'ಹೊಂಬಣ್ಣ' ಟ್ರೈಲರ್ ನೋಡಿ ಶುಭಹಾರೈಸಿದ್ರು ಬಹುಭಾಷಾ ನಟ ಸೋನು ಸೂದ್
ಮಲೆನಾಡ ಬದುಕಿನ ಸಂಭ್ರಮ ಮತ್ತು ತೊಳಲಾಟಗಳ ಮಧ್ಯೆ ಇರುವ ವಾಸ್ತವತೆಯನ್ನು ತೆರೆಯ ಮೇಲೆ ಹಚ್ಚಲು ಸಿದ್ಧವಾಗಿರುವ 'ಹೊಂಬಣ್ಣ' ಚಿತ್ರದ ಟ್ರೈಲರ್ ಈಗ ಚಂದನವನದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ಚಿತ್ರದ ಟ್ರೈಲರ್ ನೋಡಿ ನಿನ್ನೆಯಷ್ಟೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಈ ಚಿತ್ರಕ್ಕೆ ಬಹುಭಾಷಾ ನಟ ಸೋನು ಸೂದ್ ವಿಶ್ ಮಾಡಿದ್ದಾರೆ ಎಂದರೇ ನಂಬಲೇಬೇಕು. ಸಾಮಾನ್ಯವಾಗಿ ಹೊಸಬರ ಚಿತ್ರಕ್ಕೆ ಪ್ರೋತ್ಸಾಹ ಸಿಗುವುದು, ಬೆನ್ನುತಟ್ಟುವವರ ಸಂಖ್ಯೆ ಕಡಿಮೆಯೇ. ಆದರೆ ಹೊಸ ಪ್ರತಿಭೆ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ಹೊಂಬಣ್ಣ' ಚಿತ್ರದ ಬಗ್ಗೆ ಬಹುಭಾಷಾ ಖ್ಯಾತ ನಟ ಸೋನು ಸೂದ್ ಏನ್ ಹೇಳಿದ್ದಾರೆ ನೋಡಿ..

'ಹೊಂಬಣ್ಣ'ಕ್ಕೆ ಸೋನು ಸೂದ್ ಶುಭಕೋರಿದ್ದಾರೆ
ಬಹುಭಾಷಾ ಖ್ಯಾತ ನಟ ಸೋನು ಸೂದ್ 'ಹೊಂಬಣ್ಣ' ಚಿತ್ರದ ಟ್ರೈಲರ್ ನೋಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಚಿತ್ರ ಉತ್ತಮ ಮನರಂಜನೆ ನೀಡಲಿದೆ, ಚಿತ್ರಕ್ಕೆ ಯಶಸ್ಸು ಸಿಗಲಿ. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಾಣಲಿ ಎಂದು ಶುಭಹಾರೈಸಿದ್ದಾರೆ. ಅಲ್ಲದೇ ನಾನು ಚಿತ್ರ ನೋಡಲು ಕಾತುರನಾಗಿದ್ದೇನೆ ಎಂದಿದ್ದಾರೆ. ಅವರು ಕನ್ನಡದಲ್ಲಿಯೂ ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದರು. 'ಹೊಂಬಣ್ಣ' ಚಿತ್ರದ ಬಗ್ಗೆ ಮಾತನಾಡಿರುವುದನ್ನು ನೋಡಲು ಕ್ಲಿಕ್ ಮಾಡಿ

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ
'ಹೊಂಬಣ್ಣ' ಚಿತ್ರವು ವೆನಿಜುವೆಲಾದಲ್ಲಿ ನಡೆಯಲಿರುವ 'ಫೈವ್ ಕಾಂಟಿನೆಂಟ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್'ಗೆ ಅಧಿಕೃತವಾಗಿ ಆಯ್ಕೆ ಆಗಿದೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಮ್ಮ ಫೇಸ್ ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಏನಂದಿದ್ರು?
ಹೊಸ ಪ್ರತಿಭೆಗಳಿಗೆ ಸದಾ ಸಹಕಾರ ನೀಡುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಸಹ 'ಹೊಂಬಣ್ಣ' ಟ್ರೈಲರ್ ನೋಡಿ, 'ಟ್ರೈಲರ್ ಪ್ರಾಮಿಸ್ಸಿಂಗ್ ಆಗಿದೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದರು.

ಚಿತ್ರದ ತಾರಾಬಳಗ
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಈ ಚಿತ್ರದಲ್ಲಿ ಹಿರಿಯ ನಟರಾದ ಸುಚೇಂದ್ರ ಪ್ರಸಾದ್, ದತ್ತಣ್ಣ ಮತ್ತು ನೀನಾಸಂ ಅಶ್ವಥ್ ಅಭಿನಯಿಸಿದ್ದಾರೆ. ಇವರನ್ನು ಹೊರತುಪಡಿಸಿ ಮಿಮಿಕ್ರಿ ಗೋಪಿ, ಕುಮಾರ್ ಅರಸೇಗೌಡ, ಚೇತನ್ ಚಂದ್ರ, ಧನು ಗೌಡ, ಸುಬ್ಬು ತಳಬಿ ವರ್ಷ ಆಚಾರ್ಯ ಮತ್ತು ಇತರರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸಂಚಲನ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರವು ಜುಲೈ 7 ರಂದು ತೆರೆಕಾಣಲಿದೆ.


Click it and Unblock the Notifications











