For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಗ್ಯಾಂಗ್ ಸೇರಿದ ಮತ್ತೊಬ್ಬ ಹೀರೋಯಿನ್

  |
  Yuvaratna Movie: ಪುನೀತ್ ರಾಜ್‍ಕುಮಾರ್ ಗ್ಯಾಂಗ್ ಸೇರಿದ ಮತ್ತೊಬ್ಬ ಹೀರೋಯಿನ್ | FILMIBEAT KANNADA

  ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ ಸಯ್ಯೇಶಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕನ್ನಡದ ನಾಯಕಿಯೊಬ್ಬರು 'ಯುವರತ್ನ'ನ ಗ್ಯಾಂಗ್ ಸೇರಿದ್ದಾರೆ.

  ನಟಿ ಸೋನು ಗೌಡ 'ಯುವರತ್ನ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಟ ದಿಗಂತ್ ಚಿತ್ರತಂಡ ಸೇರಿಕೊಂಡಿದ್ದು, ಅದರ ಬಳಿಕ ಸೋನು ಆಗಮನ ಆಗಿದೆ.

  'ಯುವರತ್ನ' ಚಿತ್ರತಂಡದಲ್ಲಿ ಹರಿಕೃಷ್ಣ ಇಲ್ಲ : ಪುನೀತ್ ಚಿತ್ರಕ್ಕೆ ಬೇರೆ ಮ್ಯೂಸಿಕ್ ಡೈರೆಕ್ಟರ್ 'ಯುವರತ್ನ' ಚಿತ್ರತಂಡದಲ್ಲಿ ಹರಿಕೃಷ್ಣ ಇಲ್ಲ : ಪುನೀತ್ ಚಿತ್ರಕ್ಕೆ ಬೇರೆ ಮ್ಯೂಸಿಕ್ ಡೈರೆಕ್ಟರ್

  ಇತ್ತೀಚಿಗೆ ಉಪೇಂದ್ರ ಜೊತೆಗೆ ಅವರ ಪತ್ನಿಯ ಪಾತ್ರದಲ್ಲಿ 'ಐ ಲವ್ ಯೂ' ಸಿನಿಮಾದಲ್ಲಿ ಸೋನು ಗೌಡ ನಟಿಸಿದ್ದರು. ಅದರ ನಂತರವೇ ಇದೀಗ ಪವರ್ ಸ್ಟಾರ್ ಸಿನಿಮಾದಲ್ಲಿ ನಟಿಸುವ ದೊಡ್ಡ ಅವಕಾಶ ಪಡೆದಿದ್ದಾರೆ...

  'ಯುವರತ್ನ' ಟೀಂ ನಲ್ಲಿ ಸೋನು

  'ಯುವರತ್ನ' ಟೀಂ ನಲ್ಲಿ ಸೋನು

  'ಯುವರತ್ನ' ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್ ಎಂಟ್ರಿಯಾಗಿದೆ. ನಟಿ ಸೋನುಗೌಡ ಚಿತ್ರತಂಡ ಸೇರಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಪೋಸ್ಟರ್ ಮೂಲಕ ಅವರಿಗೆ ಸ್ವಾಗತ ಕೋರಿದೆ. ಇದೇ ಮೊದಲ ಬಾರಿಗೆ ಸೋನು ಪವರ್ ಸ್ಟಾರ್ ಸಿನಿಮಾದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. 'ಯುವರತ್ನ' ಚಿತ್ರದಲ್ಲಿ ತಮ್ಮ ಪಾತ್ರ ಏನು ಎನ್ನುವ ಗುಟ್ಟನ್ನು ಸೋನು ಬಿಟ್ಟುಕೊಟ್ಟಿಲ್ಲ.

