twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿಗೆ 'Sorry' ಕೇಳಿದ ನಟ ಸತೀಶ್ ನೀನಾಸಂ

    |

    ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳು ಸೆಟ್ಟೇರಿ, ರಿಲೀಸ್ ಆಗುತ್ತವೆ. ಆದ್ರೆ ಕೆಲವೇ ಕೆಲವು ಬೆರಳೆಣಿಕೆಯ ಸಿನಿಮಾಗಳು ಮಾತ್ರ ಚಿತ್ರಾಭಿಮಾನಿಗಳ ಹೃದಯ ಗೆಲ್ಲುತ್ತವೆ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಮತ್ತು ಹೊಸತನದ ಚಿತ್ರಗಳಿಗೆ ಪ್ರೇಕ್ಷಕರು ಹೆಚ್ಚು ಆದ್ಯತೆ ನೀಡುತ್ತಾರೆ.

    ಈಗ ಇಂತಹದೆ ಒಂದು ವಿನೂತನ ಚಿತ್ರ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿದೆ. ಅದೇ 'Sorry ಕಾವೇರಿ' ಸಿನಿಮಾ. ಭಾವನಾತ್ಮಕ ಟೈಟಲ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ 'Sorry ಕಾವೇರಿ' ಸಿನಿಮಾ ಸದ್ಯ ಕುತೂಹಲ ಕೆರಳಿಸುವ ಪೋಸ್ಟರ್ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬಂದಿದ್ದಾರೆ.

    ಬಿಗ್ ಬಜೆಟ್ ಚಿತ್ರದಲ್ಲಿ ಸತೀಶ್ ನೀನಾಸಂ ಬಿಗ್ ಬಜೆಟ್ ಚಿತ್ರದಲ್ಲಿ ಸತೀಶ್ ನೀನಾಸಂ

    ಅಂದ್ಹಾಗೆ ಸತೀಶ್ ಯಾಕೆ ಸಾರಿ ಕೇಳಿದ್ರು ಅಂತ ಅಂದ್ಕೋತ್ತಿದ್ದೀರಾ. ಯಾಕಂದ್ರೆ 'Sorry ಕಾವೇರಿ' ಚಿತ್ರದ ಫಸ್ಟ್ ಲುಕ್ ಅನ್ನು ನಟ ನೀನಾಸಂ ಸತೀಸ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಗಮನ ಸಳೆಯುತ್ತಿದೆ ಕಾವೇರಿ ಫಸ್ಟ್ ಲುಕ್

    ಗಮನ ಸಳೆಯುತ್ತಿದೆ ಕಾವೇರಿ ಫಸ್ಟ್ ಲುಕ್

    ಈ ಪೋಸ್ಟರ್ ನಲ್ಲಿ ಪುಟ್ಟು ಮುಗ್ದ ಬಾಲಕಿಯೊಬ್ಬಳು ಕ್ಯಾಮರಾ ಕೈಯಲ್ಲಿ ಹಿಡಿದು ನಗು ಬೀರುತ್ತ ನಿಂತಿರುವ ಫೋಟೋ ಒಂದೆಡೆ ಆದ್ರೆ, ಪಕ್ಕದಲ್ಲೆ ಯಶಸ್ವಿಯಾಗಿ ರೆಕಾರ್ಡ್ ಆಗುತ್ತಿದೆ ಎನ್ನುವ ಬಾಲಕಿಯ ನೆರಳಿನ ಫೋಟೋ. ಎರಡು ಕೂಡ ತದ್ವಿರುದ್ಧವಾಗಿದೆ. ಈ ಪೋಸ್ಟರ್ ಈಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

    ಕಿರುಚಿತ್ರದಿಂದ ತೆಲುಗಿನಲ್ಲಿ ದೊಡ್ಡ ಆಫರ್ ಪಡೆದ ಕನ್ನಡದ ಪುಟ್ಟ ಹುಡುಗಿಕಿರುಚಿತ್ರದಿಂದ ತೆಲುಗಿನಲ್ಲಿ ದೊಡ್ಡ ಆಫರ್ ಪಡೆದ ಕನ್ನಡದ ಪುಟ್ಟ ಹುಡುಗಿ

