ದ್ವಾರ್ಕಿ ಕನಸಿಗೆ ಕೊಡಲಿ ಏಟು ಕೊಟ್ಟ ಸೌಂದರ್ಯಾ!

By ರಾಘವ ದ್ವಾರ್ಕಿ
<ul id="pagination-digg"><li class="previous"><a href="/news/an-open-letter-to-soundarya-rajinikanth-by-raghava-dwarki-084687.html">« Previous</a>

ನಮ್ಮ ನಿರ್ಮಾಪಕರು ತಾಳ್ಮೆ ಕಳೆದುಕೊಂಡರು ಇರುವ ನೆಗೆಟೀವ್ ನನ್ನೇ ಕಟ್ ಮಾಡಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿ ಬಿಟ್ರು. ನನ್ನ ಕನಸಿಗೆ ಮೊದಲ ಕೊಡಲಿ ಏಟದು! ಥ್ಯಾಂಕ್ಸ್. ಒಂದು ದಿನ ನಿಮ್ಮನ್ನು ಬಾಗಿಲಲ್ಲೇ ನಿಲ್ಲಿಸಿ ಅಂಗಲಾಚಿದೆ. ನನ್ನ ಕೆಲಸ ಮುಗಿಸಿಕೊಡಿ. ನಿಮ್ಮನ್ನು ನಂಬಿ ಬಂದದ್ದಕ್ಕೆ ನನಗಿಂಥ ಶಿಕ್ಷೆಯೇ ಎಂದು ಎಷ್ಟೆಲ್ಲಾ ಕೇಳಿಕೊಂಡರು.. ನೀವು ನನಗೆ ಸಹಕರಿಸಲೇ ಇಲ್ಲ!

ನಾನಿಲ್ಲದೆಯೇ ನನ್ನ ಚಿತ್ರ ಬಿಡುಗಡೆಗೆ ಸಿದ್ಧವಾಗಿ ಹೋಯ್ತು. ಮೊದಲ ಪ್ರತಿಯನ್ನು ನೋಡಿ ಕರೆಕ್ಷನ್ ಮಾಡಲೂ ಆಗದಂತಾಯ್ತು! ಪ್ರಚಾರದ ಕೆಲಸವೂ ಮಾಡಿಸಲಾಗಲಿಲ್ಲ. ನಿಮ್ಮ ಬಿಸಿಲೂರಿನಲ್ಲಿ ತಬ್ಬಲಿಯಾಗಿ ಹೋದೆ. ನನ್ನ ಕಂದಮ್ಮನಿಗೇ ಇನ್ನಾರೋ ಸ್ವೆಟರ್ ಹೊಲಿದುಬಿಟ್ಟರು...

An open letter to Soundarya Rajinikanth
ನಾನಿಲ್ಲದೇ.. ನನ್ನ ಆರೈಕೆಯಿಲ್ಲದೆ ಹೊರಗೆ ಬಂದ ನನ್ನ ಕನಸಿನ 'ಮತ್ತೆ ಮುಂಗಾರು' ಎಂಬ ಕಂದ..ತನ್ನ ಬಗ್ಗೆ ಹೇಳಿಕೊಳ್ಳಲಾಗದೇ ಸೋತು ಜರ್ಜರಿತನಾಗಿ ಅನಾಥವಾಗಿ ಹೋದ. ಆಗಸ್ಟ್ 6, 2010 ಸಿನಿಮಾ ಬಿಡುಗಡೆ. ಅಂದು ಮುಂಜಾನೆ ನಾಲ್ಕಕ್ಕೆ ನಿಮ್ಮಿಂದ ಮೊದಲ ಪ್ರತಿ ಬಿಡುಗಡೆ. ಸೋಲಿಸಿ ಬಿಟ್ರಿ ಸೌಂದರ್ಯಾ ನನ್ನನ್ನು ಸೋಲಿಸಿ ಬಿಟ್ರಿ. ಏಳು ಕೆರೆ ನೀರು ಕುಡಿಸಿದ ಕ್ರೆಡಿಟ್ ನಿಮಗೇ ಹೋಗಬೇಕು. ಥ್ಯಾಂಕ್ಸ್ ನನ್ನ ಕನಸನ್ನು ಸಿಝೆರಿನ್ ಮಾಡಿ ಕೊಂದದ್ದಕ್ಕೆ..!

