»   » ಸಿಕ್ಸ್ ಪ್ಯಾಕ್ ನಲ್ಲಿ ಬಳಕುತ್ತಿರುವ ಸೆಕ್ಸಿ ಅನುಷ್ಕಾ ಶೆಟ್ಟಿ

ಸಿಕ್ಸ್ ಪ್ಯಾಕ್ ನಲ್ಲಿ ಬಳಕುತ್ತಿರುವ ಸೆಕ್ಸಿ ಅನುಷ್ಕಾ ಶೆಟ್ಟಿ

By Srinath
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇತ್ತೀಚೆಗೆ ಸಿಕ್ಸ್ ಪ್ಯಾಕ್ ಕ್ರೇಜ್ ಜಾಸ್ತಿಯಾಗುತ್ತಿದೆ. ಹೀರೋಗಳಿಗಷ್ಟೇ ಸೀಮಿತವಾಗಿದ್ದ ಸಿಕ್ಸ್ ಪ್ಯಾಕ್ ಕ್ರೇಜ್ ನಟೀಮಣಿಯರಲ್ಲೂ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ನಟಿಯರು 'ಜೀರೋ ಫಿಗರ್' ರೂಪದಲ್ಲಿ ಮಾದಕವಾಗಿ ಕಾಣಲು ಬಯಸುತ್ತಾರೆ.

  ಆದರೆ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಭದ್ರವಾಗಿ ತಳವೂರಿರುವ ಕನ್ನಡದ ಕುವರಿ ಅನುಷ್ಕಾ ಶೆಟ್ಟಿಗೂ ಸಿಕ್ಸ್ ಪ್ಯಾಕ್ ಕ್ರೇಜ್ ಅಂಟಿಕೊಂಡಿದ್ದು, ತಮ್ಮ ಮೈಮಾಟವನ್ನು ಬಳಕಿಸುತ್ತಾ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಅಂದವಾಗಿ ಕಾಣಿಸಲು ಮುಂದಾಗಿದ್ದಾರೆ.

  ಅಂದಹಾಗೆ, ಮಾದಕ ನಟಿ ಅನುಷ್ಕಾ ಶೆಟ್ಟಿ ಸಿಕ್ಸ್ ಪ್ಯಾಕ್ ಸಿದ್ಧಿಸಿಕೊಳ್ಳಲು ಡಯಟಿಂಗ್, ಅದೂ ಇದೂ ಅಂತ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದೆ ಯೋಗದ ಮೊರೆ ಹೋಗಿದ್ದಾರೆ. ಸೆಕ್ಸಿ ಅನುಷ್ಕಾ ಶೆಟ್ಟಿ ಯಾಕಾಗಿ ಸಿಕ್ಸ್ ಪ್ಯಾಕ್ ಗೆ ಜೋತುಬಿದ್ದಿದ್ದಾರೆ ಅಂದರೆ ಬಿಡುಗಡೆಗೆ ಸಿದ್ಧವಾಗಿರುವ 'ಬಾಹುಬಲಿ', 'ವರ್ಣ' ಮತ್ತು ಇನ್ನೂ ಶೂಟಿಂಗ್ ನಡೆಯುತ್ತಿರುವ 'ರುದ್ರಮ್ಮದೇವಿ' ಚಿತ್ರಗಳಿಗಾಗಿ ಈ ಸಾಹಸ ಮಾಡಿದ್ದಾರೆ.

  ಕುದುರೆ ಸವಾರಿ, ಕತ್ತಿವರಸೆಗೂ ಸೈ

  'ಬಾಹುಬಲಿ' ಮತ್ತು 'ರುದ್ರಮ್ಮದೇವಿ' ಚಿತ್ರಗಳಲ್ಲಿನ ಪಾತ್ರಗಳಿಗೆ ಯಥೋಚಿತವಾಗಿ ಕಾಣಿಸಲು ಕಠಿಣ ಶ್ರಮ ಹಾಕಿದ್ದಾರೆ. ಕುದುರೆ ಸವಾರಿ, ಕತ್ತಿವರಸೆಗೂ ಸೈ ಎಂದಿದ್ದಾರೆ. ಇದರಿಂದಿಗೆ ದೈಹಿಕವಾಗಿ ಫಿಟ್ ಆಗಿರುವ ಅನುಷ್ಕಾ ಶೆಟ್ಟಿ ಈಗ ಮತ್ತಷ್ಟು ಅಂದವಾಗಿ ಕಾಣುತ್ತಿದ್ದಾರೆ. ಗುರು ಕಿರಣ್ ದೊಂಬ್ಲಾ ಕಣ್ಣಳತೆಯಲ್ಲಿ ಅನುಷ್ಕಾ ಈ ತಾಲೀಮು ನಡೆಸಿದ್ದಾರೆ.

