ಸೌಂದರ್ಯಾ ವಿಮಾನ ಏರುವುದಕ್ಕೂ ಮುನ್ನ ಅತ್ತಿಗೆ ಬಳಿ ಇಟ್ಟಿದ್ದ ಆ ಎರಡು ಬೇಡಿಕೆ ಏನಾಗಿತ್ತು?
ಈಕೆಯ ಸೌಂದರ್ಯವನ್ನೇ ನೋಡಿಯೇ ಆ ಹೆಸರು ಇಟ್ಟಿದ್ದರೋ ಏನೋ..? ಅಂದ್ಹಾಗೆ ಇವರ ಹುಟ್ಟಿದ ಹೆಸರು ಸೌಮ್ಯಾ ಸತ್ಯನಾರಾಯಣ. ಸಿನಿಮಾಗಾಗಿ ಇವರ ಹೆಸರು ಸೌಂದರ್ಯಾ ಅಂತ ಬದಲಾಗಿತ್ತು. ಅತೀ ಕಡಿಮೆ ಸಮಯದಲ್ಲಿ ಅತೀ ದೊಡ್ಡ ಹೆಸರು ಸಂಪಾದಿಸಿದ್ದ ನಾಯಕಿ ಅಂದ್ರೆ ಅದು ಸೌಂದರ್ಯಾ.
ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಸೌಂದರ್ಯಾ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಆದರು ದುರಾದೃಷ್ಟವಶಾತ್ 2004, ಏಪ್ರಿಲ್ 17ರಂದು 27ನೇ ವಯಸ್ಸಿನಲ್ಲಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದರು. ಈ ಸಾವನ್ನು ಇಂದಿಗೂ ಸಿನಿಮಾ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸೌಂದರ್ಯಾ ಅಗಲಿ ಹೆಚ್ಚು ಕಡಿಮೆ ಎರಡು ದಶಕಗಳಾಗುತ್ತಿವೆ. ಆದರೂ ಸೌಂದರ್ಯಾ ಬಗ್ಗೆ ಒಂದಲ್ಲ ಒಂದು ಸಂಗತಿಗಳನ್ನು ಹೊರಬರುತ್ತಲೇ ಇವೆ. ಬಹುಭಾಷಾ ನಟಿ ಸೌಂದರ್ಯಾ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಪ್ರಚಾರಕ್ಕೆ ವಿಮಾನದ ಮೂಲಕ ತೆಲಂಗಾಣದ ಕರೀಂನಗರ ತಲುಪಬೇಕಿತ್ತು. ವಿಮಾನ ಏರುವುದಕ್ಕೂ ಮುನ್ನ ಸೌಂದರ್ಯ ತನ್ನ ಅತ್ತಿಗೆ ಬಳಿ ಎರಡು ವಸ್ತುಗಳಿಗೆ ಬೇಡಿಕೆ ಇಟ್ಟಿದ್ದರು. ಅದೇನು ಅನ್ನೋದರ ಡಿಟೈಲ್ಸ್ ಇಲ್ಲಿದೆ.
ಬಿಜೆಪಿ ಪರ ಸೌಂದರ್ಯಾ ಪ್ರಚಾರ
ಸೌಂದರ್ಯಾ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ಜನಪ್ರಿಯತೆಯನ್ನು ಗಳಿಸಿದ್ದರು. ಹೀಗಾಗಿ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿದ್ದರು. ಮೊದಲೇ ನಿಗದಿಯಾಗಿದ್ದಂತೆ ತೆಲಂಗಾಣದ ಕರೀಂನಗರದಲ್ಲಿ ಚುನಾವಣಾ ಪ್ರಚಾರ ಮಾಡಬೇಕಿತ್ತು.

ಸೌಂದರ್ಯಾಗೆ ಸಿನಿಮಾ ಜೊತೆ ಜೊತೆ ರಾಜಕೀಯದಲ್ಲೂ ಒಲವು ಬೆಳೆಸಿಕೊಂಡಿದ್ದರು. ಹೀಗಾಗಿಯೇ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ. ಸೌಂದರ್ಯಾ ಅಣ್ಣ ಅಮರ್‌ನಾಥ್ ಕೂಡ ಇವರ ಜೊತೆಯಲ್ಲೇ ಇರುತ್ತಿದ್ದರು. ಆದರೆ, ವಿಧಿಯಾಟ ಬೇರೆನೇ ಆಗಿತ್ತು. ಆದರೆ, ವಿಮಾನ ಏರುವುದಕ್ಕೂ ಮುನ್ನ ಸೌಂದರ್ಯಾ ತನ್ನ ಅತ್ತಿಗೆ ಬಳಿ ಎರಡು ವಸ್ತುಗಳಿಗೆ ಬೇಡಿಕೆಯನ್ನು ಇಟ್ಟಿದ್ದರು.
