ರಜನಿ ಮಗಳ ಮದುವೆಗೆ ಶುರುವಾಯ್ತು ತಯಾರಿ
ಸೂಪರ್ ಸ್ಟಾರ್ ರಜನಿಕಾಂತ್ ಕಿರಿಯ ಪುತ್ರಿ ಸೌಂದರ್ಯ ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ. ಇದೇ ತಿಂಗಳ 11 ರಂದು ಸೌಂದರ್ಯ ಕಲ್ಯಾಣ ನಡೆಯಲಿದ್ದು, ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ, ಮದುವೆಯ ಎಲ್ಲ ತಯಾರಿಗಳು ಶುರು ಆಗಿವೆ.
ನಟ ಹಾಗೂ ಉದ್ಯಮಿ ವಿಷಗನ್ ವನಂಗಮುಡಿ ಜೊತೆಗೆ ಸೌಂದರ್ಯ ರಜನಿಕಾಂತ್ ಎರಡನೇ ಮದುವೆ ನಡೆಯುತ್ತದೆ. ಈ ಹಿಂದೆ ಉದ್ಯಮಿ ಅಶ್ವಿನ್ ಕುಮಾರ್ ಅವರ ಜೊತೆಗೆ ಸೌಂದರ್ಯ ವಿವಾಹವಾಗಿತ್ತು. ಆದರೆ, 2016 ರಲ್ಲಿ ಈ ಜೋಡಿ ಬೇರೆ ಬೇರೆ ಆಗಿತ್ತು. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇದ್ದು, ಈ ಜೋಡಿ ಬೇರೆಯಾಗುವ ನಿರ್ಧಾರವನ್ನು ತಗೆದುಕೊಂಡಿದ್ದರು. ಈ ಜೋಡಿಗೆ ಆರು ವರ್ಷದ ಒಬ್ಬ ಮಗಳಿದ್ದಾರೆ.
ಫೆಬ್ರವರಿ 10 ಹಾಗೂ 11 ರಂದು ಎರಡು ದಿನ ಚೆನ್ನೈನಲ್ಲಿ ಸೌಂದರ್ಯ ವಿವಾಹ ನಡೆಯಲಿದೆ. ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರ ಆಶೀರ್ವಾದದೊಂದಿಗೆ ಸೌಂದರ್ಯ ಮತ್ತೆ ಹೊಸ ಬದುಕು ಶುರು ಮಾಡಲಿದ್ದಾರೆ.

ಸೌಂದರ್ಯ ರಜನಿಕಾಂತ್ ಕೂಡ ನಿರ್ದೇಶಕಿಯಾಗಿದ್ದಾರೆ. ರಜನಿ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಕೊಚಡೈಯಾನ್' ಸಿನಿಮಾ ಹಾಗೂ ಧನುಷ್ ನಟನೆಯ ವಿ ಐ ಪಿ 2' ಸಿನಿಮಾಗೆ ನಿರ್ದೆಶನ ಮಾಡಿದ್ದಾರೆ.


Click it and Unblock the Notifications











