ಖ್ಯಾತ ನಟಿ ಲಕ್ಷ್ಮೀ ರಾಯ್ ಗೆ ಕರೆಂಟ್ ಬಿಲ್ ಶಾಕ್
Recommended Video
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಲಕ್ಷ್ಮೀ ರಾಯ್ ಗೆ ಈಗ ಕರೆಂಟ್ ಬಿಲ್ ಸಮಸ್ಯೆ ಎದುರಾಗಿದೆ. ಇದೇನಿದು ಕರೆಂಟ್ ಶಾಕ್ ಸಮಸ್ಯೆ ಅಂತ ಅಚ್ಚರಿ ಪಡುತ್ತಿದ್ದೀರಾ. ಅಚ್ಚರಿ ಎನಿಸಿದ್ರು ಇದು ನಿಜ. ಯಾಕಂದ್ರೆ ನಟಿ ಲಕ್ಷ್ಮೀ ರಾಯ್ ಅವರು ಮನೆಯ ಕರೆಂಟ್ ಬಿಲ್ ಅನ್ನು ನೋಡಿ ಶಾಕ್ ಆಗಿದ್ದಾರಂತೆ.
ದಕ್ಷಿಣ ಭಾರತೀಯ ಚಿತ್ರರಂಗದ ಗ್ಲಾಮರಸ್ ನಟಿ ಲಕ್ಷ್ಮೀ ಅವರ ಮನೆಯ ಎಲೆಕ್ಟ್ರಿಸಿಟಿ ಬಿಲ್ ಕಳೆದ ಮೂರು ತಿಂಗಳಿಂದ ಮಾಮೂಲಿಗಿಂತ ದುಪ್ಪಟ್ಟಾಗಿದೆಯಂತೆ. ಹೆಚ್ಚಾಗಿ ಕರೆಂಟ್ ಬಿಲ್ ಬರುತ್ತಿರುವುದನ್ನು ನೋಡಿ ಶಾಕ್ ಆದ ಲಕ್ಷ್ಮೀ ಈ ಬಗ್ಗೆ ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

"ನನ್ನ ಮನೆಯ ಎಲೆಕ್ಟ್ರಿಕ್ ಬಿಲ್ ಅನ್ನು ಗಮನಿಸಿದೆ, ಪ್ರತೀ ತಿಂಗಳು ನಾನು ಕಟ್ಟುತ್ತಿದ್ದ ಬಿಲ್ ಗಿಂತ ದುಪ್ಪಟ್ಟು ಮೊತ್ತದ ಬಿಲ್ ಬಂದಿದೆ. ಕಳೆದ ಮೂರು ತಿಂಗಳ ಬಿಲ್ ಗಮನಿಸಿದಾಗ ಇದು ತುಂಬಾ ದುಬಾರಿ ಆಗಿರುವುದು ಗಮನಕ್ಕೆ ಬಂದಿದೆ. ಪದೇ ಪದೇ ಸಂಬಂಧಪಟ್ಟವರಿಗೆ ಸಂಪರ್ಕಿಸಲು ಯತ್ನಸುತ್ತಿದ್ದೇನೆ. ಟೋಲ್ ಫ್ರೀ ನಂಬರ್ ಕೂಡ ಕೆಲಸ ಮಾಡುತ್ತಿಲ್ಲ. ಇದೇ ರೀತಿ ಎಷ್ಟು ಜನ ಕಷ್ಟಪಡುತ್ತಿರಬಹುದು ಅಂತ ಆಶ್ಚರ್ಯವಾಗುತ್ತಿದೆ. ಸಂಬಂಧ ಪಟ್ಟವನ್ನು ಸಂಪರ್ಕಿಸಲು ಯಾರಾದ್ರು ಸಹಾಯ ಮಾಡಿ. ಕಷ್ಟಪಟ್ಟು ಸಂಪಾದಿಸಿದ ಹಣ ಹೀಗೆ ವ್ಯರ್ತವಾಗುವುದು ಬೇಸರವಾಗುತ್ತಿದೆ" ಎಂದು ದೀರ್ಘವಾದ ಲೆಟರ್ ಒಂದನ್ನು ಬರೆದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ರು.
ಲಕ್ಷ್ಮೀ ರಾಯ್ ಅವರ ಈ ಪೋಸ್ಟ್ ನೋಡಿದ ಸಂಬಂಧಪಟ್ಟ ಅದಿಕಾರಿಗಳು ಲಕ್ಷ್ಮೀ ರಾಯ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಸಮಸ್ಯೆ ಆಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ಏನಾಗಿದೆ ಎಂದು ವಿಚಾರಿಸುವುದಾಗಿ ಹೇಳಿದ್ದಾರೆ. ಲಕ್ಷ್ಮೀ ರಾಯ್ ಸದ್ಯ ಕನ್ನಡ ಝಾನ್ಸಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











