'ಶಬ್ದ': ಎಸ್ ಮಹೇಂದರ್ ಹೀರೋ.. ಸೋನು ಗೌಡ ಹೀರೋಯಿನ್..

ನಿರ್ದೇಶಕ ಎಸ್ ಮಹೇಂದರ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಎಕ್ಸ್ ಕ್ಲ್ಯೂಸಿವ್ ವಾಗಿ ಲೇಖನ ಪ್ರಕಟ ಮಾಡಿತ್ತು. ಇದೀಗ ಸಿನಿಮಾದ ನಾಯಕ ಸುದ್ದಿ ಹೊರಬಂದಿದೆ.

ಎಸ್ ಮಹೇಂದರ್ ಹೊಸ ಸಿನಿಮಾಗೆ 'ಶಬ್ದ' ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಸೋನು ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಗುಳ್ಟು' ಸಿನಿಮಾದ ನಂತರ ಸೋನುಗೆ ಒಳ್ಳೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದು, ಆ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ.

Sonu Gowda Will Be Playing Female Lead In Shabda Movie

ಗಡ್ಡ ವಿಜಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ದ್ಯಾವ್ರೇ' ನಂತರ ದೊಡ್ಡ ಗ್ಯಾಪ್ ಬಳಿಕ ಈ ಸಿನಿಮಾ ಶುರು ಮಾಡಿದ್ದಾರೆ. ಮಡಿಕೇರಿಯಲ್ಲಿ ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

'ಶಬ್ದ' ಒಂದು ಥ್ರಿಲ್ಲರ್ ಸಿನಿಮಾವಾಗಿದೆ. ಪೋಲೀಸ್ ಪಾತ್ರದಲ್ಲಿ ಸೋನು ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, 'ಗುಳ್ಟು' ಸಿನಿಮಾದಲ್ಲಿ ಕೂಡ ಇದೇ ಪಾತ್ರವನ್ನು ಸೋನು ನಿರ್ವಹಿಸಿದ್ದರು. ಉಳಿದಂತೆ, ಅತುಲ್ ಕುಲಕರ್ಣಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾವೇ ನಿರ್ದೇಶನ ಮಾಡಿದ್ದ 'ಗಟ್ಟಿಮೇಳ' ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಮಹೇಂದರ್ ನಟಿಸಿದ್ದರು. ಆ ಸಿನಿಮಾದ ಬಳಿಕ ಮತ್ತೆ 'ಶಬ್ದ' ಮಾಡಲು ಬಂದಿದ್ದಾರೆ.

More from Filmibeat

English summary
Sonu Gowda will be playing female lead in 'Shabda' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X