ಸಾವಿರಾರು ಜನ ಸೇರಿ ಮಾಡಿದ ಸಿನಿಮಾ ನಿಮ್ಮೊಬ್ಬರಿಂದ ನೀರಿನಲ್ಲಿ ಹೋಮ ಮಾಡಿದಂತಾಯ್ತು. ಸಿನಿಮಾ ಬಗ್ಗೆ ಆಸಕ್ತಿಯೇ ಕಳೆದು ಹೋಯ್ತು..! ಥ್ಯಾಂಕ್ಸ್! ಇಂದು ನಿಮ್ಮ ನಿರ್ದೇಶನದ 'ಕೊಚಡಿಯಾನ್' ಚಿತ್ರದ ಗಜಪ್ರಸವವಾಗಿದೆ. ಬಿಡುಗಡೆಯ ವಿಳಂಬ, ಸಾಲ, ಹಣ ಕಾಸಿನ ಮುಗ್ಗಟ್ಟು, ಕೆಲಸ ಮಾಡಿದವರಿಗೆ ಹಣ ಕೊಟ್ಟಿಲ್ಲವೆಂದು...ಬ್ಯುಸಿನೆಸ್ ಆಗುತ್ತಿಲ್ಲವೆಂದು ನೂರಾ ಎಂಟು ಕಾರಣಗಳಿಗೆ ಸಿಕ್ಕಿ ಉಸಿರುಗಟ್ಟಿ ಬಿಡುಗಡೆಯಾಗಿದೆ. ನಿಮಗೆ ಒಳ್ಳೆಯದಾಗಲಿ... ಸಿನಿಮಾ ದೊಡ್ಡ ಯಶಸ್ಸು ಕಾಣಲೆಂದು ಹಾರೈಸುತ್ತೇನೆ...!

ನನಗೆ ನಿಮ್ಮ ತಂದೆಯ ಮೇಲೆ ಒಂದಿಷ್ಟು ಕೋಪವಿಲ್ಲ. ಮಹಾನುಭಾವರು ಚೆನ್ನಾಗಿರಲಿ... ಎಲ್ಲಿದ್ದರೂ ನಮ್ಮವರು. ಬಟ್ ಅಂದು ನನ್ನ ನೋವು, ಹತಾಶೆ, ಶಾಪದ ಆಳ ಎಷ್ಟಿತ್ತೆಂಬುದರ ಅರಿವು ನಿಮಗಾದರೆ ಸಾಕು. ನೀವು ಗೋಲ್ಡ್ ಸ್ಪೂನ್ ಸೌಂದರ್ಯ ನಾವು ಓಲ್ಡ್ ಹ್ಯಾಂಡ್... ಶೇಕ್ ಹ್ಯಾಂಡ್ ಮಾಡಲು ಮಾತ್ರ ಗೊತ್ತು! ಒಳ್ಳೆಯದಾಗಲಿ... ಕಾಲಾಯ ತಸ್ಮ್ಯೆ ನಮಃ.

ಈ ಬರಹದಲ್ಲಿ ನಾನೂ ಸಂಪಾದಿಸಬೇಕಾದ್ದೇನು ಇಲ್ಲ..ನನ್ನ ಅಂದಿನ ನೋವನ್ನು ಹೇಳಿಕೊಳ್ಳಲು ಸಿಕ್ಕ ಕಾಲ. ನನ್ನ ಪ್ರಿತಿಯ ಗೆಳೆಯರಿಗೆ ಹೇಳಬೇಕೆನಿಸಿತು ಹೇಳಿದ್ದೇನೆ... ಒಳಗಿದ್ದ ವಿಷ ಹೊರಗೆ ಹಾಕಿದ್ದೇನೆ. ದೇವರು ನಿಮ್ಮನ್ನು ಚೆನ್ನಾಗಿಡಲಿ! ನನಗೆ ನಡೆದಂಥ ತೊಂದರೆ ನನ್ನ ಶತ್ರುವಿಗೂ ಆಗದಿರಲಿ..! ನನ್ನ ಮತ್ತೆ ಮುಂಗಾರು ಚಿತ್ರದ ಶೀರ್ಷಿಕೆಯ ಮೊದಲಿನಲ್ಲೇ ನಿಮಗೆ ಕೃತಜ್ಞತೆಯಿದೆ... ಒಪ್ಪಿಸಿಕೊಳ್ಳಿ..! [ರಾಘವ ದ್ವಾರ್ಕಿ ಫೇಸ್ ಬುಕ್]

<ul id="pagination-digg"><li class="previous"><a href="/news/an-open-letter-to-soundarya-rajinikanth-by-raghava-dwarki-084687.html">« Previous</a>

More from Filmibeat

English summary
An open letter to Soundarya Rajinikanth Ashwin, a film graphic designer, producer and director who primarily works in the Tamil film industry by Kannada director Raghava Dwarki. The director shared his bad experience on his Facebook account, How Soundarya behaved at the time of 'Matte Mungaru' DI work at her 'AKAR' studio at Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X