ಕಾಲು ಹಿಡಿದಾದ್ರೂ ದರ್ಶನ್ ಸರ್‌ನ ನನ್ನ ಈ ಸಾಂಗ್ ಈವೆಂಟ್‌ಗೆ ಕರ್ಕೊಂಡು ಬರ್ತಿದ್ದೆ - ಸೋನು ಶ್ರೀನಿವಾಸ್ ಗೌಡ
ದರ್ಶನ್ ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ದರ್ಶನ್ ಅವರದ್ದು. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಲವಾರು ತಾರೆಯರ ಚಿತ್ರಗಳಿಗೆ ಈ ಹಿಂದೆ ಬೆನ್ನೆಲುಬಾಗಿದ್ದರು. ತಮ್ಮ ಚಿತ್ರಕ್ಕೂ ಕೊಡದ ಮಹತ್ವವನ್ನು ಬೇರೆಯವರ ಚಿತ್ರಕ್ಕೆ ನೀಡಿ ಆ ಚಿತ್ರದ ಪ್ರಚಾರವನ್ನು ಕಾಯಾ ವಾಚಾ ಮನಸಿಂದ ದರ್ಶನ್ ಮಾಡಿದ್ದರು.
ಆದರೆ, ದುರ್ದೈವ ಇದೇ ಸಮಯದಲ್ಲಿ ಅಪವಿತ್ರ ಸಂಬಂಧಕ್ಕೆ ದರ್ಶನ್ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್‌ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡರು. ಹಿಂದೆಯೂ ಸೆರೆವಾಸ ಅನುಭವಿಸಿದರು. ಈಗಲೂ ಮತ್ತೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆ ದರ್ಶನ್ ಅವರ ಈ ಉದಾರ ಮನೋಭಾವಕ್ಕೆ ಬ್ರೇಕ್ ಬಿದ್ದಂತಾಗಿದೆ. ಹೀಗಿರುವಾಗ ನಾನು ಕಾಲು ಹಿಡಿದಾದರೂ ದರ್ಶನ್ ಅವರನ್ನು ನನ್ನ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತಿದ್ದೆ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು, ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದ ಸೋನು ಗೌಡ ಅವರ ಖಾಸಗಿ ವಿಡಿಯೋವೊಂದು ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು. ಕರುನಾಡಿನೆಲ್ಲೆಡೆ ಚರ್ಚೆಗೀಡಾಗಿತ್ತು.
ಇಂಥಾ ಸೋನು ಶ್ರೀನಿವಾಸ್ ಗೌಡ ಈಗ ರೀಲ್ಸು, ಪಾಲ್ಸು, ಯೂಟ್ಯೂಬ್‌ಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರರಂಗಕ್ಕೂ ಕೂಡ ಬಂದಿದ್ದಾರೆ. ''ಕೇಕೆ'' ಚಿತ್ರದಲ್ಲಿ ''ಗುಂಟೂರು ಅಮ್ಮಾಯಿ'' ಎಂಬ ಹಾಡಿಗೆ ಕುಣಿದಿದ್ದಾರೆ. ಇತ್ತೀಚೆಗೆ ಇವರ ಬರ್ತ್‌ಡೇ ಪ್ರಯುಕ್ತ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದೇ ಸಮಯದಲ್ಲಿ ದರ್ಶನ್ ಅವರನ್ನು ನೆನೆದಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಮಾಧ್ಯಮದವರ ಎದುರು ಈ ಕುರಿತು ಮಾತನಾಡಿರುವ ಸೋನು ಗೌಡ, ನನಗೆ ದರ್ಶನ್ ಸರ್ ಎಂದರೆ ತುಂಬಾನೇ ಇಷ್ಟ. ಅವರ ಮೇಲೆ ಅಪಾರ ಗೌರವ ಇದೆ. ಒಂದು ವೇಳೆ ಅವರು ಹೊರಗಡೆ ಇದ್ದಿದ್ದರೆ, ಅವರ ಕೈ-ಕಾಲು ಹಿಡಿದಾದರೂ ನಮ್ಮ ಚಿತ್ರದ ಈ ಹಾಡಿನ ಬಿಡುಗಡೆ ಸಮಾರಂಭಕ್ಕೆ ಅವರನ್ನು ಕರೆದುಕೊಂಡು ಬರುತ್ತಿದ್ದೆ ಎಂದು ಹೇಳಿದ್ದಾರೆ. ದರ್ಶನ್ ಅವರನ್ನು ತುಂಬಾ ಜನ ಯೂಸ್ ಮಾಡಿಕೊಂಡರು. ಆದರೆ ಕಷ್ಟ ಇದ್ದಾಗ ಯಾರೂ ಬರಲಿಲ್ಲ ಎಂದು ಕೂಡ ಸೋನು ಗೌಡ ಇದೇ ವೇಳೆ ಹೇಳಿದ್ದಾರೆ.

ದರ್ಶನ್ ಅಪ್ಪಟ ಅಭಿಮಾನಿ ಸೋನು ಗೌಡ
ದರ್ಶನ್ ಮೇಲೀನ ತಮ್ಮ ಅಭಿಮಾನವನ್ನು ಸೋನು ಗೌಡ ವ್ಯಕ್ತಪಡಿಸಿದ್ದು ಇದು ಮೊದಲೇನಲ್ಲ. ಈ ಹಿಂದೆ 2024ರಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮೊದಲ ಬಾರಿ ಜೈಲಿಗೆ ಹೋದಾಗಲೂ ಖೂಡ ಸೋನು ಗೌಡ ಅಭಿಮಾನದ ಬಾವುಟ ಹಾರಿಸಿದ್ದರು.
ಈ ಕುರಿತು ತಮ್ಮ ಯೂಟ್ಯೂಬ್‌ನಲ್ಲಿ ಮಾತನಾಡಿದ್ದ ಸೋನು, ನಾನು ದರ್ಶನ್ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿದ್ದರು. ದರ್ಶನ್ ಅವರಿಂದ ಎಷ್ಟು ಜನರು ಬೆಳೆದಿದ್ದಾರೆ.. ? ದರ್ಶನ್ ಅವರನ್ನು ಬಳಸಿಕೊಂಡವರು ಈಗ ಯಾರೂ ಕೂಡ ಮಾತನಾಡುತ್ತಿಲ್ಲ. ದರ್ಶನ್ ಅವರಿಗೆ ಬಹಳಷ್ಟು ಜನರು ಮೋಸ ಮಾಡಿದ್ದಾರೆ, ಆದರೆ ಅವರು ಯಾರಿಗೂ ಮೋಸ ಮಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡ ನೊಂದು ನುಡಿದಿದ್ದರು.
ಮುಂದುವರೆದು ನಾವು ದರ್ಶನ್ ಪರ ನಿಂತುಕೊಳ್ಳಬೇಕು ಎಂದು ಹೇಳಿದ್ದ ಸೋನು ಶ್ರೀನಿವಾಸ್ ಗೌಡ, ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದಾಗಲಿ, ಕಾನೂನಿನ ಪ್ರಕಾರ ಅವರಿಗೆ ಏನು ಸಿಗಬೇಕೋ ಅದು ಸಿಗುತ್ತೆ ಎಂದಿದ್ದರು. ದರ್ಶನ್ ಅವರ ಒಳ್ಳೆಯತನವೇ ಅವರನ್ನು ಕಾಪಾಡತ್ತೆ ಎಂದಿದ್ದರು.


Click it and Unblock the Notifications