ಬೆಂಗಳೂರಿನಲ್ಲಿ ಸೋನು ಸೂದ್ ಸೇವೆ: 5 ಸಾವಿರ ಜನರಿಗೆ ಆಹಾರ ವಿತರಣೆ
ಬಹುಭಾಷಾ ನಟ ಸೋನು ಸೂದ್ ಮಾನವೀಯ ಕೆಲಸ ದೇಶದಾದ್ಯಂತ ಮುಂದುವರೆದಿದೆ. ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ ಸೇವೆ ಮಾತ್ರವಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಡುತ್ತಿರುವ ಸೋನು ಸೂದ್ ಬೆಂಗಳೂರಿನಲ್ಲಿ 5000ಕ್ಕೂ ಅಧಿಕ ಜನರಿಗೆ ಆಹಾರ ವಿತರಣೆ ಮಾಡಲು ಮುಂದಾಗಿದ್ದಾರೆ.
Recommended Video
ಸೋನು ಸೂದ್ ಟ್ರಸ್ಟ್ ಬೆಂಗಳೂರಿನಲ್ಲಿ 5000ಕ್ಕೂ ಅಧಿಕ ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಕರ್ನಾಟಕ ರೈಲ್ವೆ ಪೊಲೀಸರು ಮತ್ತು ಬೀಯಿಂಗ್ ಬೈಟ್ಸ್ ರೆಸ್ಟೋರೆಂಟ್ ಕೂಡ ಕೈ ಜೋಡಿಸಿದೆ. ಸೋನು ಸೂದ್ ಚಾರಿಟಬಲ್ ನಿಂದ ಫುಡ್ ಫ್ರಮ್ ಸೂದ್ ಅನ್ನೋ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಅಡಿಯಲ್ಲಿ ಪ್ರತಿನಿತ್ಯ 5 ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ರಿಯಲ್ ಹೀರೋ ಸೋನು ಸೂದ್ ದೇಶದ ಮೂಲೆ ಮೂಲೆಯ ಜನರ ನೆರವಿಗೆ ಧಾವಿಸಿದ್ದಾರೆ. ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಸಾವಿರಾರು ಜೀವಗಳನ್ನು ಕಾಪಾಡಿದ್ದಾರೆ.

ಪ್ರತಿನಿತ್ಯ 5 ಸಾವಿರ ಆಹಾರ ಕಿಟ್ ತಯಾರಾಗುತ್ತಿದ್ದು, ಈ ಕಾರ್ಯಕ್ಕೆ ರಿಚ್ ಮಂಡ್ ಟೌನ್ ನಲ್ಲಿರುವ ಬೀಯಿಂಗ್ ರೆಸ್ಟೋರೆಂಟ್ ಅನ್ನು ಉಚಿತವಾಗಿ ಬಳಸಿಕೊಳ್ಳಲು ಮಾಲಿಕ ಇಬ್ರಾಹಿಂ ನೀಡಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ಮಂದಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿದ್ದಾರೆ.

ಉಪೇಂದ್ರ, ಭುವನ್ ಪೊನ್ನಣ್ಣ, ಕಿಚ್ಚ ಸುದೀಪ್, ಸತೀಶ್ ನೀನಾಸಂ, ಕಿರಣ್ ರಾಜ್ ಸೇರಿದಂತೆ ಅನೇಕ ಮಂದಿ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ.


Click it and Unblock the Notifications