ಅಪಘಾತಕ್ಕೀಡಾಗುವ ಮುನ್ನ ಇಟ್ಟ ಬೇಡಿಕೆ ಏನು?
ಸೌಂದರ್ಯಾ ಹಾರ್ಡ್ ವರ್ಕರ್, ಕೆಲಸದಲ್ಲಿ ಶಿಸ್ತು. ಇದನ್ನು ಅದೆಷ್ಟೋ ಬಾರಿ ಅವರ ಆತ್ಮೀಯರೇ ಹೇಳಿದ್ದಾರೆ. ಚುನಾವಣಾ ಪ್ರಚಾರ ಮಾಡುವಾಗಲೂ ಇದೇ ಶಿಸ್ತನ್ನು ಕಾಪಾಡಿಕೊಂಡಿದ್ದರು. ಬಿಜೆಪಿ ಪಕ್ಷ ಸೌಂದರ್ಯಾ ಜೊತೆ ಎರಡು ತಿಂಗಳು ಪ್ರಚಾರಕ್ಕೆಂದು ಒಡಂಬಡಿಕೆ ಮಾಡಿಕೊಂಡಿತ್ತು. ಹೀಗಾಗಿ ಸೌಂದರ್ಯಾ ಪ್ರಚಾರಕ್ಕೆಂದು ವಿಮಾನ ಏರಬೇಕು ಅನ್ನುವಾಗ, ಅವರಿಗೆ ಎರಡು ವಿಷಯಗಳನ್ನು ಗಮನಕ್ಕೆ ಬಂದಿತ್ತು.
ಹೀಗಾಗಿ ಅತ್ತಿಗೆಯನ್ನು ಕರೆದು, ತನ್ನ ಬಳಿ ಕಾಟನ್ ಸೀರೆಗಳು ಇಲ್ಲ ಅದನ್ನು ಖರೀದಿ ಮಾಡುವಂತೆ ಹೇಳಿದ್ದರು. ಅಲ್ಲದೆ ಕುಂಕುಮ ಇಲ್ಲದೆ ಇರುವುದು ಗಮನಕ್ಕೆ ಬಂದಿತ್ತು. ಇವೆರಡನ್ನು ರೆಡಿ ಇಡುವಂತೆ ಹೇಳಿದ್ದನ್ನು ಅತ್ತಿಗೆ ನೆನಪಿಸಿಕೊಂಡಿದ್ದಾರೆ. ಆದರೆ, ವಿಮಾನ ಏರಿದ್ದಷ್ಟೇ ಸೌಂದರ್ಯಾ ಮತ್ತೆ ಬರಲೇ ಇಲ್ಲ.
ವಿಮಾನ ಪತನ.. ದುರಂತ
ಸೌಂದರ್ಯಾ ಹಾಗೂ ಅಣ್ಣ ಅಮರ್‌ನಾಥ್ ಇಬ್ಬರೂ ಬೆಂಗಳೂರಿನಿಂದ ಸೆಸ್ಸಾ 180 ಅನ್ನೋ ಲಘು ವಿಮಾನದಲ್ಲಿ ಕರೀಂನಗರಕ್ಕೆ ತೆರಳುತ್ತಿದ್ದರು. ಬೆಳಗ್ಗೆ ಸರಿಸುಮಾರು 11.05ಕ್ಕೆ ವಿಮಾನ ಟೇಕ್ಆಫ್ ಆಗಿದ್ದಷ್ಟೇ. ಕ್ಷಣಾರ್ಧದಲ್ಲಿ ವಿಮಾನ ಬೆಂಕಿಗೆ ಆಹುತಿ ಆಯ್ತು.
ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿಯೂ ನಟಿಸಿದ್ದ ನಟಿ ಕೊನೆಯ ಆಸೆಗಳೂ ಕೂಡ ಹಾಗೇ ಉಳಿದು ಬಿಟ್ಟವು. ಸದಾ ನಗು ನಗುತ್ತಾ, ಚುರುಕು ಸ್ವಭಾವದವರಾಗಿದ್ದ ಸೌಂದರ್ಯಾ ದುರಂತ ಅಂತ್ಯ ಕಂಡಿದ್ದನ್ನು ಇನ್ನೂ ಸಿನಿ ಪ್ರೇಮಿಗಳು ಮರೆತಿಲ್ಲ.


Click it and Unblock the Notifications











