»   » ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ?

ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ?

Posted By:
Subscribe to Filmibeat Kannada

ಒಬ್ಬ ನಟ ಹೀರೋ ಆಗ್ಬೇಕು ಅಂದ್ರೆ, ಒಳ್ಳೆ ಹೈಟ್, ಪರ್ಸನಾಲಿಟಿ ಇರಬೇಕು ಎನ್ನುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ನಮ್ಮ ನಾಯಕರು ಕೂಡ ಫಿಟ್ನೆಸ್ ಕಾಪಾಡಿಕೊಂಡಿರುತ್ತಾರೆ.

ದಕ್ಷಿಣ ಭಾರತದ ಸ್ಟಾರ್ ನಟರ ಪೈಕಿ ಯಾರು ಅತಿ ಎತ್ತರ ಇದ್ದಾರೆ ಎಂದರೆ, ಕೆಲವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಾರೆ, ಮತ್ತೆ ಕೆಲವರು 'ಬಾಹುಬಲಿ' ಪ್ರಭಾಸ್ ಅಂತಾರೆ, ಇನ್ನು ಹಲವರು ಮಹೇಶ್ ಬಾಬು ಅಂತಾರೆ.

ನಿಜವಾಗಲೂ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹೈಟ್ ಇರೋದು ಯಾವ ನಟ? ಹಾಗಿದ್ರೆ, ಬನ್ನಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಯಾವ ನಟನ ಎತ್ತರ ಎಷ್ಟಿದೆ ಎಂಬುದನ್ನ ನೋಡೋಣ. ಮುಂದೆ ಓದಿ....

ಚಾಲೆಂಜಿಂಗ್ ಸ್ಟಾರ್ ದರ್ಶನ್

ಕನ್ನಡದ ಕುತುಬ್ ಮಿನರ್ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದಲ್ಲಿ ಅತಿ ಎತ್ತರ ಇರುವ ನಟ. ಇವರ ಎತ್ತರ 6.3 ಅಡಿ.

ಕಿಚ್ಚ ಸುದೀಪ್

ಆರಡಿ ಕಟೌಟ್, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಅಭಿನಯ ಚಕ್ರವರ್ತಿಯ ಎತ್ತರ 6.2 ಅಡಿ.

ಬಾಹುಬಲಿ ಪ್ರಭಾಸ್

ಬಾಹುಬಲಿ ಚಿತ್ರದ ಮೂಲಕ ವಿಶ್ವಖ್ಯಾತಿ ಪಡೆದ ನಟ ಪ್ರಭಾಸ್. ಟಾಲಿವುಡ್ ನಟರಲ್ಲಿ ಪ್ರಭಾಸ್ ಎತ್ತರದ ನಟರ ಪೈಕಿ ಮೊದಲನೇ ಸಾಲಿನಲ್ಲಿ ನಿಲ್ತಾರೆ. ಅಂದ್ಹಾಗೆ, ಪ್ರಭಾಸ್ ಹೈಟ್ 6.2 ಅಡಿ.

ಪ್ರಿನ್ಸ್ ಮಹೇಶ್ ಬಾಬು

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಎತ್ತರ 6.1 ಅಡಿ. ಮಹೇಶ್ ಬಾಬು ಹೈಟ್ ಇಷ್ಟ ಪಡುವ ಅಭಿಮಾನಿಗಳು ತೆಲುಗು ಚಿತ್ರರಂಗದಲ್ಲಿದ್ದಾರೆ.

ರಾಣಾ ದಗ್ಗುಬಾಟಿ

ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ರಂತೆ ಹೆಚ್ಚು ಗಮನ ಸೆಳೆದ ನಟ ರಾಣಾ ದಗ್ಗುಬಾಟಿ. ಕಟ್ಟುಮಸ್ತಾದ ದೇಹ ಹೊಂದಿರುವ ರಾಣಾ ಎತ್ತರ 6.3 ಅಡಿ.

ವರುಣ್ ತೇಜ

'ಫಿದಾ' ಚಿತ್ರದ ಮೂಲಕ ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟ ವರುಣ್ ತೇಜ ಅವರು ಸದ್ಯ, ತೆಲುಗಿನ ಅತಿ ಎತ್ತರದ ನಟ ಎಂಬ ಖ್ಯಾತಿ ಗಳಿಸಿಕೊಂಡಿದ್ದಾರೆ. ಇವರ ಎತ್ತರ 6.4 ಅಡಿ.

ತಮಿಳು ನಟ ಜೀವನ್

ತಮಿಳಿನ ಸೂಪರ್ ಸ್ಟಾರ್ ನಟರ ಎತ್ತರ ಬಹುತೇಕ 6 ಅಡಿಗಿಂತ ಕಡಿಮೆ ಇದೆ. ಆದ್ರೆ, ಯವನ ನಟ ಜೀವನ್ ತಮಿಳಿನಲ್ಲಿ ಅತಿ ಹೆಚ್ಚು ಎತ್ತರ ಇದ್ದಾರೆ. ಇವರ ಹೈಟ್ 6.2 ಅಡಿ.

ಕಟ್ಟಪ್ಪ ಸತ್ಯರಾಜ್

ಜೀವನ್ ಹೊರತು ಪಡಿಸಿದರೇ, ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ನಿರ್ವಹಿಸಿದ್ದ ಸತ್ಯರಾಜ್ ಕೂಡ 6.2 ಅಡಿ ಎತ್ತರ ಇದ್ದಾರೆ.

ದುಲ್ಕರ್ ಸಲ್ಮಾನ್

ಮಲಯಾಳಂನ ಹ್ಯಾಂಡ್ ಸಮ್ ನಟ ದುಲ್ಕರ್ ಸಲ್ಮಾನ್ ಅವರು 6 ಅಡಿ ಎತ್ತರ ಇದ್ದಾರೆ. ಅವರನ್ನ ಹೊರತು ಪಡಿಸಿ, ಮೊಮ್ಮಟಿ, ಮೋಹನ್ ಲಾಲ್ ಅವರು ಹೈಟ್ 5.9 ಅಡಿ ಇದ್ದಾರೆ.

English summary
Have a look at the list of tallest heros of South India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada