"ನನ್ನತ್ರ ಯಶ್‌ಗೆ ಸೂಕ್ತ ಕಥೆಯಿದೆ, ಆತನೊಟ್ಟಿಗೆ ಕೆಲ್ಸ ಮಾಡ್ಬೇಕು" ಎಂದ ರಜನಿಕಾಂತ್ ನೆಚ್ಚಿನ ನಿರ್ದೇಶಕ

'KGF' ಸರಣಿ ಸಿನಿಮಾಗಳಿಂದ ನಟ ಯಶ್ ಕ್ರೇಜ್ ಯಾವ ಮಟ್ಟಿಗೆ ಹೆಚ್ಚಾಯ್ತು ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ಸದ್ಯ ಅದನ್ನು ಮೀರಿಸುವ ಚಿತ್ರ ಮಾಡಲು ಯಶ್ ಮುಂದಾಗಿದೆ. 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಅಭಿಮಾನಿಗಳು 'ಟಾಕ್ಸಿಕ್' ಅಪ್‌ಡೇಟ್ ಕೇಳುತ್ತಲೇ ಇದ್ದಾರೆ. ಇನ್ನು ಯಶ್ ಮಾತ್ರ 'KGF' ಲುಕ್ ಇನ್ನು ಬದಲಿಸಿಲ್ಲ. ಗಡ್ಡಧಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ಚಿತ್ರದಲ್ಲಿ ಕೂಡ ಅದೇ ಲುಕ್ ಮುಂದುವರೆಯುವ ಸಾಧ್ಯತೆಯಿದೆ. ರಾಕಿಭಾಯ್ ಆಗಿ ಏಕ್‌ದಮ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶ್ ಅಬ್ಬರಿಸಿದರು. 'ಬಾಹುಬಲಿ' ಸರಣಿಯಿಂದ ಪ್ರಭಾಸ್‌ಗೆ ಸಿಕ್ಕಂತಹ ನೇಮು ಫೇಮು ರಾಕಿಂಗ್‌ ಸ್ಟಾರ್‌ಗೂ ಸಿಕ್ತು.

South famous director says he wish to work with KGF actor yash

ಯಶ್‌ ಡೆಡಿಕೇಷನ್, ಹಾರ್ಡ್‌ವರ್ಕ್, ಮಾಸ್ ಅಪಿಯರೆನ್ಸ್ ಪರಭಾಷಾ ಫಿಲ್ಮ್‌ ಮೇಕರ್ಸ್ ಕಣ್ಣಿಗೂ ಬಿತ್ತು. 'KGF' ಬಳಿಕ ಯಾರೊಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ ಆಗಿತ್ತು. ಶಂಕರ್ ಸೇರಿದಂತೆ ಹಲವು ನಿರ್ದೇಶಕರ ಹೆಸರು ಕೇಳುಬಂದಿದ್ದು ನಿಜ. ಅಷ್ಟರಮಟ್ಟಿಗೆ ನ್ಯಾಷನಲ್ ಸ್ಟಾರ್ ಯಶ್ ಹವಾ ಶುರುವಾಯಿತು.

ಕನ್ನಡ ನಟ ಯಶ್ ಜೊತೆ ಸಿನಿಮಾ ಮಾಡಲು ಬಾಲಿವುಡ್ ಫಿಲ್ಮ್‌ ಮೇಕರ್ಸ್‌ ಕೂಡ ಕ್ಯೂ ನಿಂತಿದ್ದಾರೆ. ಯಶ್ ಜೊತೆ ಕೆಲಸ ಮಾಡುವ ಆಸೆಯನ್ನು ತಮಿಳಿನ ಖ್ಯಾತ ನಿರ್ದೇಶಕ ಕೆ. ಎಸ್ ರವಿಕುಮಾರ್ ಬಿಚ್ಚಿಟ್ಟಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ತಮಿಳು ನಿರ್ದೇಶಕ ನನ್ನ ಬಳಿ ಯಶ್‌ಗೆ ಸೂಕ್ತವಾದ ಕಥೆ ಒಂದಿದೆ, ಅವರೊಟ್ಟಿಗೆ ಸಿನಿಮಾ ಮಾಡಲು ಆಲೋಚನೆ ಇದೆ ಎಂದಿದ್ದಾರೆ.

South famous director says he wish to work with KGF actor yash

'ಮುತ್ತು', 'ನಾಟಾಮ್ಮೈ', 'ಪಡೆಯಪ್ಪ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೆ. ಎಸ್ ರವಿಕುಮಾರ್ ಕಟ್ಟಿಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಫೇವರಿಟ್ ನಿರ್ದೇಶಕರು ಇವರು. ಕನ್ನಡದಲ್ಲಿ 'ಕೋಟಿಗೊಬ್ಬ-2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ತೆಲುಗು ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ರವಿಕುಮಾರ್ ಉತ್ತರಿಸಿದ್ದಾರೆ.

"ಯಶ್ ಜೊತೆ ಒಂದು ಸಿನಿಮಾ ಮಾಡುವ ಇಂಟ್ರೆಸ್ಟ್ ಇದೆ. ಆತನಿಗೆ ಸೂಕ್ತವಾದ ಪಾತ್ರ ಇರುವಂತಹ ಕಥೆ ನಮ್ಮ ಬಳಿಯಿದೆ. ಬಹಳ ದೊಡ್ಡ ನಟ. ಅದು ಬೇರೆಯದ್ದೇ ರೀತಿಯ ಕಥೆ. ಇನ್ನು ರಜನಿಕಾಂತ್ ನಟನೆಯ 'ರಾಣಾ' ಸಿನಿಮಾ ಆರಂಭದಲ್ಲೇ ನಿಂತು ಹೋಯಿತು. ಆ ಚಿತ್ರ ಮಾಡುವುದು ನನ್ನ ಕನಸು. ತೆಲುಗಿನಲ್ಲಿ ರಾಮ್‌ಚರಣ್ ಇಷ್ಟ" ಎಂದು ಕೆ. ಎಸ್ ರವಿಕುಮಾರ್ ಹೇಳಿದ್ದಾರೆ.

ಇನ್ನು ಕೆ. ಎಸ್ ರವಿಕುಮಾರ್ ನಿರ್ಮಾಣದ 'ಹಿಟ್‌ಲಿಸ್ಟ್' ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ. ಶರತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಗರುಡ ರಾಮ್ ವಿಲನ್ ಆಗಿ ಅಬ್ಬರಿಸಿದ್ದಾರೆ.

'KGF' ಬಳಿಕ ಹಲವರು ಯಶ್ ಜೊತೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಕಥೆಗಳನ್ನು ಹೇಳಿದ್ದರು. ಆದರೆ ಗೀತು ಮೋಹನ್‌ದಾಸ್ ಹೇಳಿದ 'ಟಾಕ್ಸಿಕ್' ಕಥೆಯನ್ನು ಯಶ್ ಫೈನಲ್ ಮಾಡಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ವರ್ಕ್‌ ಭರದಿಂದ ಸಾಗುತ್ತಿದೆ. ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

More from Filmibeat

English summary
Rajinikanth Favourite director expresses desire to work with rocking star Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X