twitter
    For Quick Alerts
    ALLOW NOTIFICATIONS  
    For Daily Alerts

    ಕಡಿಮೆ ವೆಚ್ಚದಲ್ಲಿ ತಯಾರಾಗಿ ಆಗಸ್ಟ್ ತಿಂಗಳಿನಲ್ಲಿ 100 ಕೋಟಿ ಕೊಳ್ಳೆ ಹೊಡೆದ ಚಿತ್ರಗಳಿವು!

    |

    ಈ ವರ್ಷದ ಆಗಸ್ಟ್ ತಿಂಗಳು ಇತರೆ ಚಿತ್ರರಂಗಗಳಿಗೆ ಮತ್ತೊಂದು ಸಾಮಾನ್ಯ ತಿಂಗಳು ಆಗಿರಬಹುದು. ಆದರೆ ತೆಲುಗು ಚಿತ್ರರಂಗಕ್ಕೆ ಮಾತ್ರ ಈ ವರ್ಷದ ಆಗಸ್ಟ್ ತಿಂಗಳು ಅತಿಮುಖ್ಯವಾದ ತಿಂಗಳಾಗಿ ಪರಿಣಮಿಸಿದೆ. ಏಕೆಂದರೆ ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡಿ ಮಕಾಡೆ ಮಲಗಿದ್ದ ತೆಲುಗು ಚಿತ್ರರಂಗಕ್ಕೆ ಉಸಿರು ಕೊಟ್ಟದ್ದು ಇದೇ ತಿಂಗಳು.

    ಆಗಸ್ಟ್ ತಿಂಗಳಿನಲ್ಲಿ ಒಂದೇ ದಿನ ಬಿಡುಗಡೆಯಾದ ಬಿಂಬಿಸಾರಾ ಹಾಗೂ ಸೀತಾ ರಾಮಮ್ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು ಬ್ಲಾಕ್ ಬಸ್ಟರ್ ಚಿತ್ರಗಳಾಗಿ ಹೊರಹೊಮ್ಮುವ ಮೂಲಕ ತೆಲುಗು ಬಾಕ್ಸ್ ಆಫೀಸ್ ಪುಟಿದೇಳುವಂತೆ ಮಾಡಿದ್ದವು. ನಂತರ ಒಂದೇ ವಾರದ ಅಂತರದಲ್ಲಿ ಬಂದ ಕಾರ್ತಿಕೇಯ 2 ಕೂಡ ಅಬ್ಬರಿಸಿತು. ಇನ್ನು ಆಗಸ್ಟ್ ತಿಂಗಳು ತಮಿಳು ಹಾಗೂ ಕನ್ನಡ ಚಿತ್ರರಂಗದ ಅಭಿಮಾನಿಗಳಿಗೂ ಕೂಡ ಒಳ್ಳೆಯ ಚಿತ್ರಗಳನ್ನು ನೀಡಿದೆ.

    ಆಗಸ್ಟ್ ತಿಂಗಳಿನಲ್ಲಿ ತಮಿಳು ಚಿತ್ರರಂಗದ ಧನುಷ್ ಅಭಿನಯದ ತಿರುಚಿತ್ರಾಂಬಲಂ ಕೂಡ ನೂರು ಕೋಟಿ ಕ್ಲಬ್ ಸೇರಿತ್ತು ಹಾಗೂ ಕನ್ನಡದಲ್ಲಿ ಗಣೇಶ್ ಅಭಿನಯದ ಗಾಳಿಪಟ 2 ಚಿತ್ರ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹೀಗೆ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಸಾಮಾನ್ಯ ವೆಚ್ಚದ ಚಿತ್ರಗಳು ಗಲ್ಲಾಪೆಟ್ಟಿಗೆ ಲೂಟಿ ಮಾಡಿವೆ.

     ಟಾಲಿವುಡ್ ಕಮ್ ಬ್ಯಾಕ್

    ಟಾಲಿವುಡ್ ಕಮ್ ಬ್ಯಾಕ್

    ಆಗಸ್ಟ್ 5ರಂದು ದುಲ್ಕರ್ ಸಲ್ಮಾನ್ ಅಭಿನಯದ ಸೀತಾ ರಾಮಮ್ ಬಿಡುಗಡೆಗೊಂಡಿತ್ತು. ಹಾಗೂ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದ ಈ ಚಿತ್ರ 30 ಕೋಟಿ ವೆಚ್ಚದಲ್ಲಿ ತಯಾರಾಗಿ ಬರೋಬ್ಬರಿ 94 ಕೋಟಿ ಲೂಟಿ ಮಾಡಿತು. ಇನ್ನು ಇದೇ ದಿನದಂದು ಬಿಡುಗಡೆಯಾಗಿದ್ದ ಮತ್ತೊಂದು ಚಿತ್ರವಾದ ಬಿಂಬಿಸಾರ 40 ಕೋಟಿ ವೆಚ್ಚದಲ್ಲಿ ತಯಾರಾಗಿ 70 ಕೋಟಿ ಕಲೆಕ್ಷನ್ ಮಾಡಿತ್ತು.

