twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ಸಂಗೀತ ನಿರ್ದೇಶಕ ರವಿ ಬಸ್ರೂರು 'ಮಡ್ಡಿ' ಮೇಕಿಂಗ್ ನೋಡಿ ಬೆರಗಾಗಿದ್ದೇಕೆ?

    |

    ಸಿನಿಮಾದಲ್ಲಿ ವಿಭಿನ್ನ ಪ್ರಯತ್ನಗಳು ಆಗುತ್ತಲೇ ಇರಬೇಕು. ಇಲ್ಲದೆ ಹೋದ ಬಣ್ಣದ ಲೋಕ ನಿಂತ ನೀರಾಗುತ್ತೆ. ಇಲ್ಲೊಂದು ಸಿನಿಮಾ ಇದೇ ಮೊದಲ ಬಾರಿಗೆ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಮಡ್ ರೇಸ್ ಕುರಿತಾದ ಚಿತ್ರವೊಂದು ರಿಲೀಸ್‌ಗೆ ರೆಡಿಯಾಗಿದೆ. ಅದೂ ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಮಲೆಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಡಿಸೆಂಬರ್ 10ರಂದು ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    Recommended Video

    'ಮಡ್ಡಿ' ಸಿನಿಮಾ ಬಗ್ಗೆ ಆಶ್ಚರ್ಯಕರ ವಿಷಯ ಬಿಚ್ಚಿಟ್ಟ ರವಿ ಬಸ್ರೂರು

    ಮಡ್ ರೇಸ್ ಕಥೆಯಿಟ್ಟುಕೊಂಡು ಭಾರತದಲ್ಲಿ ತಯಾರಾಗಿರುವ ವಿಶಿಷ್ಟ ಸಿನಿಮಾವಿದು. ಈ ಸಿನಿಮಾ ನಿರ್ಮಾಣಕ್ಕೆ 5 ವರ್ಷಗಳ ಸಮಯ ಹಿಡಿದಿದೆ. ಕೇವಲ ಲೊಕೇಶನ್ ಹುಡುಕಾಟಕ್ಕೆ ಅಂತಲೇ ಒಂದು ವರ್ಷ ತೆಗೆದುಕೊಂಡಿದೆ ಚಿತ್ರತಂಡ. ಕೊನೆಗೂ ಲೊಕೇಶನ್ ಹುಡುಕಿ ತಮಿಳುನಾಡು ಹಾಗೂ ‌ಕೇರಳ ಗಡಿ ಪ್ರದೇಶದಲ್ಲಿ ಮಡ್ಡಿ ಚಿತ್ರವನ್ನು ನಿರ್ದೇಶಕ ಡಾ||ಪ್ರಗ್ಬಲ್ ಚಿತ್ರೀಕರಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡಿರುವ ರವಿ ಬಸ್ರೂರ್ ಸಿನಿಮಾ ಮೇಕಿಂಗ್ ನೋಡಿ ಬೆರಾಗಿದ್ದರಂತೆ. ಈ ಮಾತನ್ನು ಸ್ವತಃ ಅವರೇ ಹೇಳಿದ್ದಾರೆ.

     'ಮಡ್ಡಿ' ಮೇಕಿಂಗ್ ನೋಡಿ ಬೆರಗಾಗಿದ್ದ ರವಿ ಬಸ್ರೂರು

    'ಮಡ್ಡಿ' ಮೇಕಿಂಗ್ ನೋಡಿ ಬೆರಗಾಗಿದ್ದ ರವಿ ಬಸ್ರೂರು

    "ನನಗೆ ಛಾಯಾಗ್ರಾಹಕ ರತೀಶ್ ಫೋನ್ ಮಾಡಿ, ಈ‌ ರೀತಿಯ ಚಿತ್ರವೊಂದು ತಯಾರಾಗುತ್ತಿದೆ. ನೀವೇ ಸಂಗೀತ ಮಾಡಬೇಕೆಂದು ಕೇಳಿದರು. ಸ್ವಲ್ಪ ಬ್ಯುಸಿ ಇದ್ದುದರಿಂದ ನಾನು ಏನು ಹೇಳಿರಲಿಲ್ಲ. ಕೆಲವು ದಿನಗಳ ಬಳಿಕ ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋದೆ. ಅಲ್ಲಿ ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕೆಲಸ ಮಾಡುತ್ತಿದ್ದ ಪರಿ ನೋಡಿ ಬೆರಗಾದೆ. ಅಬ್ಬಾ ಲಕ್ಷಾಂತರ ಮೌಲ್ಯದ ವಾಹನಗಳು ನನ್ನ ಕಣ್ಣ ಮುಂದೆ ಪ್ರಪಾತಕ್ಕೆ ಬೀಳುತಿತ್ತು." ಎಂದು ಮಡ್ ರೇಸ್ ಸಿನಿಮಾ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    'ಮಡ್ಡಿ'ಗೆ 2 ವರ್ಷದಿಂದ ಬಸ್ರೂರು ಸಂಗೀತ

