ಇಂದು ನಟಿ ಸೌಂದರ್ಯ ಅಭಿಮಾನಿಗಳ ಪಾಲಿಗೆ ಕರಾಳ ದಿನ
ನಟಿ ಸೌಂದರ್ಯ ಸಾವನಪ್ಪಿ ಅನೇಕ ವರ್ಷಗಳೇ ಕಳಿದುಹೋಗಿವೆ. ಇಂದು ನಟಿ ಸೌಂದರ್ಯ ಅವರ 15ನೇ ವರ್ಷದ ಪುಣ್ಯಸ್ಮರಣೆ. 90 ದಶಕದಲ್ಲಿ ಬಹುಭಾಷೆ ನಟಿಯಾಗಿ ಮೆರೆದ ಕನ್ನಡದ ನಟಿ ಸೌಂದರ್ಯ ಅದ್ಭುತ ಅಭಿನಯದ ಮೂಲಕವೇ ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿದ್ದರು.
ಸೌಂದರ್ಯ ಎನ್ನುವ ಪ್ರತಿಭಾವತ ನಟಿಯ ಸಾವು ಅಭಿಮಾನಿಗಳಿಗೆ ಇಂದಿಗು ಮರೆಯಲಾದ ನೋವು. ಬಹುಭಾಷೆಯಲ್ಲೂ ಬಹುಬೇಡಿಯ ನಟಿಯಾಗಿದ್ದ ಸೌಂದರ್ಯ ವಿಧಿಯಾಟದ ಮುಂದೆ ಸೋತು ವಿಮಾನ ದುರಂತದಲ್ಲಿ ಸಾವಿನಪ್ಪಿದ್ದರು. ಏಪ್ರಿಲ್ 17 ಸೌಂದರ್ಯ ಅಭಿಮಾನಿಗಳು ಎಂದಿಗೂ ಮರೆಯಲಾಗದ ದಃಖದ ಕರಾಳ ದಿನ.
ಹೆಸರಿಗೆ ತಕ್ಕಂತೆ ಅಪ್ರತಿಮ ಸೌಂದರ್ಯವತಿಯಾಗಿದ್ದ ಸೌಂದರ್ಯ ಚೆಲುವಿಗೆ ಮಾರುಹೋಗದವರಿಲ್ಲ. ಚಿತ್ರಪ್ರಿಯರ ನೆಚ್ಚನ ನಟಿ ಸೌಂದರ್ಯ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರರಂಗದಲ್ಲು ಮಿಂಚು ಹರಿಸಿದವರು. ಎಲ್ಲಾ ಭಾಷೆಯ ದಿಗ್ಗಜ ನಟರ ಜೊತೆ ಅಭಿನಯಿಸಿದ ಖ್ಯಾತಿ ಸೌಂದರ್ಯ ಅವರಿಗಿದೆ.
ಕೇವಲ 27ನೇ ವಯಸ್ಸಿನಲ್ಲೇ ದುರಂತ ಸಾವನಪ್ಪಿದ ಸೌಂದರ್ಯ ಅವರ ಅಗಲಿಗೆ ಭಾರತೀಯ ಚಿತ್ರರಂಗದ ಪಾಲಿನ ದುರಂತ. 'ಸಿಪಾಯಿ', 'ದೋಣಿಸಾಗಲಿ', 'ನಾನು ನನ್ನ ಹೆಂಡ್ತೀರು', 'ನಾಗದೇವತೆ', 'ಆಪ್ತಮಿತ್ರ' ಚಿತ್ರಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ ಸೌಂದರ್ಯ ಇಂದಿಗೂ, ಎಂದೆಂದಿಗೂ ಅಮರ.ಮುಂದೆ ಓದಿ..