    ನಂತರ ವಾರದ ಬಳಿಕ ಬಿಡುಗಡೆಯಾದ ಕಾರ್ತಿಕೇಯ 2 25 ಕೋಟಿ ವೆಚ್ಚದಲ್ಲಿ ತಯಾರಾಗಿ ಬರೋಬ್ಬರಿ 120 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

     ಧನುಷ್ ಕೂಡಾ ಶತಕ

    ಧನುಷ್ ಕೂಡಾ ಶತಕ

    ಇನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ತಮಿಳಿನ ತಿರುಚಿತ್ರಾಂಬಲಂ 30 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು. ಧನುಷ್ ಅಭಿನಯದ ವಿಂಟೇಜ್ ಚಿತ್ರ ವಿಐಪಿಯ ಫೀಲ್ ಕೊಟ್ಟಿದ್ದ ಈ ಚಿತ್ರ ಜನರನ್ನು ಚಿತ್ರಮಂದಿರಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾ ಒಟ್ಟಾರೆ 110 ಕೋಟಿ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು.

     ಗಾಳಿಪಟ 2

    ಗಾಳಿಪಟ 2

    ಗಾಳಿಪಟ 2 ಬಿಡುಗಡೆಯಾದಾಗ ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿ ಹಿಟ್ ಆಗಬಹುದು ಎಂದು ಬಹುತೇಕರು ಊಹಿಸಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಸೀಕ್ವೆಲ್ ಹಿಟ್ ಆಗುವುದಿಲ್ಲ ಬಿಡಿ ಎಂಬ ಮಾತನ್ನು ಈ ಚಿತ್ರ ಹುಸಿ ಮಾಡಿತು. 10 ಕೋಟಿ ವೆಚ್ಚದಲ್ಲಿ ತಯಾರಾದ ಗಾಳಿಪಟ 2 ಸುಮಾರು 45 ಕೋಟಿ ಕಲೆಕ್ಷನ್ ಮಾಡಿತು.

     ಮತ್ತೆ ಶುರು ತೆಲುಗು ಸಿನಿಮಾಗಳ ಪೀಕಲಾಟ

    ಮತ್ತೆ ಶುರು ತೆಲುಗು ಸಿನಿಮಾಗಳ ಪೀಕಲಾಟ

    ಕಾರ್ತಿಕೇಯ 2 ಯಶಸ್ವಿಯಾದ ನಂತರ ಬಿಡುಗಡೆಯಾದ ತೆಲುಗಿನ ಬಹುತೇಕ ಎಲ್ಲಾ ಚಿತ್ರಗಳೂ ಸಹ ಮಕಾಡೆ ಮಲಗಿವೆ ಎಂದೇ ಹೇಳಬಹುದು. ಲೈಗರ್, ರಂಗರಂಗಾ ವೈಭವಂಗಾ ಹಾಗೂ ತೀಸ್ ಮಾರ್ ಖಾನ್ ರೀತಿಯ ಚಿತ್ರಗಳು ಆಗಸ್ಟ್ ತಿಂಗಳಿನಲ್ಲಿ ವಿಫಲವಾದವು. ಈ ಕೆಟ್ಟ ಫಲಿತಾಂಶ ಈ ತಿಂಗಳಿನಲ್ಲಿಯೂ ಸಹ ಮುಂದುವರೆದಿದ್ದು ಸದ್ಯ ಒಕೇ ಒಕ ಜೀವಿತಂ ಚಿತ್ರ ಬಿಟ್ಟು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಉಳಿದೆಲ್ಲಾ ಚಿತ್ರಗಳು ನಿರಾಸೆ ಮೂಡಿಸಿವೆ.

    English summary
    South Indian cinema gave two 100 crore movies and two 50 crores grossed movies in August 2022. Take a look
    Saturday, September 17, 2022, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X