'ಕೆಜಿಎಫ್' ಬಗ್ಗೆ ಹೃದಯ ತುಂಬಿ ಮಾತನಾಡಿದ ಬಹುಭಾಷಾ ನಟ ಸುಮನ್

Recommended Video

KGF Movie : ದಕ್ಷಿಣ ಭಾರತದ ಖ್ಯಾತ ನಟ ಕೆಜಿಎಫ್ ನೋಡಿ ಫುಲ್ ಖುಷ್ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನ ಎಲ್ಲ ಭಾಷೆಯವರು ಮೆಚ್ಚಿಕೊಂಡಿದ್ದಾರೆ. ಕನ್ನಡ ಸೇರಿ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದ ಈ ಚಿತ್ರವನ್ನ ಆಯಾ ಭಾಷೆಯಲ್ಲಿ ಸ್ಟಾರ್ ನಟರು ನೋಡಿ ಇಷ್ಟ ಪಟ್ಟಿದ್ದಾರೆ.

ಸಿನಿಮಾ ನೋಡಿದ ಬಳಿಕ ತಮ್ಮ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳ ಮುಂದೆ ಹಂಚಿಕೊಂಡಿರುವುದನ್ನ ನೋಡಿದ್ದೇವೆ. ಇದೀಗ, ಬಹುಭಾಷಾ ನಟ ಸುಮನ್ ಅವರ ಸರದಿ.

ಕೆಜಿಎಫ್ ಸಿನಿಮಾ ನೋಡಿ ಖುಷಿಯಾಗಿದ್ದ ಸುಮನ್ ಅವರು, ಕನ್ನಡ ಮಾಧ್ಯಮಗಳ ಮುಂದೆ ಹೃದಯ ತುಂಬಿ ಮಾತನಾಡಿದ್ದಾರೆ. ಮೂಲತಃ ಕರ್ನಾಟಕದವರೇ ಆಗಿರುವ ಸುಮನ್, ಕನ್ನಡ, ತೆಲುಗು, ತಮಿಳು ಹೀಗೆ ಬಹುಭಾಷೆಯಲ್ಲಿ ನಟಿಸುತ್ತಿದ್ದಾರೆ. ಅಷ್ಟಕ್ಕೂ, ಕೆಜಿಎಫ್ ಚಿತ್ರದ ಬಗ್ಗೆ ಸುಮನ್ ಏನಂದ್ರು? ಮುಂದೆ ಓದಿ.....

ಕೆಜಿಎಫ್ ನೋಡಿ ಖುಷಿಯಾಯ್ತು

ಕೆಜಿಎಫ್ ನೋಡಿ ಖುಷಿಯಾಯ್ತು

''ಕೆಜಿಎಫ್ ಸಿನಿಮಾವನ್ನ ತೆಲುಗಿನಲ್ಲಿ ನೋಡಿದೆ. ನಿಜಕ್ಕೂ ತುಂಬಾ ಖುಷಿ ಆಯ್ತು. ಕನ್ನಡ ಇಂಡಸ್ಟ್ರಿ ಒಂದು ಹಂತ ಮೇಲಕ್ಕೆ ಬಂದಿದೆ ಎಂಬುದು ಸಂತಸ ತಂದಿದೆ. ಮುಂದಿನ ದಿನದಲ್ಲಿ ಬಾಲಿವುಡ್ ಚಿತ್ರಗಳನ್ನ ಸೆಡ್ಡು ಹೊಡೆಯುವ ಮಟ್ಟಕ್ಕೆ ಕನ್ನಡ ಸಿನಿಮಾ ಹೋಗಲಿದೆ'' ಎಂದು ಸುಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರಗಳು ಇನ್ನೂ ಉತ್ತಮವಾಗಬೇಕು

ಕನ್ನಡ ಚಿತ್ರಗಳು ಇನ್ನೂ ಉತ್ತಮವಾಗಬೇಕು

''ಈಗಿನ ಕನ್ನಡ ಸಿನಿಮಾಗಳು ತುಂಬಾ ಚೆನ್ನಾಗಿ ಬರ್ತಿದೆ. ಬಿಸಿನೆಸ್ ವಿಷ್ಯದಲ್ಲೂ ಮಾರುಕಟ್ಟೆಯನ್ನ ವಿಸ್ತರಿಸಿಕೊಳ್ಳಬೇಕು. ತಂತ್ರಜ್ಞಾನ ಬೆಳದಿದೆ. ಕಥೆ ಮತ್ತು ಸ್ಕ್ರಿಪ್ಟ್ ಚೆನ್ನಾಗಿ ಮಾಡಬೇಕಿದೆ. ಮೇಕಿಂಗ್ ನಲ್ಲಿ ವಿಭಿನ್ನತೆ ಕೊಡಬೇಕು'' ಎಂದು ಸಲಹೆ ನೀಡಿದ್ರು.

ಕೆಜಿಎಫ್ ಚಿತ್ರದಂತೆ ಎಲ್ಲವೂ ಆಗಬೇಕು

ಕೆಜಿಎಫ್ ಚಿತ್ರದಂತೆ ಎಲ್ಲವೂ ಆಗಬೇಕು

''ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರಕ್ಕೆ ಭಾರಿ ಮೆಚ್ಚುಗೆ ಮತ್ತು ಸಕ್ಸಸ್ ಸಿಕ್ಕಿದೆ. ಅದೇ ರೀತಿ ಎಲ್ಲ ಕನ್ನಡ ಸಿನಿಮಾಗಳು ವರ್ಲ್ಡ್ ವೈಡ್ ಗಮನ ಸೆಳೆಯಬೇಕು. ನಾನೊಬ್ಬ ಕನ್ನಡಿಗನಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ'' ಎಂದು ನಟ ಸುಮನ್ ಹೇಳಿದರು.

ಮೂರು-ನಾಲ್ಕು ಭಾಷೆಯಲ್ಲಿ ರಿಲೀಸ್ ಆಗ್ತಿವೆ

ಮೂರು-ನಾಲ್ಕು ಭಾಷೆಯಲ್ಲಿ ರಿಲೀಸ್ ಆಗ್ತಿವೆ

ಕೆಜಿಎಫ್ ಸಿನಿಮಾದ ಯಶಸ್ಸಿನ ನಂತರ ಕನ್ನಡ ಸಿನಿಮಾಗಳು ಬಹುಭಾಷೆಯಲ್ಲಿ ತೆರೆಕಾಣುತ್ತಿದೆ. ಮೂರು ಭಾಷೆ, ನಾಲ್ಕು ಭಾಷೆಗಳಲ್ಲಿ ಕನ್ನಡ ಸಿನಿಮಾಗಳು ತೆರೆಕಾಣಲು ಸಜ್ಜಾಗುತ್ತಿದೆ. ಕನ್ನಡ ಚಿತ್ರಗಳ ಮಾರುಕಟ್ಟೆ ಕೂಡ ವಿಸ್ತಾರವಾಗಿದ್ದು, ಮುಂದಿನ ದಿನದಲ್ಲಿ ಮತ್ತಷ್ಟು ಚಿತ್ರಗಳು ಹೊರ ರಾಜ್ಯಗಳಲ್ಲಿ ಅಬ್ಬರಿಸಲಿದೆ.

More from Filmibeat

English summary
South star actor suman has expressed happy about rocking star yash starrer kgf movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X