ಕಡಿಮೆ ಅವಧಿಯಲ್ಲಿ 120ಕ್ಕು ಹೆಚ್ಚು ಚಿತ್ರಗಳು
ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಪಯಣ ಶುರುಮಾಡಿದ ಸೌಂದರ್ಯ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಮಿಂಚುವ ಜೊತೆಗೆ ಬಾಲಿವುಡ್ ಚಿತ್ರರಸಿಕರನ್ನು ರಂಜಿಸಿದ್ದಾರೆ. 1992ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ ಈ ಚೆಲುವೆ 12 ವರ್ಷದಲ್ಲಿ 120ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಸೌಂದರ್ಯ ಅವರದ್ದು. ಕನ್ನಡ ಚಿತ್ರರಂಗದ ಮೂಲಕ ಪಯಣ ಪ್ರಾರಂಭಿಸಿದ ಈ ನಟಿ ಕನ್ನಡದಲ್ಲೇ ಕೊನೆಯ ಸಿನಿಮಾ ಮಾಡಿ ಕನ್ನಡಾಭಿಮಾನಿಗಳಿಗೆ ಮರೆಯಲಾಗದ ನೋವು ನೀಡಿ ಬಾರದ ಲೋಕಕ್ಕೆ ಹೊರಟು ಹೋಗಿ 15ವರ್ಷಗಳಾಗಿವೆ.

ವೈದ್ಯೆಯಾಗಬೇಕಿದ್ದ ಸೌಂದರ್ಯ
ಸೌಂದರ್ಯ ನಟಿಯಾಗದಿದ್ದರೆ ಡಾಕ್ಟರ್ ಆಗಿ ಜನರ ಸೇವೆ ಮಾಡುತ್ತಿದ್ದರು. ಯಾಕೆಂದ್ರೆ ಪಿಯುಸಿ ಮುಗಿಸಿದ ನಂತರ ಸೌಂದರ್ಯ ಮೊದಲ ವರ್ಷದ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿದ್ದರು. ಆದ್ರೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೌಂದರ್ಯ ಭಾರತೀಯ ಚಿತ್ರರಂಗದ ಮೇರು ನಟಿಯಾಗಿ ಬೆಳೆದು ಅಲ್ಪ ಕಾಲದಲ್ಲೆ ದುರಂತ ಸಾವಿಗೆ ಸುತ್ತಾದರು.

ದ್ವೀಪ ಚಿತ್ರದ ಮೂಲಕ ನಿರ್ಮಾಪಕಿ ಆದ ನಟಿ
ಕಮರ್ಷಿಯಲ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸೌಂದರ್ಯ 'ದ್ವೀಪ' ಚಿತ್ರದ ಮೂಲಕ ಕಲಾತ್ಮಕ ಚಿತ್ರದಲ್ಲೂ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು. ಅಭಿನಯದ ಜೊತೆಗೆ 'ದ್ವೀಪ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಬಡ್ತಿ ಕೂಡ ಪಡೆದ್ದರು ಸೌಂದರ್ಯ. ಗರೀಶ್ ಕಾರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ 'ದ್ವೀಪ' ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಷ್ಟೆಯಲ್ಲ ಸಾಕಷ್ಟು ಪ್ರಶಸ್ತಿಗಳು ಹರಿದು ಬಂದಿದ್ದವು.

ಭಾರತೀಯ ಚಿತ್ರರಂಗದ ಪರಿಪೂರ್ಣ ನಟಿ
ಸೌಂದರ್ಯ ಮತ್ತು ತೆಲುಗು ನಟ ವೆಂಕಟೇಶ್ ಅವರ ಜೋಡಿ ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಜೋಡಿಯಾಗಿತ್ತು. ಸಿನಿಪ್ರಿಯರ ಫೇವರಿಟ್ ಫೇರ್ ಆಗಿದ್ದ ಇವರು ಸುಮಾರು 6ಕ್ಕು ಹೆಚ್ಚು ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಸೌಂದರ್ಯ ಅವರ ಅದ್ಭುತ ನಟನೆ ಕಂಡು ನಟ ವೆಂಕಟೇಶ್ ಭಾರತೀಯ ಚಿತ್ರರಂಗದ ಪರಿಪೂರ್ಣ ನಟಿ ಸೌಂದರ್ಯ ಎಂದು ಬಿರುದು ನೀಡಿದ್ದರು.


Click it and Unblock the Notifications











