ಬೆಡ್‌ ರೂಮ್‌ನಲ್ಲಿ ''ಮಲ್ಲ,ಮಲ್ಲ, ಮಲ್ಲ ಮನಸು ಹಿಂಡಿದನಲ್ಲ'' ಎಂದ ಸೋನು ಗೌಡ...!

By ಫಿಲ್ಮಿಬೀಟ್ ಡೆಸ್ಕ್

ಸೋನು ಗೌಡ ಗೊತ್ತಲ್ವಾ.. ? ಸಾಮಾಜಿಕ ಜಾಲತಾಣದ ಮೂಲಕವೇ ಜಗದ್ವಿಖ್ಯಾತಿಯನ್ನು ಗಳಿಸಿದವರು. ಜನಪ್ರಿಯತೆಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದ ಸೋನು ಗೌಡ, ಅಕ್ರಮ ದತ್ತು ಮಗು ಪ್ರಕರಣದಲ್ಲಿ ಕೃಷ್ಣನ ಜನ್ಮಸ್ಥಾನಕ್ಕೂ ಹೋಗಿ ಬಂದರು. ಹನ್ನೊಂದು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಬಂದರು.

ಇಂಥಾ ಸೋನು ಗೌಡ ಸದ್ಯಕ್ಕೆ ಪ್ರವಾಸದಲ್ಲಿದ್ದಾರೆ. ಗೋವಾದ ಕಡಲ ಕಿನಾರೆಯಲ್ಲಿ ಕೆಲ ಹೊತ್ತು ಕಾಲ ಕಳೆದಿದ್ದಾರೆ. ತಮ್ಮೆಲ್ಲ ಹಿಂಬಾಲಕರಿಗಾಗಿ ತಮ್ಮ ಬೆಡ್‌ ರೂಮ್‌ನಿಂದನೇ ರೀಲ್ಸ್ ಮಾಡಿದ್ದಾರೆ. ಈ ಮೂಲಕ ಕೆಲವರ ಕಣ್ಣರಳಿಸಿ, ಇನ್ನೂ ಹಲವರ ಕಣ್ಣು ಕೆಂಪಾಗಿಸಿದ್ದಾರೆ. ಇದಕ್ಕೆ ಅವರ ಹಾವ ಭಾವ ಒಂದು ಕಾರಣವಾದರೆ ಮತ್ತೊಂದು ಅವರು ಆಯ್ಕೆ ಮಾಡಿಕೊಂಡ ಹಾಡು.

sonu-srinivas-gowdas-latest-reel-goes-viral-on-social-media

ಹೌದು, ತಮ್ಮ ಸೌಂದರ್ಯದಿಂದ ಇಲ್ಲಿಯವರೆಗೆ ಹತ್ತಾರು ಬಾರಿ ಸುದ್ದಿಯಾಗಿ, ಹಲವಾರು ಬಾರಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ ಸೋನು ಗೌಡ, ಮೊನ್ನೆ ಮೊನ್ನೆ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅವರ ಪುರಾತನ ಕಾಲದ ಸಿನಿಮಾ ನೀಲಕಂಠ ಚಿತ್ರದ ಹಾಡೊಂದಕ್ಕೆ ಹಾಸಿಗೆ ಮೇಲೆ ಕುಳಿತು ಹೊರಳಾಡಿದ್ದಾರೆ . ಆ ಕಾಲದಲ್ಲಿ ಎಲ್ಲರ ಹೃದಯಕ್ಕೆ ಕಿಚ್ಚು ಹಚ್ಚಿದ್ದ ನಮಿತಾ ಅವರನ್ನು ನೆನಪಿಸಿದ್ದಾರೆ. "ಮಲ್ಲ ಮಲ್ಲ ಮನಸು ಹಿಂಡಿದನಲ್ಲ" ಹಾಡಿನ ಮೂಲಕ ತಮ್ಮ ಬಾಯಾರಿದ ಪಡ್ಡೆಹುಡುಗರ ದಾಹ ತಣಿಸುವ ಕೆಲಸವನ್ನೂ ಮಾಡಿದ್ದಾರೆ ಸೋನು ಶ್ರೀನಿವಾಸ್ ಗೌಡ.

ಸದ್ಯಕ್ಕೆ ಸೋನು ಗೌಡ ಅವರ ಈ ಹಾಡು-ಪಾಡು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕೆಲವರು ಸೋನು ಅವರ ಈ ಸಾಂಗ್‌ಗೆ ಕುಂತಲ್ಲೇ ಕುಂತಲ್ಲೇ ಥಕ ಥೈ ಎಂದು ಕುಣಿಯುತ್ತಿದ್ದಾರೆ. ಇನ್ನೂ ಕೆಲವರು ಸುಂದರವಾದ ಗೊಂಬೆ ಎಂದು ಹಾಡಿ ಹೊಗಳುತ್ತಿದ್ದಾರೆ. ಮತ್ತೂ ಕೆಲವರು ಸೋನು ಗೌಡ ವಿರುದ್ದ ಕೆಂಡ ಕಾರಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಭ್ಯತೆ-ಸಂಸ್ಕ್ರತಿಯ ಪಾಠವನ್ನೂ ಮಾಡುತ್ತಿದ್ದಾರೆ.

sonu-srinivas-gowdas-latest-reel-goes-viral-on-social-media

ಇದೆಲ್ಲದರ ಫಲಿತಾಂಶ ಎಂಬಂತೆ ಈ ವಿಡಿಯೋವನ್ನೂ ಹತ್ ಹತ್ರ 14.000 ಜನ ಶೇರ್ ಮಾಡಿದ್ಧಾರೆ. ಸರಿ ಸುಮಾರು 1500 ಕಮೆಂಟ್‌ಗಳನ್ನೂ ಮಾಡಿದ್ದಾರೆ. ಈ ಅಭಿಪ್ರಾಯಗಳಿಗೆಲ್ಲ ಸೋನು ಗೌಡ ಮಣೆ ಹಾಕಿಲ್ಲ ಅನ್ನುವುದು ಬೇರೆ ವಿಚಾರ

ಈ ವಿಡಿಯೋ ಹೊರತು ಪಡಿಸಿದರೆ ಸೋನು ಗೌಡ ತಮ್ಮ ಈ ಗೋವಾ ರಜಾ-ಮಜಾ ಕಾರ್ಯಕ್ರಮದ ದಿನನಿತ್ಯದ ದಿನಚರಿಯನ್ನೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫೋಟೋ ಮತ್ತು ವಿಡಿಯೋಗಳನ್ನೂ ಒಂದಾದ ಮೇಲೊಂದರಂತೆ ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿದ್ಧಾರೆ. ಅನೇಕರ ಗಮನವನ್ನೂ ಸೆಳಿಯುತ್ತಿದ್ದಾರೆ. ಹೀಗೆ ಸೋನು ಗೌಡ ಹಂಚಿಕೊಂಡ ಉಳಿದ ಫೋಟೋ ಮತ್ತು ವಿಡಿಯೋಗಳಿಗೆ ಕೂಡ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. ಟ್ರೋಲಿಗರಿಗೆ ಸೋನು ಗೌಡ ಅವರ ಈ ಗೋವಾ ಪ್ರವಾಸ ತಾಂಬೂಲವೂ ಆಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X