ತಪ್ಪು ಮಾಡದೆ ನಾನು ಜೈಲಿಗೆ ಹೋಗಿ ಬಂದೆ ; ಜೈ ಡಿ ಬಾಸ್ - ರೀಲ್ಸ್ ರಾಣಿ ಸೋನು...!
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಪರಪ್ಪನ ಅಗ್ರಹಾರದ ಪಾಲಾದ ದರ್ಶನ್ ಅತ್ಯುತ್ತಮ ಉದಾಹರಣೆ.
ಮಾಡಬಾರದ್ದನ್ನ ಮಾಡಿದರೆ ಆಗಬಾರದ್ದೇ ಆಗುತ್ತೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತಿರುವ ದರ್ಶನ್, ಈ ಹಿಂದೆ ಅನೇಕರನ್ನು ತಮ್ಮ ತಲೆಯ ಮೇಲೆ ಹೊತ್ತು ಮೆರೆಸಿದ್ದರು. ಅವರ ಚಿತ್ರದ ಪ್ರಚಾರ ಮಾಡಿದ್ದರು. ಆದರೆ ದರ್ಶನ್ ದುರಾದೃಷ್ಟ.. ಈಗ ಅವರು ಯಾರು ಕಾಣುತ್ತಿಲ್ಲ. ಒಂದರ್ಥದಲ್ಲಿ ಕನ್ನಡ ಚಿತ್ರರಂಗ ಸದ್ಯಕ್ಕೆ ದರ್ಶನ್ ಅವರನ್ನು ಮರೆತು ಹೋಗಿದೆ. ಆದರೆ ಅಭಿಮಾನಿಗಳು ಮಾತ್ರ ದರ್ಶನ್ ಅವರನ್ನು ಮರೆತಿಲ್ಲ. ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಕೂಡ ಮರೆತಿಲ್ಲ.

ಹೌದು, ಸೋಶಿಯಲ್ ಮೀಡಿಯಾ ಮೂಲಕವೇ ದುನಿಯಾಗೆ ಚಿರಪರಿಚಿತವಾದ ಸೋನು ಶ್ರೀನಿವಾಸ್ ಗೌಡ, ಸದ್ಯಕ್ಕೆ ದರ್ಶನ್ ಪರವಾಗಿ ಮಾತನಾಡಿದ್ದಾರೆ. ದರ್ಶನ್ ಅವರಿಗೆ ಜೈ ಎಂದು ದರ್ಶನ್ ಅವರಿಗೆ ಅನೇಕರು ಮೋಸ ಮಾಡಿದ್ದಾರೆ ಎಂದು ಕಿಡಿಯನ್ನೂ ಕಾರಿದ್ದಾರೆ. ಈ ಕುರಿತು ತಮ್ಮ ಯೂಟ್ಯೂಬ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸೋನು ಶ್ರೀನಿವಾಸ್ ಗೌಡ ನನಗೂ ಕೆಟ್ಟದಾಗಿ ಅನೇಕರು ಕಾಮೆಂಟ್ ಮಾಡುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಕಾಮೆಂಟ್ ಮಾಡಿದ್ರೆ ಸುಮ್ಮನೆ ಇರ್ತೀರಾ..? ಎಂಬ ಪ್ರಶ್ನೆ ಕೇಳಿದ್ದಾರೆ.
ಇನ್ನೂ ಒಂದು ಸಲ ಅಭಿಮಾನಿಯಾದ್ರೆ ಸಾಯೋವರೆಗೂ ಆ ಅಭಿಮಾನ ಇದ್ದೇ ಇರುತ್ತದೆ. ನಾನು ದರ್ಶನ್ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿರುವ ಸೋನು ಶ್ರೀನಿವಾಸ್ ಗೌಡ ದರ್ಶನ್ ಮಾಡಿದ್ದು ತಪ್ಪು ಅಂತ ನೀವೆಲ್ಲ ಹೇಳುತ್ತಿದ್ದೀರಾ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಕೂಡ ಹೇಳಿದ್ದಾರೆ. ದರ್ಶನ್ ಅವರಿಂದ ಎಷ್ಟು ಜನರು ಬೆಳೆದಿದ್ದಾರೆ.. ? ದರ್ಶನ್ ಅವರನ್ನು ಬಳಸಿಕೊಂಡವರು ಈಗ ಯಾರೂ ಕೂಡ ಮಾತನಾಡುತ್ತಿಲ್ಲ. ದರ್ಶನ್ ಅವರಿಗೆ ಬಹಳಷ್ಟು ಜನರು ಮೋಸ ಮಾಡಿದ್ದಾರೆ, ಆದರೆ ಅವರು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಮುಂದುವರೆದು ತಮ್ಮನ್ನೇ ಉದಾಹರಣೆಯನ್ನಾಗಿ ನೀಡಿರುವ ಸೋನು, ನಾನು ತಪ್ಪು ಮಾಡದೆ ಜೈಲಿಗೆ ಹೋಗಿ ಬಂದಿದ್ದೇನೆ. ನಾನು ಧ್ವನಿ ಎತ್ತಬೇಕು ಅಂತ ಮಾತನಾಡುತ್ತಿದ್ದೇನೆ ಎಂದಿದ್ದಾರೆ. ನನ್ನ ಬಗ್ಗೆ ನಾಳೆ ಎಲ್ಲರೂ ಮಾತನಾಡಬಹುದು, ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ತಪ್ಪು ಮಾಡದೆ ಇದ್ದವರೆಲ್ಲ ಜೈಲಿಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಕೆಟ್ಟದ್ದು ಮಾಡಿದ್ರೆ ಕಾನೂನು ಪ್ರಕಾರ ಶಿಕ್ಷೆ ಆಗತ್ತೆ. ಅಂದು ಅಣ್ಣ, ತಮ್ಮ, ಮಗ ಅಂತ ಹೇಳೋರು ಇವತ್ತು ಬಾಸ್ ಬಗ್ಗೆ ಏನೂ ಮಾತನಾಡ್ತಿಲ್ಲ ಎಂದು ಸೋನು ಗೌಡ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಇಷ್ಟೇ ಅಲ್ಲ ಏನೇ ಆಗಲಿ, ನಾವು ದರ್ಶನ್ ಪರ ನಿಂತುಕೊಳ್ಳಬೇಕು ಎಂದು ಹೇಳಿರುವ ಸೋನು ಶ್ರೀನಿವಾಸ್ ಗೌಡ, ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದಾಗಲಿ, ಕಾನೂನಿನ ಪ್ರಕಾರ ಅವರಿಗೆ ಏನು ಸಿಗಬೇಕೋ ಅದು ಸಿಗುತ್ತೆ ಎಂದಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡೋರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ದರ್ಶನ್ ಅವರ ಒಳ್ಳೆಯತನವೇ ಅವರನ್ನು ಕಾಪಾಡತ್ತೆ ಎಂದು ಕೂಡ ಹೇಳಿದ್ದಾರೆ ಸೋನು ಶ್ರೀನಿವಾಸ್ ಗೌಡ.


Click it and Unblock the Notifications