ಯಡಿಯೂರಪ್ಪ ಜೊತೆ ರೀಲ್ಸ್ ರಾಣಿ ಸೋನು ಗೌಡಗೆ ಪ್ರವಾಸ ಭಾಗ್ಯ, ಫೋಟೊ ವೈರಲ್...!

ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದ ಸೋನು ಗೌಡ, ಮೊನ್ನೆಯಷ್ಟೇ... ತಮ್ಮ ಕನಸಿನ ಮನೆಯನ್ನು ಪ್ರವೇಶಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಯಲ್ಲಿ ತಮ್ಮ ಹೊಸ ಮನೆ ಕಟ್ಟಿಸಿದ್ದಾರೆ. ಈ ಮೂಲಕ ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಇಂಥಾ ಸೋನು ಗೌಡ ಈಗ ಮಾಜಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅನೇಕರ ಕಣ್ಣರಳಿಸಿದ್ದಾರೆ. ಹೌದು, ಅಸಲಿಗೆ ಎಲ್ಲರಿಗೆ ಗೊತ್ತಿರುವಂತೆ ಸೋನು ಗೌಡ ಒಂದು ಕಡೆ ಕೂರುವವರಲ್ಲ. ಸದಾ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಾನೇ ಇರುತ್ತಾರೆ ಸೋನು ಗೌಡ.ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸೋನು ಗೌಡ ಪ್ರವಾಸದ ಗುಂಗಿನಲ್ಲಿ ತಾವು ಇರುವ ಕೆಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಹೀಗೆ ಹಂಚಿಕೊಳ್ಳಲಾದ ಫೋಟೊ ಗುಚ್ಚದಲ್ಲಿ ಒಂದು ಫೋಟೊ ಎಲ್ಲರ ಗಮನ ಸೆಳೆದಿದೆ. ಆ ಫೋಟೊಗೆ ಹಲವಾರು ಅಭಿಪ್ರಾಯ ಕೂಡ ವ್ಯಕ್ತವಾಗಿವೆ. ಆ ಫೋಟೊ ಬೇರೆ ಯಾರದ್ದು ಅಲ್ಲ ಬದಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನ್ನುವುದು ವಿಶೇಷ.

Sonu Srinivas Gowda poses with former CM BSY at the airport has gone viral

ಹೌದು, ಸೋನು ಶ್ರೀನಿವಾಸ್ ಗೌಡ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪಕ್ಕ ಕುಳಿತು ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಅವರ ಜೊತೆಯಲ್ಲಿಯೇ ವಿಮಾನ ನಿಲ್ಧಾಣದಲ್ಲಿ ಬಸ್ ನಲ್ಲಿ ಪ್ರಯಾಣವನ್ನು ಮಾಡಿದ್ದಾರೆ. ಸದ್ಯಕ್ಕೆ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವತ್ತು ಸಾವಿರಕ್ಕೂ ಅಧಿಕ ಇನ್ಸ್ಟಾಗ್ರಾಮ್‌ ಬಳಕೆದಾರರ ಗಮನವನ್ನೂ ಸೆಳೆದಿದೆ. ಇನ್ನೂ.. ಈ ಫೋಟೊಗೆ ಸೋನು ಗೌಡ ನನ್ನ ಜೀವನದಲ್ಲಿ ಕಂಡಂತ ಮೊದಲ ಮುಗ್ಧ ಮನಸಿನ ಮನುಷ್ಯ ಇವರೆ ಎಂದು ಕ್ಯಾಪ್ಷನ್ ನೀಡಿದ್ದು, ಫೋಟೊ ಕಂಡು ಎಲ್ಲಿಂದ ಎಲ್ಲಿಗೆ ಲಿಂಕ್ ಆಗಿದೆ ಗುರು ಇದು ಎಂದು ಒಬ್ಬರು ಹುಬ್ಬೇರಿಸಿದ್ದಾರೆ. ಇನ್ನೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಫೋಟೊ ವೈರಲ್ ಆಗುತ್ತಿದ್ದಂತೆಯೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುವ ವೇಳೆ ಒಂದೇ ವಿಮಾನದಲ್ಲಿ ಬಿಎಸ್‌ವೈ ಹಾಗೂ ಸೋನು ಗೌಡ ಪ್ರಯಾಣ ಮಾಡಿರಬಹುದು ಎನ್ನುವ ಅನುಮಾನವನ್ನು ಅನೇಕರು ವ್ಯಕ್ರಪಡಿಸುತ್ತಿದ್ದಾರೆ. ರಾಜಕೀಯಕ್ಕೆ ಬರುವ ಉದ್ದೇಶದಿಂದ ಭೇಟಿ ಮಾಡಿದ್ದೀರಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಯಾಕೆಂದರೆ ಸೋನು ಶ್ರೀನಿವಾಸ್ ಗೌಡ ಕೆಲ ದಿನಗಳ ಹಿಂದೆ ಸೋನು ಶ್ರೀನಿವಾಸ್ ಗೌಡ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದರು. ಚಿತ್ರರಂಗದ ಸಹವಾಸ ಸಾಕೆನಿಸಿದೆ, ಚಿತ್ರರಂಗಕ್ಕೆ ಬರಬೇಕೆನ್ನುವ ಆಸೆ ಮೊದಲಿತ್ತು ಆದರೆ ಈಗ ಇಲ್ಲ ಎಂದು ಹೇಳಿದ್ದರು. ಈ ಕಾರಣಕ್ಕೆ ಈ ಭೇಟಿಯ ಹಿಂದೆ ರಾಜಕೀಯದ ಉದ್ದೇಶ ಇದ್ದರೂ ಇರಬಹುದು ಎನ್ನುವ ಶಂಕೆಯನ್ನು ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದಂತೆ ಕಳೆದ ಕೆಲ ದಿನಗಳ ಹಿಂದೆ ಸೋನು ಗೌಡ ಮದುವೆ ವಿಚಾರದ ಕುರಿತು ಮಾತನಾಡಿದ್ದರು. ನನಗೆ ಮದುವೆ ಬಗ್ಗೆ ಶೀಘ್ರದಲ್ಲಿಯೇ ಸುದ್ದಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದರು. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕೆಂದು ಅನ್ಸುತ್ತಿದೆ ಎಂದು ಹೇಳಿದ್ದ ಸೋನು ಶ್ರೀನಿವಾಸ್ ಗೌಡ ಹುಡುಗ ಯಾರು ಏನು ಎನ್ನುವ ಡಿಟೈಲ್ಸ್ ಬೇಕಾದರೆ ಕಾಮೆಂಟ್ ಮಾಡಿ ಎಂದು ಹೇಳಿದ್ದರು.

More from Filmibeat

Read more about: sonu gowda politics viral photo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X