For Quick Alerts
  ALLOW NOTIFICATIONS  
  For Daily Alerts

  'ಮಂಗಳಮುಖಿ'ಯರ ಬಗ್ಗೆ 'ಭಜರಂಗಿ' ಲೋಕಿ ಉವಾಚ

  By Harshitha
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಸಿನಿಮಾ ನೀವು ನೋಡಿದ್ದರೆ, ನಿಮಗೆ 'ಭಜರಂಗಿ' ಲೋಕಿ ಅಲಿಯಾಸ್ ಸೌರವ್ ಲೋಕೇಶ್ ಪರಿಚಯ ಇದ್ದೇ ಇರುತ್ತೆ.

  'ಭಜರಂಗಿ' ಚಿತ್ರದಲ್ಲಿ ಖತರ್ನಾಕ್ ಕೇಡಿಯಾಗಿ ಅಬ್ಬರಿಸುವ ಲೋಕಿ, 'ರಥಾವರ' ಸಿನಿಮಾದಲ್ಲಿ ಮಂಗಳಮುಖಿ ಮಾದೇವಿಯಾಗಿ ಮಿಂಚಿದ್ದಾರೆ.

  ನಿಜಹೇಳ್ಬೇಕಂದ್ರೆ, ಶ್ರೀಮುರಳಿ-ರಚಿತಾ ರಾಮ್ ಜೋಡಿಯಾಗಿ ನಟಿಸಿರುವ 'ರಥಾವರ' ಸಿನಿಮಾದಲ್ಲಿ ಸೌರವ್ ಲೋಕೇಶ್ (ಭಜರಂಗಿ ಲೋಕಿ) ಪಾತ್ರವೇ ಹೈಲೈಟ್. [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]

  'ರಥಾವರ' ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ಮೊದಲು ಸೌರವ್ ಲೋಕಿಯನ್ನ ಭೇಟಿ ಮಾಡಿ ಮಂಗಳಮುಖಿ ಪಾತ್ರವನ್ನ ಆಫರ್ ಮಾಡಿದಾಗ, ಒಪ್ಪಿಕೊಳ್ಳುವ ಬಗ್ಗೆ ಯೋಚನೆ ಮಾಡುವುದಕ್ಕೆ ಲೋಕಿ ಒಂದು ತಿಂಗಳು ಸಮಯ ತೆಗೆದುಕೊಂಡರಂತೆ.

  ''ಮಾದೇವಿ ಪಾತ್ರ ತುಂಬಾ ಚಾಲೆಂಜಿಂಗ್ ಆಗಿತ್ತು. ನಿರ್ದೇಶಕರು ನನಗೆ ಆಫರ್ ನೀಡಿದಾಗ ನಾನು 20-30 ದಿನಗಳ ಸಮಯಾವಕಾಶ ತೆಗೆದುಕೊಂಡು ನಂತರ ಒಪ್ಪಿಕೊಂಡೆ'' [ಚಮ್ಕಾಯ್ಸಿ ಚಿಂದಿ ಉಡಾಯಿಸಿದ ಶ್ರೀಮುರಳಿ 'ರಥಾವರ']

  ''ನಟನೆ ಮಾಡುವ ಮೊದಲು ಮಂಗಳಮುಖಿಯರ ಕುರಿತು ರೆಡಿಯಾಗಿರುವ ಅನೇಕ ಚಿತ್ರಗಳನ್ನ ನಾನು ವೀಕ್ಷಿಸಿದೆ. ಆ ಪಾತ್ರ ಮಾಡಿದ ಮೇಲೆ ನನಗೆ ಮಂಗಳಮುಖಿಯರ ಬಗ್ಗೆ ಗೌರವ ಹೆಚ್ಚಾಯ್ತು'' ಅಂತ 'ಫಿಲ್ಮಿಬೀಟ್' ಜೊತೆ ಸೌರವ್ ಲೋಕಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

  ಮಂಗಳಮುಖಿಯಾಗಿ ಲೋಕಿ ಮಾಡಿರುವ ಮೋಡಿಯನ್ನ 'ರಥಾವರ' ಚಿತ್ರದಲ್ಲಿ ನೀವಿನ್ನೂ ನೋಡಿಲ್ಲ ಅಂದ್ರೆ, ಈಗಲೇ ಟಿಕೆಟ್ ಬುಕ್ ಮಾಡಿ....

  English summary
  Kannada Actor Bhajarangi Loki aka Sourav Lokesh spoke about his role Transgender Madevi in Kannada Movie 'Rathaavara' to Filmibeat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X