ಆಲಿಯಾ ಭಟ್ ಬದಲು ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ: ಬಾಲಿವುಡ್‌ಗೆ ಸೌತ್ ಬ್ಯೂಟಿ!?
ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ಅವರ ರಾಮಾಯಣ ತಮ್ಮ ಪಾತ್ರವರ್ಗದ ಆಯ್ಕೆಯಿಂದ ಸುದ್ದಿಯಲ್ಲಿದೆ. ನಟಿ ಆಲಿಯಾ ಭಟ್ ರಾಮಾಯಣದಲ್ಲಿ ಸೀತೆ ಪಾತ್ರ ನಿರ್ವಹಿಸಬೇಕಿತ್ತು. ಇತ್ತೀಚೆಗೆ ನಟಿ ಆಲಿಯಾ ಭಟ್ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಬಂದಿತ್ತು. ನಂತರ ಸೀತೆ ಪಾತ್ರ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು.
ಸದ್ಯ ನಿತೀಶ್ ತಿವಾರಿ ಅವರ ರಾಮಾಯಣದ ಆಲಿಯಾ ಭಟ್ ಜಾಗದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ವದಂತಿಗಳು ನಿಜವಾದರೇ ನಮ್ಮ ಸೌತ್ ಬ್ಯೂಟಿ ಸಾಯಿ ಪಲ್ಲವಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಆಲಿಯಾ ಭಟ್ ಇನ್ನೂ ತಮ್ಮ ಇತ್ತೀಚಿನ ಬಿಡುಗಡೆಯಾದ 'ರಾಕಿ ಔರ್ ರಾಣಿ ಕಿಪ್ರೇಮ್ ಕಹಾನಿ'ಯ ಯಶಸ್ಸಿನಲ್ಲಿ ಮುಳುಗಿದ್ದಾರೆ. ಕರಣ್ ಜೋಹರ್ ನಿರ್ದೇಶನದಲ್ಲಿ ರಣವೀರ್ ಸಿಂಗ್ ಜೊತೆಗೆ ನಟಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಅವರು 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಈ ಚಿತ್ರದಿಂದ ಹೊರಗುಳಿದಿದ್ದಾರೆ.
ಸಿನಿಮಾ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದ್ದು, ಸಾಯಿ ಪಲ್ಲವಿ ಈ ಚಿತ್ರಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಈ ಬಗ್ಗೆ ಸಿನಿಮಾ ತಂಡ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲವಾದರೂ, ಸಾಯಿ ಪಲ್ಲವಿ ಸಿನಿಮಾವನ್ನು ಒಪ್ಪಿಕೊಂಡರೇ , ಅವರು ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ನಟಿಸಲಿದ್ದಾರೆ.

ರಣಬೀರ್ ಕಪೂರ್ ಜೊತೆಗೆ ಸಾಯಿ ಪಲ್ಲವಿ
ಡೇಟ್ಸ್ ಸಮಸ್ಯೆಯಿಂದ ಆಲಿಯಾ ಭಟ್ ಸಿನಿಮಾದಿಂದ ಹೊರನಡೆದಿದ್ದಾರೆ. ಈಗ, ಸಾಯಿ ಪಲ್ಲವಿ ರಣಬೀರ್ ಕಪೂರ್ ಜೊತೆಗೆ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು. ನಿತೀಶ್ ತಿವಾರಿ ಅವರ ರಾಮಾಯಣದಲ್ಲಿ ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ರಾವಣನನ ಪಾತ್ರ ಮಾಡಬೇಕಿತ್ತು. ಆದರೆ ಅವರು ಆಫರ್ ತಿರಸ್ಕರಿಸಿದ್ದಾರೆ ಎಂಬ ವರದಿಗಳಿವೆ.
'ರಾಮಾಯಣ'ದಲ್ಲಿ ಇರುವವರು ಯಾರು?
ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲು ಬದ್ಧರಾಗಿದ್ದಾರೆ. ಆದರೆ ದಿನಾಂಕದ ಸಮಸ್ಯೆಯಿಂದಾಗಿ ಪ್ರಾಜೆಕ್ಟ್‌ನಲ್ಲಿ ನಟಿ ಆಲಿಯಾ ಭಟ್ ಇರುವುದಿಲ್ಲ. ಇದಲ್ಲದೆ, ಯಶ್ ಚಿತ್ರದ ತುಂಬಾ ಭಾಗವಾಗಿದ್ದಾರೆ ಮತ್ತು ಅವರ ಸ್ಕ್ರೀನ್ ಟೆಸ್ಟ್ ಯಶಸ್ವಿಯಾಗಿದೆ ಎಂದು ಸಿನಿಮಾ ತಂಡದ ಒಳಗಿನವರು ಬಹಿರಂಗಪಡಿಸಿದ್ದಾರೆ.
"ಈಗಾಗಲೇ ಯಶ್ ಜೊತೆ ಲುಕ್ ಟೆಸ್ಟ್ ನಡೆದಿದ್ದು, ಮಾತುಕತೆ ಸಕಾರಾತ್ಮಕವಾಗಿ ಸಾಗಿದೆ. ಸಿನಿಮಾ ತಯಾರಕರು ಅವರು ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಲ್ಲಿದ್ದಾರೆ. ಆದರೆ ಅವರು ಇನ್ನೂ ಸಹಿ ಮಾಡಿಲ್ಲ. ಯಶ್ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆಗೆ ದೊಡ್ಡ ಆಕ್ಷನ್ ಥ್ರಿಲ್ಲರ್ ಮಾಡುತ್ತಿದ್ದಾರೆ. ಹೀಗಾಗಿ ಅವರು ಒಪ್ಪಿಗೆ ನೀಡುವುದನ್ನು ನೋಡಬೇಕು" ಎಂದಿದ್ದಾರೆ.


Click it and Unblock the Notifications










