twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಸೋನು, ಅರ್ಮಾನ್ ಮಲ್ಲಿಕ್ ಮಾರ್ಕೆಟ್ ಬೀಳಿಸಿದ್ದೇ ಈ ಗಾಯಕ!

    |

    ಕನ್ನಡ ಚಿತ್ರರಂಗದಲ್ಲಿ ಅದೊಂದು ಸಮಯ ಇತ್ತು. ಮೆಲೋಡಿ ಹಾಡುಗಳು ಅಂದಾಕ್ಷಣ ನಿರ್ದೇಶಕ, ನಿರ್ಮಾಪಕರು ಸೋನು ನಿಗಮ್ ಅವರನ್ನ ನೆನಪಿಸಿಕೊಳ್ಳುತ್ತಿದ್ದರು. ಸೋನು ಸಿಗಮ್ ಹಾಡಿದ್ರೆ ಆ ಹಾಡು ಸೂಪರ್ ಹಿಟ್ ಎಂಬ ಕಾರಣಕ್ಕಾಗಿ ತಮ್ಮ ಚಿತ್ರದಲ್ಲಿ ಒಂದು ಹಾಡನ್ನಾದರೂ ಅವರಿಂದ ಹಾಡಿಸಬೇಕು ಎಂದು ನಿರ್ಧರಿಸುತ್ತಿದ್ದರು.

    ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ, ಮರಾಠಿ, ಪಂಜಾಬಿ ಹೀಗೆ ಹಲವು ಭಾಷೆಯಲ್ಲಿ ಹಾಡಿರುವ ಸೋನು ಸಿಗಮ್ ಅವರಿಗೆ ಕನ್ನಡದಲ್ಲಿ ಸಿಕ್ಕ ಅವಕಾಶ, ಸಂಭಾವನೆ, ಪ್ರೀತಿಯೇ ಬೇರೆ. ಸೋನು ನಿಗಮ್ ಅವರಂತೆ ಬಾಲಿವುಡ್ ನ ಮತ್ತೊಬ್ಬ ಗಾಯಕ ಅರ್ಮಾನ್ ಮಲ್ಲಿಕ್ ಕೂಡ ಸ್ಯಾಂಡಲ್ ವುಡ್ನಲ್ಲಿ ಸ್ಟಾರ್ ಆದರು.

    ಇತ್ತೀಚಿನ ಸಿನಿಮಾಗಳಲ್ಲಿ ಸೋನು ನಿಗಮ್ ಮತ್ತು ಅರ್ಮಾನ್ ಮಲ್ಲಿಕ್ ಇಬ್ಬರಿಂದಲೂ ಹಾಡು ಹಾಡಿಸುವಷ್ಟು ನಮ್ಮ ಇಂಡಸ್ಟ್ರಿ ಅವರನ್ನು ನೆಚ್ಚಿಕೊಂಡಿತ್ತು. ಆದ್ರೀಗ, ಕನ್ನಡದಲ್ಲಿ ಸೋನು ನಿಗಮ್ ಮತ್ತು ಅರ್ಮಾನ್ ಮಲ್ಲಿಕ್ ಬೇಡಿಕೆ ಕಮ್ಮಿಯಾಗುತ್ತಿದೆ. ಅದಕ್ಕೆ ಕಾರಣ ಕನ್ನಡದ ಈ ಯುವ ಗಾಯಕ.! ಯಾರದು? ಮುಂದೆ ಓದಿ....

    ಕನ್ನಡಕ್ಕೆ ಇವರೇ ಸೋನು, ಅರ್ಮಾನ್!

    ಕನ್ನಡಕ್ಕೆ ಇವರೇ ಸೋನು, ಅರ್ಮಾನ್!

