ಮದುವೆ ಆಗಲ್ಲ ಆದರೆ ರಾಜಕೀಯಕ್ಕೆ ಎಂಟ್ರಿ ಕೊಡುವ ಪ್ಲ್ಯಾನ್ ಇದೆ ಎಂದ ಸೋನು ಗೌಡ...!

ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದ ಸೋನು ಗೌಡ, ಇತ್ತೀಚೆಗಷ್ಟೇ ಅಕ್ರಮ ದತ್ತು ಮಗು ಪ್ರಕರಣದಲ್ಲಿ ಕೃಷ್ಣನ ಜನ್ಮಸ್ಥಾನಕ್ಕೂ ಹೋಗಿ ಬಂದರು. ಹನ್ನೊಂದು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಬಂದರು.

ಇಂಥ ಸೋನು ಶ್ರೀನಿವಾಸ್ ಗೌಡ ಅವರಲ್ಲಿ ಈಗ ಹೊಸ ಕನಸೊಂದು ಚಿಗುರಿದೆ. ಅದು ರಾಜಕಾರಣಿಯಾಗಬೇಕೆಂಬ ಕನಸು ಅನ್ನುವುದೇ ಈ ಕ್ಷಣದ ಬ್ರೇಕಿಂಗ್ ಸಮಾಚಾರ. ಹೌದು.. ಮೊನ್ನೆವರೆಗೆ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರಬೇಕೆಂಬ ಶಪಥ ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಅವರಿಗೆ ಈಗ ಸಿನಿಮಾದ ಸಹವಾಸ ಸಾಕೆನಿಸಿದೆ. ಈ ಕಾರಣಕ್ಕೆ ರಾಜಕೀಯದ ಅಖಾಡಕ್ಕೆ ಧುಮುಕುವ ಪ್ಲ್ಯಾನ್ ಮಾಡಿರುವ ಸೋನು, ಅದಕ್ಕೆ ಬೇಕಾದ ರೂಪರೇಷೆಯನ್ನು ಸಿದ್ಧ ಮಾಡುತ್ತಿದ್ದಾರೆ. ಹಾಗಂಥ ರಾಜಕೀಯಕ್ಕೆ ಸೋನು ಬಂದೇ ಬರ್ತಾರೆ ಅಂತ ಅಲ್ಲ. ಯಾಕೆಂದರೆ ಬೊಂಬೆ ಆಡ್ಸೋನು ಮೇಲೆ ಕುಂತವ್ನೆ. ದೇವರ ಆಟದ ಮುಂದೆ ನಾನೇನೂ ಪ್ಲ್ಯಾನ್ ಮಾಡಲು ಆಗಲ್ಲ ಎಂದಿದ್ದಾರೆ ಸೋನು ಗೌಡ.

Sonu Srinivas Gowda Expressed Her Desire To Join Politics She Also Spoke About Her Marriage Plan

ಇನ್ನೂ..ಪ್ರತಿ ತಿಂಗಳು ಐವತ್ತು ಸಾವಿರ ದುಡಿಯುವ ಸೋನು ಅವರನ್ನ ಮದುವೆಯಾಗುವ ಸುಂದರಾಂಗ ಜಾಣ ಯಾರು ಅನ್ನುವ ಪ್ರಶ್ನೆ ಅನೇಕರಲ್ಲಿದೆ. ಈ ಪ್ರಶ್ನೆಗೆ ಸೋನು ಅವರಲ್ಲಿಯೂ ಉತ್ತರ ಇಲ್ಲ. ವಾಸ್ತವದಲ್ಲಿ ಮದುವೆಯಾಗುವ ಆಸೆ ಕೂಡ ಸೋನು ಗೌಡ ಅವರಿಗೆ ಸದ್ಯಕ್ಕಿಲ್ಲ. ಆದರೂ.. ಹುಡುಗ ಯಾವ ಬಣ್ಣ ಇದ್ರೂ ಪರ್ವಾಗಿಲ್ಲ, ಆದರೆ ನಂಬಿಕೆ ಇಡಬೇಕು, ಇಬ್ಬರ ನಡುವೆ ಪರಸ್ಪರ ಗೌರವ ಇರಬೇಕು ಎಂದು ಹೇಳಿದ್ದಾರೆ ಸೋನು.

