ಶಿವಣ್ಣನಿಗೆ ಜೊತೆಯಾದ ಶಿವಾಜಿ ಪ್ರಭು ಮತ್ತು ಸುಹಾಸಿನಿ

Recommended Video

ಶಿವರಾಜ್ ಕುಮಾರ್ ರವರ ಆನಂದ್ ಚಿತ್ರತಂಡದಿಂದ ಹೊರ ಬಂತು ವಿಶೇಷ ಸುದ್ದಿ | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಚ್ಚೀತಿಗಷ್ಟೆ ಶಿವಣ್ಣ ಅಭಿನಯದ ವಿಭಿನ್ನ ಸಿನಿಮಾ 'ಕವಚ' ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸದ್ಯ ಶಿವಣ್ಣ ಬಹು ನಿರೀಕ್ಷೆಯ 'ರುಸ್ತುಂ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ 'ಆನಂದ್' ಮತ್ತು 'ದ್ರೋಣ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಎಸ್ ಆರ್ ಕೆ' ಸಿನಿಮಾ ಕೂಡ ಶಿವಣ್ಣ ಕೈಯಲ್ಲಿದೆ.

'ಆನಂದ್' ಚಿತ್ರದ ಚಿತ್ರೀಕರಣ ಈಗಾಗಲೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕ್ಲೈಮ್ಯಾಕ್ಸ್ ಮತ್ತು ಫೈಟ್ ದೃಶ್ಯದ ಚಿತ್ರೀಕರಣ ಭಾಕಿ ಉಳಿಸಿಕೊಂಡಿರುವ 'ಆನಂದ್' ಚಿತ್ರತಂಡ ಈಗ ಚಿತ್ರದ ಇಂಟ್ರಸ್ಟಿಂಗ್ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಹೌದು ಚಿತ್ರದಲ್ಲಿ ಖ್ಯಾತ ಬಹುಭಾಷ ಕಲಾವಿದರಾದ ಸುಹಾಸಿನಿ ಮತ್ತು ಶಿವಾಜಿ ಪ್ರಭು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಮುಂದೆ ಓದಿ..

ಶಿವಣ್ಣನ ಜೊತೆ ಶಿವಾಜಿ ಪ್ರಭು

ಶಿವಣ್ಣನ ಜೊತೆ ಶಿವಾಜಿ ಪ್ರಭು

ತಮಿಳಿನ ಖ್ಯಾತ ನಟ ಶಿವಾಜಿ ಪ್ರಭು ಹ್ಯಾಟ್ರಿಕ್ ಹೀರೊ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. 'ಆನಂದ್' ಚಿತ್ರದಲ್ಲಿ ಶಿವಾಜಿ ಪ್ರಭು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರಂತೆ. ಮೊದಲ ಬಾರಿಗೆ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಶಿವಾಜಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೆ ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಅಭಿನಯದ 'ಬಾಸ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪ್ರಭು 'ದೃಶ್ಯ' ಮತ್ತು 'ಪವರ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ 'ಆನಂದ್' ಮೂಲಕ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

20ವರ್ಷದ ಬಳಿಕ ಶಿವಣ್ಣನ ಜೊತೆ ಸುಹಾಸಿನಿ

20ವರ್ಷದ ಬಳಿಕ ಶಿವಣ್ಣನ ಜೊತೆ ಸುಹಾಸಿನಿ

ನಟಿ ಸುಹಾಸಿನಿ ಆನಂದ್ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. 20 ವರ್ಷಗಳ ಹಿಂದೆ 'ವಿಶ್ವ' ಚಿತ್ರದಲ್ಲಿ ಶಿವಣ್ಣ ಜೊತೆ ಅಭಿನಯಿಸಿದ್ದ ಸುಹಾಸಿನಿ ಈಗ 'ಆನಂದ್' ಮೂಲಕ ಮತ್ತೆ ಒಂದಾಗುತ್ತಿದ್ದಾರೆ. 'ಅಂಬಿ ನಿಂಗೆ ವಯಸ್ಸಾಯ್ತೊ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸುಹಾಸಿನಿ ಈಗ ಮತ್ತೆ ಕನ್ನಡಕ್ಕೆ ವಾಪಸ್ ಆಗಿದ್ದಾರೆ. ಆದ್ರೆ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ.

ಪಿ.ವಾಸು ನಿರ್ದೇಶನದ ಚಿತ್ರ

ಪಿ.ವಾಸು ನಿರ್ದೇಶನದ ಚಿತ್ರ

ಅಂದ್ಹಾಗೆ 'ಆನಂದ್' ಪಿ ವಾಸು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಮೊದಲು ಶಿವಣ್ಣ ಜೊತೆ ಸೂಪರ್ ಹಿಟ್ 'ಶಿವಲಿಂಗ' ಸಿನಿಮಾ ಮಾಡಿದ್ದ ಪಿ ವಾಸು ಈಗ 'ಆನಂದ್' ಮೂಲಕ ಮತ್ತೆ ಒಂದಾಗಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ವಿಶೇಷ ಅಂದ್ರೆ ಮೊದಲ ಬಾರಿಗೆ ಶಿವಣ್ಣ ದ್ವಾರಕೀಶ್ ಬ್ಯಾನರ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಶಿವಣ್ಣನಿಗೆ ರಚಿತಾ ರಾಮ್ ನಾಯಕಿ

ಶಿವಣ್ಣನಿಗೆ ರಚಿತಾ ರಾಮ್ ನಾಯಕಿ

ಶಿವಣ್ಣನಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಸೆಂಚುರಿ ಸ್ಟಾರ್ ಅಭಿನಯದ 'ರುಸ್ತುಂ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಚಿತಾ. ಆನಂದ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುವ ಮೂಲಕ ಮೊದಲ ಬಾರಿಗೆ ಶಿವಣ್ಣನಿಗೆ ನಾಯಕಿಯಾಗಿದ್ದಾರೆ. ರಚಿತಾ ಸದ್ಯ 'ಐ ಲವ್ ಯು' ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ ಆನಂದ್

ಕೊನೆಯ ಹಂತದ ಚಿತ್ರೀಕರಣದಲ್ಲಿ ಆನಂದ್

ಆನಂದ್ ಬಹುತೇಕ ಚಿತ್ರೀಕರಣ ಮುಗಿಸಿದೆ. ಇನ್ನು ಕೇವಲ 16 ದಿನಗಳ ಚಿತ್ರೀಕರಣ ಮಾತ್ರ ಭಾಕಿ ಉಳಿಸಿಕೊಂಡಿದೆ. ಮಂಗಳೂರಿನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮುಗಿಸಿ ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಸಾಹಸ ಸನ್ನಿವೇಶವನ್ನು ಶೂಟ್ ಮಾಡಲು ಪ್ಲಾನ್ ಮಾಡಿಕೊಂಡಿದೆಯಂತೆ ಚಿತ್ರತಂಡ.

More from Filmibeat

English summary
South Indian famous actors Shivaji Prabhu and Suhasini Maniratnam will join the cast of Shivaraj Kumar's upcoming film Anad. This movie is directed by P.Vasu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X