    ಜೀ-ಕನ್ನಡದ ಸರಿಗಮಪ 13ನೇ ಆವೃತ್ತಿ ಮೂಲಕ ಬೆಳಕಿಗೆ ಬಂದ ಸಂಚಿತ್ ಹೆಗ್ಡೆ ಈಗ ಕನ್ನಡದ ಸ್ಟಾರ್ ಸಿಂಗರ್. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ಹಿಂದಿ, ತೆಲುಗು ಇಂಡಸ್ಟ್ರಿಯಲ್ಲೂ ಸಂಚಿತ್ ಸದ್ದು ಮಾಡ್ತಿದ್ದಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ಕನ್ನಡಕ್ಕೆ ಸಂಚಿತ್ ಹೆಗ್ಡೆ ಅವರೇ ಸೋನು ನಿಗಮ್, ಅರ್ಮಾನ್ ಮಲ್ಲಿಕ್ ಆಗಿದ್ದಾರೆ.

    'ಪೈಲ್ವಾನ್' ಮೂಲಕ ಬಾಲಿವುಡ್ ಪ್ರವೇಶಿಸಿದ ಸಂಜಿತ್ ಹೆಗ್ಡೆ'ಪೈಲ್ವಾನ್' ಮೂಲಕ ಬಾಲಿವುಡ್ ಪ್ರವೇಶಿಸಿದ ಸಂಜಿತ್ ಹೆಗ್ಡೆ

    ಸೋನು ನಿಗಮ್ ಬೇಡಿಕೆ ಕುಸಿದಿದೆ

    ಸೋನು ನಿಗಮ್ ಬೇಡಿಕೆ ಕುಸಿದಿದೆ

    ಕನ್ನಡದಲ್ಲಿ ಸೋನು ನಿಗಮ್ ಅವರು ವರ್ಷಕ್ಕೆ 20 ರಿಂದ 25 ಹಾಡುಗಳನ್ನ ಹಾಡಿರುವ ಉದಾಹರಣೆ ಇದೆ. 2008, 2009, 2010, 2013ನೇ ವರ್ಷಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಆದರೆ, 2018, 2019ನೇ ವರ್ಷದಲ್ಲಿ ನೋಡಿದ್ರೆ ಸೋನು ನಿಗಮ್ ಹಾಡಿರುವುದು ಕೇವಲ 6 ರಿಂದ 8 ಹಾಡುಗಳನ್ನಷ್ಟೆ ಹಾಡಿದ್ದಾರೆ.

    ಅರ್ಮಾನ್ ಬೇಡಿಕೆಯೂ ಕಮ್ಮಿಯಾಗುತ್ತಿದ್ಯಾ?

    ಅರ್ಮಾನ್ ಬೇಡಿಕೆಯೂ ಕಮ್ಮಿಯಾಗುತ್ತಿದ್ಯಾ?

    ಕಳೆದ ಮೂರು ವರ್ಷದಿಂದ ಅರ್ಮನ್ ಮಲ್ಲಿಕ್ ಅವರಿಗೆ ಸ್ಯಾಂಡಲ್ ವುಡ್ನಲ್ಲಿ ಒಳ್ಳೆಯ ಬೇಡಿಕೆ ಇದೆ. ಆದರೆ, ಸಂಚಿತ್ ಹೆಗ್ಡೆ ಕ್ಲಿಕ್ ಆದ್ಮೇಲೆ ಅರ್ಮಾನ್ ಅವರ ಮಾರುಕಟ್ಟೆಗೂ ಹೊಡೆತ ಬಿದ್ದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವರ್ಷ ಅರ್ಮಾನ್ ಕನ್ನಡದಲ್ಲಿ ಹಾಡಿರುವುದು ಬರಿ ಐದು ಹಾಡು.

    ಚಿತ್ರರಂಗದ ಲೆಕ್ಕಾಚಾರವೇನು?

    ಚಿತ್ರರಂಗದ ಲೆಕ್ಕಾಚಾರವೇನು?