  'ಗುಳ್ಟು' ಚಿತ್ರದ ನಂತರ ಒಳ್ಳೆಯ ಅವಕಾಶಗಳು

  'ಗುಳ್ಟು' ಚಿತ್ರದ ನಂತರ ಒಳ್ಳೆಯ ಅವಕಾಶಗಳು

  ಸಿನಿಮಾದ ಬಗ್ಗೆ ಸೋನು ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಒಂದು ಒಳ್ಳೆಯ ಸಿನಿಮಾ ನಮ್ಮ ಕೆರಿಯರ್ ಅನ್ನೇ ಬದಲು ಮಾಡುತ್ತದೆ. ಅನೇಕ ಏಳು ಬೀಳುಗಳ ಬಳಿಕ ನನಗೆ 'ಗುಳ್ಟು' ಸಿನಿಮಾ ಸಿಕ್ಕಿತ್ತು. ಆ ಸಿನಿಮಾದ ನಂತರ ಒಳ್ಳೆ ಒಳ್ಳೆಯ ಅವಕಾಶಗಳು ಬರುತ್ತಿವೆ. ಈಗ 'ಯುವರತ್ನ'ದಲ್ಲಿ ನನ್ನ ಪಾತ್ರ ಏನು ಎಂದು ಮಾತ್ರ ಹೇಳಬೇಡಿ. ಅದು ರಹಸ್ಯವಾಗಿ ಇರಲಿ'' ಎಂದು ಬರೆದುಕೊಂಡಿದ್ದಾರೆ.

  ನಟ ಆರ್ಯ ಭಾವಿ ಪತ್ನಿಯೇ 'ಯುವರತ್ನ'ಗೆ ನಾಯಕಿ ನಟ ಆರ್ಯ ಭಾವಿ ಪತ್ನಿಯೇ 'ಯುವರತ್ನ'ಗೆ ನಾಯಕಿ

  ಹೆಚ್ಚಾಗುತ್ತಿದೆ ಚಿತ್ರದ ತಾರ ಬಳಗ

  ಹೆಚ್ಚಾಗುತ್ತಿದೆ ಚಿತ್ರದ ತಾರ ಬಳಗ

  'ಯುವರತ್ನ' ಸಿನಿಮಾದ ತಾರಬಳಗ ದಿನೇ ದಿನೇ ಹೆಚ್ಚಾಗುತ್ತಿದೆ. ಪುನೀತ್ ರಾಜ್ ಕುಮಾರ್ ಹಾಗೂ ಸಯ್ಯೇಶಾ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ಧನಂಜಯ್, ವಸಿಷ್ಟ, ರಾಧಿಕಾ ಶರತ್ ಕುಮಾರ್, ಪ್ರಕಾಶ್ ರಾಜ್, ದಿಗಂತ್, 'ಟಗರು' ಖ್ಯಾತಿಯ ನಟಿ ತ್ರಿವೇಣಿ, ಅರು ಗೌಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಹರಿಕೃಷ್ಣ ಬದಲು ತಮನ್ ಮ್ಯೂಸಿಕ್

  ಹರಿಕೃಷ್ಣ ಬದಲು ತಮನ್ ಮ್ಯೂಸಿಕ್

  ಸಂತೋಷ್ ಆನಂದ್ ರಾಮ್ ಅವರ ಮೊದಲ ಎರಡು ಸಿನಿಮಾಗಳಿಗೆ ಹರಿಕೃಷ್ಣ ಮ್ಯೂಸಿಕ್ ನೀಡಿದ್ದರು. ಅಲ್ಲದೆ, 'ರಾಜಕುಮಾರ' ಆಡಿಯೋ ಸೂಪರ್ ಹಿಟ್ ಆಗಿತ್ತು. ಆ ಕಾರಣ 'ಯುವರತ್ನ' ಚಿತ್ರಕ್ಕೆ ಸಹ ಹರಿಕೃಷ್ಣ ಸಂಗೀತ ನೀಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ತೆಲುಗು ಸಂಗೀತ ನಿರ್ದೇಶಕ ತಮನ್ ಇತ್ತೀಚಿಗೆ ಚಿತ್ರತಂಡಕ್ಕೆ ಸೇರಿಕೊಂಡರು.

  English summary
  Actress Sonu Gowda enters to Puneeth Rajkumar in 'Yuvaratna' kannada movie team. The movie is directing by Santhosh Ananddram and producing by Hombale films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X