋ ರಾಬರ್ಟ್ ಚಿತ್ರದಲ್ಲಿ ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ನಂತರ ಸೋನಲ್ ಜಯತೀರ್ಥ ನಿರ್ದೇಶನದ 'ಬನಾರಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಬನಾರಸ್ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮಾತ್ರವಲ್ಲದೇ 'ಶಂಭೋ ಶಿವ ಶಂಕರ', 'ಶುಗರ್ ಫ್ಯಾಕ್ಟರಿ', 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ', ಹಾಗೂ 'ಬುದ್ದಿವಂತ 2' ಸಿನಿಮಾಗಳಲ್ಲಿ ಸೋನಾಲ್ ನಟಿಸುತ್ತಿದ್ದು, ಇವುಗಳ ಜೊತೆಗೆ ಇದೀಗ 'ಗರಡಿ' ಚಿತ್ರದಲ್ಲೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಕಮರ್ಷಿಯಲ್ ಎಂಟರ್ಟೈನ್‌ಮೆಂಟ್ ಸಿನಿಮಾ ಗರಡಿ !
ಈ ವಾರದಲ್ಲಿ ಗರಡಿ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದೊಂದು ಕಮರ್ಷಿಯಲ್ ಎಂಟರ್ಟೈನ್‌ಮೆಂಟ್ ಸಿನಿಮಾ ಆಗಿದ್ದು, ಚಿತ್ರವನ್ನು ನಿರ್ಮಿಸುತ್ತಿರುವ ಸಚಿವ ಬಿ.ಸಿ. ಪಾಟೀಲ್, ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಗರಡಿ ಚಿತ್ರದ ನಾಯಕ ಯಶಸ್ ಸೂರ್ಯ ಈ ಚಿತ್ರದೊಂದಿಗೆ ಆಕ್ಷನ್ ನಟನಾಗಿ ಹೊರ ಹೊಮ್ಮಲಿದ್ದಾರೆ. 'ಬಿ ರೆಡಿ' ಎನ್ನುವ ಟ್ಯಾಗ್‌ಲೈನ್ ಚಿತ್ರಕ್ಕಿದ್ದು ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಆಕ್ಷನ್ ಡ್ರಾಮಾ ಜೊತೆಗೆ ಗರಡಿ ಚಿತ್ರದಲ್ಲಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‌ಗಳ ಫಿಟ್‌ನೆಸ್‌ಗಳ ಬಗ್ಗೆ ಕಥೆಯಿರುತ್ತದೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ವಿಶೇಷವಾಗಿ ಯೋಗರಾಜ್ ಭಟ್ ಸಿನಿಮಾಗಳು ಬೇರೆ ರೀತಿ ಇರುತ್ತವೆ. ಹಾಗಾಗಿ ಯೋಗರಾಜ್ ಭಟ್ಟರ ಸಿನಿಮಾ ಅಂದರೆ ಅಲ್ಲಿ ಪ್ರೇಮ ಕತೆಯೇ ಪ್ರಧಾನವಾಗಿ ಇರುತ್ತದೆ.


Click it and Unblock the Notifications