    ಸೋನು ನಿಗಮ್ ಮತ್ತು ಅರ್ಮಾನ್ ಮಲ್ಲಿಕ್ ಹಾಡಬೇಕು ಅಂದ್ರೆ ಸಂಭಾವನೆಯೂ ದೊಡ್ಡದಿರುತ್ತೆ. ಮುಂಬೈಗೆ ಹೋಗಬೇಕಾಗುತ್ತೆ. ಅದರ ಬದಲು ಸದ್ಯ ಸಂಚಿತ್ ಹೆಗ್ಡೆ ಅವರಿಂದಲೇ ಹಾಡಿಸಿದರೆ ಲಾಭವೂ ಹೆಚ್ಚಿದೆ. ಸಂಭಾವನೆ, ಸಮಯ, ಪ್ರಚಾರ ಎಲ್ಲವೂ ಇಲ್ಲಿಗೆ ಬೇಕಾದಂತೆ ಬಳಸಬಹುದು. ಬಹುಶಃ ಇದೇ ಅಂಶಗಳನ್ನ ಗಾಂಧಿನಗರವೂ ಕಂಡುಕೊಂಡಿರಬಹುದು.

    ಮುಂದಿನ ವಿಜಯ್ ಪ್ರಕಾಶ್?

    ಮುಂದಿನ ವಿಜಯ್ ಪ್ರಕಾಶ್?

    ಹಾಗ್ನೋಡಿದ್ರೆ, ವಿಜಯ್ ಪ್ರಕಾಶ್ ಈಗ ಇಂಡಸ್ಟ್ರಿಯಲ್ಲಿ ಬೇಡಿಕೆಯಲ್ಲಿರುವ ಗಾಯಕ. ಬಹುತೇಕ ನಿರ್ದೇಶಕರು ವಿಜಯ್ ಪ್ರಕಾಶ್ ಅವರಿಂದ ಒಂದು ಹಾಡು ಹಾಡಿಸಬೇಕು ಎಂಬ ಆಸೆಯಿಂದ ಹಾಡು ಮಾಡಿರ್ತಾರೆ. ಅವರು ಬ್ಯುಸಿಯಿದ್ರೆ ಅಂತಹ ಹಾಡುಗಳು ಈಗ ಸಂಚಿತ್ ಹೆಗ್ಡೆ ಅವರ ಪಾಲಾಗುತ್ತಿದೆ ಎಂಬ ಮಾತಿದೆ.

    ಒಂದು ವರ್ಷದಲ್ಲಿ 40 ಹಾಡು!

    ಒಂದು ವರ್ಷದಲ್ಲಿ 40 ಹಾಡು!

    2018ರಲ್ಲಿ 34 ಹಾಡುಗಳನ್ನ ಹಾಡಿದ್ದ ಸಂಚಿತ್ ಹೆಗ್ಡೆ 2019ರಲ್ಲಿ ಸುಮಾರು 40 ಹಾಡುಗಳನ್ನ ಹಾಡಿದ್ದಾರೆ. ಸದ್ಯ ಸಂಚಿತ್ ಹೆಗ್ಡೆ ಅವರ ಹಾಡುಗಳು ಪಟ್ಟಿ ನೋಡಿದ್ರೆ, ಸದ್ಯದಲ್ಲೆ ಸೆಂಚುರಿ ಬಾರಿಸುವ ಎಲ್ಲ ಲಕ್ಷಣಗಳಿವೆ. ಯಾವ ಗಾಯಕನಿಗೂ ಸಿಗದ ಆರಂಭ ಸಂಚಿತ್ ಹೆಗ್ಡೆ ಅವರಿಗೆ ಸಿಕ್ಕಿದೆ. ಬಹುಶಃ ಇನ್ನು ಕೆಲವು ವರ್ಷ ಸಂಚಿತ್ ಕ್ರೇಜ್ ಹೀಗೆ ಇರುತ್ತೆ.

    English summary
    Indian Star singer Sonu Nigam and Armaan Malik demand slowly came down in kannada film industry because of sanchith hegde.
    Tuesday, November 19, 2019, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X