ಸಿನಿಮಾ ನೋಡಿ ಬಯಕೆ ಹುಟ್ಟಿಸಿಕೊಂಡ ಸೋನುಗೌಡ

By Pavithra

ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ನಟಿ ಸೋನುಗೌಡ ಅವರಿಗೆ ಹೊಸದೊಂದು ಬಯಕೆ ಹುಟ್ಟಿಕೊಂಡಿದೆ. ಅದು ಕೂಡ ಸಿನಿಮಾಗೆ ಸಂಬಂಧ ಪಟ್ಟಿದ್ದು ಎನ್ನುವುದು ವಿಶೇಷ. ಸಿನಿಮಾರಂಗಕ್ಕೆ ಬಂದು ಹತ್ತು ವರ್ಷಗಳನ್ನ ಪೂರೈಸಿರುವ ಸೋನು ಕಮರ್ಷಿಯಲ್, ಆರ್ಟ್, ಬ್ರಿಡ್ಜ್ ಎಲ್ಲಾ ರೀತಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಯಾವುದೇ ಪಾತ್ರಕ್ಕಾದರೂ ನ್ಯಾಯ ಒದಗಿಸುವಂತಹ ನಟಿ ಸೋನು ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚಿಗಷ್ಟೆ ಕಾನೂರಾಯಣ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಹುಡುಗರ ನಿದ್ದೆ ಕದ್ದಿದ್ದ ನಟಿಗೆ ಒಂದು ವಿಶೇಷ ಪಾತ್ರ ಇಂಪ್ರೆಸ್ ಮಾಡಿದ್ಯಂತೆ.

Sonu Gowda wants to act in a movie like Mahanati

ಖುದ್ದು ಸೋನು ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಬಿಡುಗಡೆ ಆಗಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿರುವ ಮಹಾನಟಿ ಸಿನಿಮಾ ನೋಡಿ ಇಂತಹದೊಂದು ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಬೇಕು ಎಂಬ ಬಯಕೆ ಹುಟ್ಟಿದ್ಯಂತೆ.

"ಮಹಾನಟಿ ಚಿತ್ರ ನೋಡಿದ ನಂತ್ರ ಈ ರೀತಿಯ ಚಿತ್ರದಲ್ಲಿ ಅಭಿನಯ ಮಾಡಬೇಕು ಎನ್ನಿಸುತ್ತಿದೆ. ಅದ್ಬುತವಾದ ಸಿನಿಮಾ, ಆರ್ಟ್ ವರ್ಕ್, ಮೇಕಪ್, ಕಾಸ್ಟ್ಯೂಮ್ಸ್, ಎಲ್ಲವೂ ತುಂಬಾ ಚೆನ್ನಾಗಿ ಮಾಡಲಾಗಿದೆ. ಇಂತಹ ಚಿತ್ರದಲ್ಲಿ ಭಾಗವಾಗಲು ತುಂಬಾ ತಾಳ್ಮೆ ಬೇಕು" ಎಂದು ಟ್ವಿಟ್ ಮಾಡಿದ್ದಾರೆ.

Sonu Gowda wants to act in a movie like Mahanati

ಸೋನುಗೌಡ ಅವರ ಆಶಯದಂತೆ ಇಂತಹ ಚಿತ್ರಗಳು ಕನ್ನಡದಲ್ಲಿಯೂ ನಿರ್ಮಾಣವಾಗಲಿ ಅದರಲ್ಲಿ ಸೋನುಗೌಡ ಕೂಡ ಭಾಗಿ ಆಗಲಿ ಎನ್ನುವುದು ಕನ್ನಡ ಸಿನಿಮಾ ಪ್ರೇಕ್ಷಕರ ಆಶಯ.

More from Filmibeat

English summary
Kannada actress Sonu Gowda wants to act in a movie like Mahanati. Mahanati is a movie released in Tollywood.Cinema, Kirti Suresh played the role of veteran actress savithri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X