    'ಮಡ್ಡಿ'ಗೆ 2 ವರ್ಷದಿಂದ ಬಸ್ರೂರು ಸಂಗೀತ

    " ಮಡ್ಡಿ ಚಿಕ್ಕ ಬಜೆಟ್ ನ ಸಿನಿಮಾ ಎಂದು ಆರಂಭವಾಗಿತ್ತು. ಆದರೆ ಚಿತ್ರೀಕರಣ ಸಾಗುತ್ತಾ ದುಬಾರಿ ವೆಚ್ಚದ ಅದ್ದೂರಿ ಸಿನಿಮಾವಾಗಿ 'ಮಡ್ಡಿ' ನಿರ್ಮಾಣವಾಗಿದೆ. ನನಗೆ ಈ ಚಿತ್ರಕ್ಕೆ ಸಂಗೀತ ನೀಡಲು ಸುಮಾರು ಎರಡು ವರ್ಷಗಳ ಅವಧಿ ಹಿಡಿದಿದೆ. ಸಂಗೀತ ನಿರ್ದೇಶಕ ಹಾಗೂ ಸಂಕಲನಕಾರ ಗಂಡ - ಹೆಂಡತಿ ಇದ್ದ ಹಾಗೆ. ಅವರಿಬ್ಬರ ನಡುವಿನ ಹೊಂದಾಣಿಕೆ ಮುಖ್ಯ. ಇದು ಮೂರು ರಾಜ್ಯಗಳ ಸಿನಿಮಾ ಎನ್ನಬಹುದು ಏಕೆಂದರೆ ನಾನು ಕರ್ನಾಟಕದವನು, ನಿರ್ದೇಶಕರು ಕೇರಳದವರು ಹಾಗೂ ಸಂಕಲನಕಾರರು ತಮಿಳುನಾಡಿನವರು. " ಎಂದು ಮಡ್ಡಿ ಸಿನಿಮಾದ ಬಗ್ಗೆ ರವಿಬಸ್ರೂರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

    400 ಥಿಯೇಟರ್‌ಗಳಲ್ಲಿ 'ಮಡ್ಡಿ' ರಿಲೀಸ್

    400 ಥಿಯೇಟರ್‌ಗಳಲ್ಲಿ 'ಮಡ್ಡಿ' ರಿಲೀಸ್

    'ಮಡ್ಡಿ' ಸಿನಿಮಾ ಸುಮಾರು 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕೇರಳ ಹಾಗೂ ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ ರಿಲೀಸ್ ಆಗುತ್ತಿದೆ. ವಿತರಕ ಭಾಷಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಪ್ರೇಮಕೃಷ್ಣ ದಾಸ್ ಅವರು ನಿರ್ಮಾಣ ಹಾಗೂ ಪ್ರಗ್ಬಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವಿದೆ. ರನ್ ರವಿ ಅವರ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.

    'ಮಡ್ಡಿ'ಗಾಗಿ ಡ್ಯೂಪ್ ಇಲ್ಲದೆ ಆಕ್ಷನ್

    'ಮಡ್ಡಿ'ಗಾಗಿ ಡ್ಯೂಪ್ ಇಲ್ಲದೆ ಆಕ್ಷನ್

    ಯುವ ಕಲಾವಿದರಾದ ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡ್ಯೂಪ್ ಇಲ್ಲದೆ ಎಲವು ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ 13 ಕ್ಯಾಮರಾದಲ್ಲಿ ಕೆಲವು ಸಾಃಶ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಮಡ್ ರೇಸ್ ಜೊತೆ ಅಡ್ವೆಂಚರ್ ಹಾಗೂ ಭಾವನಾತ್ಮಕ ಸನ್ನಿವೇಶಗಳು ಈ ಸಿನಿಮಾದಲ್ಲಿವೆ.

    English summary
    South Indian pan india film Maddi film will release in 6 languages on december 10th. Maddi is the first film Indian movie based on mad race.
    Wednesday, December 8, 2021, 8:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X