ಉಳಿದಂತೆ ದತ್ತು ಮಗು ಪ್ರಕರಣದ ಬಗ್ಗೆ ನಾನು ಮಾತನಾಡುವಂತೆ ಇಲ್ಲ ಎಂದಿರುವ ಸೋನು ಶ್ರೀನಿವಾಸ್ ಗೌಡ, ಆ ವ್ಯಕ್ತಿ ಅವರಪ್ಪ ಮತ್ತು ಅಮ್ಮ ಜೊತೆ ಇದ್ದಾರೆ ನಾನು ನನ್ನ ಮನೆಯಲ್ಲಿ ನೆಮ್ಮದಿಯಾಗಿ ಇದ್ದೀನಿ. ಕೇಸ್ ಇದ್ದಾಗ ಕೋರ್ಟ್‌ಗೆ ಹೋಗಿ ಬರ್ತೀನಿ ಎಂದಿದ್ದಾರೆ. ಮೀಡಿಯಾದವರನ್ನು ನೋಡಿ ಶಾಕ್ ಆಗಿಲ್ಲ ಏಕೆಂದರೆ ಮೀಡಿಯಾ ನನಗೆ ಹೊಸದಲ್ಲ ಆದರೆ ಅವರಿಗೆ ಇದೇ ನ್ಯೂಸ್‌ ಬೇಕು ಅಂತ ಬಂದಿದ್ದಾರೆ ಎಂದು ನಕ್ಕಿ ಸುಮ್ಮನಾದೆ ಎಂದಿದ್ದಾರೆ. ಇಷ್ಟೇ ಅಲ್ಲ ಈ ಪ್ರಪಂಚದಲ್ಲಿ ಒಳ್ಳತನಕ್ಕೆ ಬೆಲೆ ಇಲ್ಲ ನಾನು ಒಳ್ಳೆ ಕೆಲಸ ಮಾಡಿದಕ್ಕೆ ಜೈಲಿಗೆ ಹೋಗಿ ಬಂದಿದ್ದು ಅಂದಿದ್ದಾರೆ ಸೋನು ಶ್ರೀನಿವಾಸ್ ಗೌಡ

Sonu Srinivas Gowda Expressed Her Desire To Join Politics She Also Spoke About Her Marriage Plan

ಅಂದ್ಹಾಗೇ ಈ ಎಲ್ಲ ವಿಚಾರಗಳನ್ನ ಸೋನು ಶ್ರೀನಿವಾಸ್ ಗೌಡ ತಮ್ಮ ಯುಟ್ಯೂಬ್‌ ನಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನ ಸಾವಿರ ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ತಲೆ ಕೊಡುವುದಿಲ್ಲ ಎಂದು ಕೂಡ ಇದೇ ವಿಡಿಯೋದಲ್ಲಿ ಖಂಡ ತುಂಡವಾಗಿ ಹೇಳಿದ್ದಾರೆ. ಸದ್ಯಕ್ಕೆ ಸೋನು ಗೌಡ ಅವರ ಈ ಜೀವನಾನುಭವದ ಪಾಠವನ್ನ ಯುಟ್ಯೂಬ್‌ ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಕಣ್ತುಂಬಿಕೊಂಡಿದ್ದಾರೆ. 274ಕ್ಕೂ ಅಧಿಕ ಜನ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.

More from Filmibeat

English summary
Sonu Srinivas Gowda Shares Political Ambitions, Discusses Marriage Plans: Insights from the Former and Bigg Boss Contestant"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X