ಸೋನಾಲಿ ಬೇಂದ್ರೆಯ ನೀಳ ಕೇಶಕ್ಕೆ ಕುತ್ತು ತಂದ ಕ್ಯಾನ್ಸರ್
Recommended Video

ಸೋನಾಲಿ ಬೇಂದ್ರೆ ..ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿದಂತೆ ಸ್ಯಾಂಡಲ್ ವುಡ್ ನಲ್ಲಿಯೂ ಅಭಿನಯ ಮಾಡಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದ ನಟಿ. ಇತ್ತೀಚಿಗಷ್ಟೆ ತಾನು ಕ್ಯಾನ್ಸರ್ ರೋಗದಿಂದ ಬಳುತ್ತಿರುವುದಾಗಿ ತಿಳಿಸಿದ್ದ ಸೋನಾಲಿ ಬೇಂದ್ರೆ ಸದ್ಯ ನ್ಯೂಯಾರ್ಕ್ ನ 'ಸ್ಲೋನ್ ಕಟೆರಿಂಗ್ ಕ್ಯಾನ್ಸರ್ ಸೆಂಟರ್' ಚಿಕಿತ್ಸೆ ಪಡೆಯುತ್ತಿದ್ದಾರೆ.
ನೀಳ ಕೇಶರಾಶಿಯಿಂದಲೇ ತನ್ನ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಂಡಿದ್ದ ಸೋನಾಲಿ ಬೇಂದ್ರೆಯ ಕೇಶ ರಾಶಿಯನ್ನು ಕ್ಯಾನ್ಸರ್ ಖಾಯಿಲೆ ತನ್ನ ವಶಕ್ಕೆ ಪಡೆದುಕೊಂಡಿದೆ. ಸಾಮಾನ್ಯವಾಗಿ ಕ್ಯಾನ್ಸರ್ ಖಾಯಿಲೆ ಬಂದಾಗ ಚಿಕಿತ್ಸೆ ಆರಂಭವಾದಾಗ ಕೂದಲು ಉದುರುವುದಕ್ಕೆ ಆರಂಭ ಆಗುತ್ತೆ.

ಕೂದಲು ಉದುರುವ ಮುನ್ನವೇ ಸೋನಾಲಿ ತನ್ನ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. ಸದ್ಯ ಸೋನಾಲಿ ಬೇಂದ್ರೆ ಹೊಸ ಹೇರ್ ಸ್ಟೈಲ್ ಲುಕ್ ವಿಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸೋನಾಲಿ ಕೂದಲನ್ನು ಬೇಸರದಿಂದಲೇ ಕತ್ತರಿಸಿಕೊಂಡಂತಿದೆ. ಆದರೆ ಆಕೆಯ ನೋವನ್ನು ಮರೆಸಲು ಅವರ ಸ್ನೇಹಿತರು ಮತ್ತು ಮನೆಯವರು ಜೊತೆಯಲ್ಲಿದ್ದು ಪ್ರೀತಿ ನೀಡುತ್ತಿದ್ದಾರೆ. ಒಟ್ಟಾರೆ ಆದಷ್ಟು ಬೇಗ ಸೋನಾಲಿ ಸಾವನ್ನು ಗೆದ್ದು ಬರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.


Click it and Unblock the Notifications











