twitter
    For Quick Alerts
    ALLOW NOTIFICATIONS  
    For Daily Alerts

    ಯಲಹಂಕದ ಆಸ್ಪತ್ರೆಗೆ ಆಮ್ಲಜನಕ ಒದಗಿಸಿದ ಸೋನು ಸೂದ್

    |

    ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ದಣಿಯದೇ ಸಾಮಾಜಿಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಗಡಿಗಳನ್ನು ಹಾಕಿಕೊಳ್ಳದೆ ಯಾರಾದರೂ ಆಗಲಿ, ಎಲ್ಲಿಂದಲೇ ಆಗಲಿ ನೆರವು ಕೇಳಿದ ತಕ್ಷಣ ತಮ್ಮ ಶಕ್ತ್ಯಾನುಸಾರ ಸಹಾಯ ಮಾಡುತ್ತಿದ್ದಾರೆ ಸೋನು ಸೂದ್.

    ಇದೀಗ ಬೆಂಗಳೂರಿಗೆ ತಾಗಿಕೊಂಡೇ ಇರುವ ಯಲಹಂಕದ ಅರ್ಕ ಆಸ್ಪತ್ರೆಗೆ ತುರ್ತಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಿ ಸುಮಾರು 15 ಕೋವಿಡ್ ರೋಗಿಗಳ ಜೀವ ಉಳಿಯಲು ನೆರವಾಗಿದ್ದಾರೆ.

    ಬೆಂಗಳೂರಿನ ಯಲಹಂಕದ ನ್ಯೂ ಟೌನ್ ನಲ್ಲಿರುವ ಅರ್ಕ ಹಾಸ್ಪಿಟಲ್ ನಲ್ಲಿ ಎರಡು ದಿನದ ಹಿಂದೆ ಮಧ್ಯರಾತ್ರಿ 12.30 ಕ್ಕೆ ಆಕ್ಸಿಜನ್ ಖಾಲಿಯಾಗುತ್ತಾ ಬಂದಿತ್ತು. ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಅವಶ್ಯಕತೆ ಇತ್ತು. ಆಗ ಯಲಹಂಕ ನ್ಯೂ ಟೌನ್ ಪೊಲೀಸ್ ಸ್ಟೇಷನ್‌ನ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ನಟ 'ಸೋನು ಸೂದ್ ಚಾರಿಟಬಲ್ ಟ್ರಸ್ಟ್' ಸದಸ್ಯರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಕೂಡಲೇ ಸದಸ್ಯರು ತಡರಾತ್ರಿ 01.30 ಕ್ಕೆ ಬೈಕ್ ಹಾಗೂ ಕಾರುಗಳಲ್ಲಿ 11 ಆಕ್ಸಿಜನ್ ಸಿಲಿಂಡರ್ ಒದಗಿಸಿದರು. ಇದು ಆಸ್ಪತ್ರೆಯಲ್ಲಿರುವ ರೋಗಿಗಳ ಜೀವ ಉಳಿಸಲು ನೆರವಾಯಿತು.

    Sonu Sood Foundation Helps Arka Hospital Yelhanka

    ಸೋನು ಸೂದ್, ಕೆಲವು ದಿನಗಳ ಹಿಂದಷ್ಟೆ ಬೆಂಗಳೂರು ಪೊಲೀಸರ ಬಳಕೆಗೆಂದು ಆಮ್ಲಜನಕ ಸಾಂದ್ರಕ ಯಂತ್ರವನ್ನು ಉಚಿತವಾಗಿ ಒದಗಿಸಿದ್ದರು. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೊಟ್ಟಿಗೆ ವಿಡಿಯೋ ಕಾಲ್‌ ಮೂಲಕ ಮಾತನಾಡಿ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಯಂತ್ರವನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದರು.

    ಸೋನು ಸೂದ್ ಅವರು ತಮ್ಮ ಫೌಂಡೇಶನ್‌ ವತಿಯಿಂದ ದೇಶದಾದ್ಯಂತ ಲಕ್ಷಾಂತರ ಜನಕ್ಕೆ ಸಹಾಯ ಮಾಡುತ್ತಿದ್ದಾರೆ. ಆಮ್ಲಜನಕ ಸಿಲಿಂಡರ್ ವ್ಯವಸ್ಥೆ, ಪ್ಲಾಸ್ಮಾ ವ್ಯವಸ್ಥೆ, ಆಸ್ಪತ್ರೆ ಬೆಡ್ ವ್ಯವಸ್ಥೆ ಇನ್ನೂ ಹಲವು ಮಾದರಿಗಳಲ್ಲಿ ಸೋನು ಸೂದ್ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.

    Recommended Video

    Corona ರೋಗಿಗಳಿಗೆ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ Kichcha Sudeep ಚಾರಿಟೇಬಲ್ ಸೊಸೈಟಿ

    ಕಳೆದ ವರ್ಷ ಭಾರತದಲ್ಲಿ ಕೊರೊನಾ ಲಾಕ್‌ಡೌನ್ ಆದಾಗ ಶುರುವಾದ ಸೋನು ಸೂದ್ ನೆರವಿನ 'ಯಾಗ' ಇನ್ನೂ ನಿಂತಿಲ್ಲ. ದಣಿವರಿಯದೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ ಸೋನು ಸೂದ್.

    English summary
    Sonu Sood foundation helps Arka hospital Yelhanka. Sonu Sood foundation gave 11 Oxygen cylinders to the hospital and help saving lives.
    Wednesday, May 5, 2021, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X