    ಚಿತ್ರದ ಒನ್ ಲೈನ್ ಸ್ಟೋರಿ

    ಚಿತ್ರದ ಒನ್ ಲೈನ್ ಸ್ಟೋರಿ

    ಪೋಸ್ಟರ್ ಡಿಸೈನ್ ಕೂಡ ಆಕರ್ಷವಾಗಿದೆ. ಅಂದ್ಹಾಗೆ 'Sorry ಕಾವೇರಿ' ದಲ್ಲಿ ಬಾಲಕಿ ಕಾವೇರಿ ಹುಟ್ಟುಹಬ್ಬಕ್ಕೆ ಆಕೆಯ ತಂದೆ ಒಂದು ಹ್ಯಾಂಡಿಕ್ಯಾಮರಾ ಉಡುಗೊರೆಯಾಗಿ ಕೊಡ್ತಾರೆ. ಅಲ್ಲಿಂದ ಕಾವೇರಿ ಆ ಕ್ಯಾಮರಾದೊಂದಿಗೆ ನಂಟು ಬೆಳೆಸಿಕೊಳ್ತಾಳೆ. ಸದಾ ಕೈಯಲ್ಲಿ ಕ್ಯಾಮರಾ ಹಿಡಿದು ತಿರುಗುವ ಕಾವೇರಿಯ ಬದುಕಿನ ಹಲವು ಸುಂದರ ಕ್ಷಣಗಳು ಆ ಕ್ಯಾಮರಾದಲ್ಲಿ ಸೆರೆಯಾಗುತ್ತವೆ. ಆದರೆ ಮುಂದೆ ಅವಳ ಬದುಕಿನಲ್ಲಿ ಬರುವ ಒಂದು ಕೆಟ್ಟ ಅಧ್ಯಾಯಕ್ಕೂ ಆ ಕ್ಯಾಮರಾ ಸಾಕ್ಷಿಯಾಗುತ್ತದೆ. ಇದು ಸಿನಿಮಾದ ಒನ್ ಲೈನ್ ಸ್ಟೋರಿ.

    ಕಾವೇರಿ ಪಾತ್ರದಲ್ಲಿ ಪ್ರಾಣ್ಯಾ ರಾವ್

    ಕಾವೇರಿ ಪಾತ್ರದಲ್ಲಿ ಪ್ರಾಣ್ಯಾ ರಾವ್

    ಅಂದ್ಹಾಗೆ ಕಾವೇರಿ ಪಾತ್ರದಲ್ಲಿ ಖ್ಯಾತ ಬಾಲನಟಿ ಪ್ರಾಣ್ಯಾ ರಾವ್ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಾಣ್ಯಾ ಈ ಸಿನಿಮಾದಲ್ಲಿ ಕಾವೇರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರಾಣ್ಯಾ ಅಭಿನಯದ ಮುದ್ದು ಮುದ್ದಾಗಿ ಕಿರುಚಿತ್ರ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟ್ ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೆ ತೆಲುಗು ನಟ ನಾಣಿ ಚಿತ್ರದಲ್ಲು ಪ್ರಾಣ್ಯಾ ಅಭಿನಯಿಸಿದ್ದಾರೆ.

    ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಪಡೆದ 'ಮುದ್ದು ಮುದ್ದಾಗಿ' ಕಿರುಚಿತ್ರಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಪಡೆದ 'ಮುದ್ದು ಮುದ್ದಾಗಿ' ಕಿರುಚಿತ್ರ

    ಅಮಿತ್ ದೇಸಾಯಿ ಮತ್ತು ಹರಿ ಪರಾಕ್ ನಿರ್ದೇಶನ

    ಅಮಿತ್ ದೇಸಾಯಿ ಮತ್ತು ಹರಿ ಪರಾಕ್ ನಿರ್ದೇಶನ

    ಇನ್ನು Sorry ಕಾವೇರಿ ಚಿತ್ರಕ್ಕೆ ಅಮಿತ್ ದೇಸಾಯಿ ಮತ್ತು ಹರಿ ಪರಾಕ್ ಇಬ್ಬರು ಆಕ್ಷನ್ ಕಟ್ ಹೇಳಿದ್ದಾರೆ. ಇವರಿಬ್ಬರು ಸಹ ಸಿನಿಮಾ ಪತ್ರಕರ್ತರು. ಕಳೆದೊಂದು ದಶಕಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿ ಅನುಭವ ಇರುವ ಅಮಿತ್ ಮತ್ತು ಹರಿ ಅವರಿಗೆ ಸಿನಿಮಾ ಮಾಡಬೇಕೆನ್ನುವುದು ದೊಡ್ಡ ಕನಸಿತ್ತು. ಹಲವು ನೈಜ ಘಟನೆಗಳ ಸ್ಫೂರ್ತಿಯೊಂದಿಗೆ ಈಗ Sorry ಕಾವೇರಿ ಸಿನಿಮಾ ಮೂಲಕ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

    ವಿ. ಮನೋಹರ್ ಸಂಗೀತ

    ವಿ. ಮನೋಹರ್ ಸಂಗೀತ

    ಇನ್ನು ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎ ಆರ್ ಎಮ್ ಮೂವೀಸ್ ಸಂಸ್ಥೆಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈಗಾಗಲೆ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪೋಸ್ಟರ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ಚಿತ್ರದ ಪೋಸ್ಟರೇ ಈ ಪರಿ ಸದ್ದು ಮಾಡುತ್ತದೆ ಅಂದ್ಮೇಲೆ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಹೆಚ್ಚಾಗಿದೆ.

    English summary
    Sorry Kaveri Kannada film First look released by actor Sathish ninasam.
    Friday, August 2, 2019, 10:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X