»   » ಸ್ವೀಟಿ ರಾಧಿಕಾಗೆ ಮತ್ತೊಬ್ಬ ಸ್ವೀಟಿ ರಮ್ಯಕೃಷ್ಣ ಸಾಥ್

ಸ್ವೀಟಿ ರಾಧಿಕಾಗೆ ಮತ್ತೊಬ್ಬ ಸ್ವೀಟಿ ರಮ್ಯಕೃಷ್ಣ ಸಾಥ್

Posted By:
Subscribe to Filmibeat Kannada

ಬಾ ಬಾರೋ ರಸಿಕ ಎಂದು ಪಡ್ಡೆ ಹೈಕುಳಗಳನ್ನು ಗೋಳುಹೊಯ್ದುಕೊಂಡಿದ್ದ ದಕ್ಷಿಣ ಭಾರತದ ಸುಪ್ರಸಿದ್ದ ನಟಿ ರಮ್ಯಕೃಷ್ಣ ಎಂಬ ಸಹಜ ಸುಂದರಿ ಮತ್ತೊಮ್ಮೆ ಕನ್ನಡದ ಪ್ರೇಕ್ಷಕರಿಗಾಗಿ ಬೆಳ್ಳಿ ತೆರೆಯ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.

Sandalwoodಗೆ ರಿ ಎಂಟ್ರಿ ಕೊಡುತ್ತಿರುವ ಬ್ಯೂಟಿ ರಮ್ಯಕೃಷ್ಣ ಅವರು ಈ ಬಾರಿ ಸ್ವೀಟಿ ರಾಧಿಕಾ ನಿರ್ಮಾಣದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶಮಿಕಾ ಎಂಟರ್ ಪ್ರೈಸಸ್ ಬ್ಯಾನರಿನ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ Sweety - Nanna Jodi ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಅವರು ನಿಭಾಯಿಸುತ್ತಿದ್ದಾರೆ. ಸ್ವೀಟಿ ರಾಧಿಕಾ ಮತ್ತು ಆದಿತ್ಯ ಚಿತ್ರದ ಹೀರೋಯಿನ್ ಮತ್ತು ಹೀರೋ.

south-actress-ramya-krishnan-reenters-sandalwood-with-radhika-sweety
 

ದಶಕದ ಹಿಂದೆ ಉಪೇಂದ್ರ ಅವರ ರಕ್ತಕಣ್ಣೀರು ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದ ರಮ್ಯಕೃಷ್ಣ ಅವರು ಅಭಿಮಾನಿಗಳ ಮನಸೂರೆಗೊಂಡಿದ್ದರು. ದಕ್ಷಿಣ ಭಾರತದ ಎಲ್ಲ ಚಿತ್ರಗಳಲ್ಲೂ ಅಭಿನಯಿಸಿರುವ ಮಾದಕ ನಟಿ ರಮ್ಯಕೃಷ್ಣ ಅವರು ಬಾಲಿವುಡ್ ನಲ್ಲೂ ನಟಿಸಿದ್ದಾರೆ.

ರಮ್ಯಕೃಷ್ಣ ಇದುವರೆಗೂ 15 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರವಿಚಂದ್ರನ್ ತಾರಾಗಣದ ಚಿತ್ರ ಮಾಂಗಲ್ಯಂ ತಂತು ನಾನೇನಾದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಅದಲ್ಲದೆ ವಿಷ್ಣುವರ್ಧನ್, ಶಿವರಾಜ್ ಕುಮಾರ್ ಅವರ ಚಿತ್ರಗಳಲ್ಲೂ ನಟಿಸಿದ್ದಾರೆ. 

English summary
South actress Ramya Krishnan reenters Sandalwood with Radhika kumaraswamy in Sweety. The one-time glamorous actress is returning with forthcoming movie Sweety starring Radhika Kumaraswamy and Aditya The actress has been signed to play an important role in Sweety.
Please Wait while comments are loading...