  ಪ್ರಕಾಶ್ ರೈ ಮತ್ತು ಅನುಷ್ಕಾ ಶೆಟ್ಟಿ ಜತೆಯಾಗಿ

  'ರುದ್ರಮ್ಮದೇವಿ' ಚಾರಿತ್ರಿಕ ಕಥಾವಳಿ. ಗುಣಶೇಖರ್ ನಿರ್ದೇಶಕ. ಇದು ತ್ರಿ ಡಿ ಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಮಂಗಳೂರಿನವರೇ ಆದ ಪ್ರಕಾಶ್ ರೈ ಮತ್ತು ಅನುಷ್ಕಾ ಶೆಟ್ಟಿ ಜತೆಯಾಗಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

  'ಬಾಹುಬಲಿ' ಮತ್ತು 'ರುದ್ರಮ್ಮದೇವಿ' ಚಿತ್ರಗಳು

  ತಾವು ಅಭಿನಯಿಸಿದ್ದ ನಾಯಕಿ ಪ್ರಧಾನ 'ಆರುಂಧತಿ' ಸಿನಿಮಾ ಅದ್ಭುತ ಯಶಸ್ಸು ಗಳಿಸಿದ ಮೇಲೆ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳ ಮೇಲೆ ಕಣ್ಣಿಟ್ಟಿರುವ ಅನುಷ್ಕಾ ಶೆಟ್ಟಿಗೆ 'ಬಾಹುಬಲಿ' ಮತ್ತು 'ರುದ್ರಮ್ಮದೇವಿ' ಚಿತ್ರಗಳು ಭಾರಿ ಯಶಸ್ಸು ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

  'ಬಾಹುಬಲಿ' ಬಜೆಟ್ 150 ಕೋಟಿ ರೂ ದಾಟಿದೆ

  ಅಂದಹಾಗೆ 'ಬಾಹುಬಲಿ' ನಿರ್ದೇಶಕ 'ಈಗ' ಖ್ಯಾತಿಯ ಕನ್ನಡದವರೇ ಆದ ಎಸ್ಎಸ್ ರಾಜಮೌಳಿ. 'ಈಗ'ದಂತೆ 'ಬಾಹುಬಲಿ'ಯೂ ರಾಜಮೌಳಿಗೆ ಸವಾಲಿನ ಚಿತ್ರವಾಗಿದೆ. 'ಬಾಹುಬಲಿ' ಬಜೆಟ್ 150 ಕೋಟಿ ರೂ ದಾಟಿದೆ.

  ಜಾರ್ಜಿಯಾ ಅಡವಿಗಳಲ್ಲಿ 'ಅಡವಿ ಅಮ್ಮಾಯಿ'

  ಆರ್ಯ ಹೀರೋ ಆಗಿ 'ವರ್ಣ' ಚಿತ್ರ ಅನುಷ್ಕಾ ಶೆಟ್ಟಿಗೆ ಮತ್ತೊಂದು ಬ್ರೇಕ್ ತಂದಕೊಡಬಲ್ಲ ಚಿತ್ರವಾಗಿದೆ. ಅದರಲ್ಲಿ ಅನುಷ್ಕಾ ಶೆಟ್ಟಿ ದ್ವಿಪಾತ್ರದಲ್ಲಿ ಅಂದಚೆಂದವಾಗಿ ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರದಲ್ಲಿ ಸಾಧಾರಣ ಯುವತಿಯಾಗಿ ಕಾಣಿಸಿಕೋಮಡಿದ್ದರೆ ಮತ್ತೊಂದರಲ್ಲಿ ಜಾರ್ಜಿಯಾ ಅಡವಿಗಳಲ್ಲಿ 'ಅಡವಿ ಅಮ್ಮಾಯಿ' ಆಗಿ ರೆಬೆಲ್ ಆಗಿ ಟ್ರೈಬಲ್ ಲೇಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಮಾರ್ಷಲ್ ಆರ್ಟ್ ಕಲೆಗಳನ್ನೂ ಅವರು ಕರಗತಮಾಡಿಕೊಂಡಿದ್ದಾರೆ.

  ಅನುಷ್ಕಾ ಶೆಟ್ಟಿ ವ್ಯಕ್ತಿ ಚಿತ್ರ ಮತ್ತು ಚಿತ್ರ ಸಂತೆ

  ಅನುಷ್ಕಾ ಶೆಟ್ಟಿ ವ್ಯಕ್ತಿ ಚಿತ್ರ ಮತ್ತು
  ಗ್ಯಾಲರಿಯಲ್ಲಿ ಚಿತ್ರ ಸಂತೆಗಾಗಿ ಇಲ್ಲಿ ಕ್ಲಿಕ್ಕಿಸಿ.

   

  English summary
  South Indian actor Anushka Shetty showcases her beauty with six pack. Anushka is a fitness freak, we all know that. She loves yoga. For Rudramma Devi and Baahubali Anushka has acquired a sculpted body through rigorous training. Now she aims higher. Anushka wants six packs abs. Anushka craves for a perfectly toned body and six packs abs is her dream.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more