For Quick Alerts
  ALLOW NOTIFICATIONS  
  For Daily Alerts

  ಮಾಲ್ಡೀವ್ಸ್‌ನಲ್ಲಿ ಸೌತ್ ಇಂಡಸ್ಟ್ರಿ ಚೆಲುವೆಯರು ಹಾಲಿಡೇ ಎಂಜಾಯ್

  |

  ಲಾಕ್‌ಡೌನ್‌ನಿಂದ ಬ್ರೇಕ್ ಪಡೆದುಕೊಂಡಿದ್ದ ಸಿನಿತಾರೆಯರು ಈಗ ಎಂಜಾಯ್ ಮಾಡೋ ಮೂಡ್‌ನಲ್ಲಿದ್ದಾರೆ. ಏಳೆಂಟು ತಿಂಗಳು ಮನೆಗಳಲ್ಲಿ ಕೂತು ಸಮಯ ಕಳೆದಿದ್ದ ಸೆಲೆಬ್ರಿಟಿಗಳು ಈಗ ಫ್ಯಾಮಿಲಿ ಜೊತೆ ವಿದೇಶಗಳಲ್ಲಿ ಟೈಂ ಪಾಸ್ ಮಾಡ್ತಿದ್ದಾರೆ.

  ವಿಶೇಷ ಅಂದ್ರೆ ದಕ್ಷಿಣ ಭಾರತ ಬಹುತೇಕ ಖ್ಯಾತ ನಟಿಯರೆಲ್ಲರೂ ಒಂದೇ ಜಾಗಕ್ಕೆ ಹೋಗುತ್ತಿರುವುದು ಗಮನ ಸೆಳೆಯುತ್ತಿದೆ. ಲಾಕ್‌ಡೌನ್ ಮುಗಿದ ಬಳಿಕ ಶಾನ್ವಿ ಶ್ರೀವಾಸ್ತವ್, ರಕುಲ್ ಪ್ರೀತ್ ಸಿಂಗ್, ಪ್ರಣಿತಾ ಸುಭಾಷ್ ಸೇರಿದಂತೆ ಹಲವರು ಮಾಲ್ಡೀವ್ಸ್‌ನಲ್ಲಿ ಪ್ರವಾಸ ಮಾಡಿ ಬಂದಿದ್ದಾರೆ. ಮುಂದೆ ಓದಿ....

  ಮಾಲ್ಡೀವ್ಸ್ ನಲ್ಲಿ ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ ಪ್ರಣಿತಾಮಾಲ್ಡೀವ್ಸ್ ನಲ್ಲಿ ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ ಪ್ರಣಿತಾ

  ಶಾನ್ವಿ ಶ್ರೀವಾಸ್ತವ್ ಸಹೋದರಿ

  ಶಾನ್ವಿ ಶ್ರೀವಾಸ್ತವ್ ಸಹೋದರಿ

  ಕನ್ನಡ ನಟಿ ಶಾನ್ವಿ ಶ್ರೀವಾಸ್ತವ್ ಮತ್ತು ಸಹೋದರಿ ವಿಧಿಶಾ ಶ್ರೀವಾಸ್ತವ್ ಸದ್ಯ ಮಾಲ್ಡೀವ್ಸ್‌ನಲ್ಲಿದ್ದಾರೆ. ಲಾಕ್‌ಡೌನ್‌ನಿಂದ ವಿನಾಯ್ತಿ ಸಿಗುತ್ತಿದ್ದಂತೆ ಮಾಲ್ಡೀವ್ಸ್‌ ಕಡೆ ಹೋಗಿರುವ ಸಹೋದರಿಯರು ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

  'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು

  ಕಾಜಲ್ ಅಗರ್ ವಾಲ್

  ಕಾಜಲ್ ಅಗರ್ ವಾಲ್

  ಮುಂಬೈ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದ ನಟಿ ಕಾಜಲ್ ಅಗರ್‌ವಾಲ್ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಪತಿಯ ಜೊತೆ ಮಾಲ್ಡೀವ್ಸ್ ಪ್ರವಾಸ ಮಾಡಿರುವ ಕಾಜಲ್ ಅಂಡರ್‌ವಾಟರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

  ರಕುಲ್ ಪ್ರೀತ್ ಸಿಂಗ್

  ರಕುಲ್ ಪ್ರೀತ್ ಸಿಂಗ್

  ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ನಟಿ ರಕುಲ್ ಪ್ರೀತ್ ಸಿಂಗ್ ಸಹ ತನ್ನ ಕುಟುಂಬದ ಜೊತೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ರಕುಲ್ ಪ್ರೀತ್ ಸಿಂಗ್, ಸಹೋದರ ಹಾಗೂ ಅಪ್ಪ-ಅಮ್ಮನ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.

  ಪ್ರಣಿತಾ ಸುಭಾಷ್

  ಪ್ರಣಿತಾ ಸುಭಾಷ್

  ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸಹ ಮಾಲ್ಡೀವ್ಸ್‌ ಹೋಗಿ ಬಂದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಟ್ರಸ್ಟ್ ಮೂಲಕ ಜನರಿಗೆ ಸಹಾಯ ಮಾಡಿದ್ದ ನಟಿ ಪರಿಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂದ ನಂತರ ಮಾಲ್ಡೀವ್ಸ್‌ ಸುತ್ತಿ ಬಂದಿದ್ದಾರೆ.

  ಮಾಲ್ಡೀವ್ಸ್ ಪ್ರವಾಸದಲ್ಲಿ ಸಮಂತಾ; ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿಮಾಲ್ಡೀವ್ಸ್ ಪ್ರವಾಸದಲ್ಲಿ ಸಮಂತಾ; ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ

  ಬರೀ Tik Tok ಅಲ್ಲೆ ಇರ್ತಾವೆ ಇವು 24 ಗಂಟೆ | Filmibeat Kannada
  ಸಮಂತಾ ಅಕ್ಕಿನೇನಿ

  ಸಮಂತಾ ಅಕ್ಕಿನೇನಿ

  ತೆಲುಗು ನಟಿ ಸಮಂತಾ ಮತ್ತು ನಾಗಚೈತನ್ಯ ಸಹ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದರು. ಮಾಲ್ಡೀವ್ಸ್‌ನಲ್ಲಿ ಸಮಂತಾ ಸುತ್ತಾಡುತ್ತಿರುವ ಫೋಟೋ ಹಾಗೂ ಬೀಚ್‌ನಲ್ಲಿ ಎಂಜಾಯ್ ಮಾಡ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

  English summary
  Shanvi srivastava, rakul preet singh, pranitha subhash enjoying in Maldives.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X