For Quick Alerts
  ALLOW NOTIFICATIONS  
  For Daily Alerts

  ಅಂಬಿ ಪುತ್ರನ ಎಂಟ್ರಿಗೆ ಅದ್ಧೂರಿ ಸ್ವಾಗತ ಕೋರಿದ ಸ್ಟಾರ್ ನಟರು

  |

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 'ಅಮರ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಅಭಿಗೆ ಚಿತ್ರರಂಗದ ಗಣ್ಯರು ಶುಭ ಹಾರೈಸುವ ಮೂಲಕ ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ.

  ಚಿತ್ರ ಸೆಟ್ಟೇರಿದಾಗಿನಿಂದಲು 'ಅಮರ್' ಚಿತ್ರಕ್ಕೆ ಚಿತ್ರರಂಗದ ಗಣ್ಯರು ಸಾಥ್ ನೀಡುತ್ತಲೆ ಬಂದಿದ್ದಾರೆ. ಈಗ ಚಿತ್ರ ರಿಲೀಸ್ ಗೆ ಸಿದ್ದವಾಗಿದೆ. ಇದೆ ತಿಂಗಳು 31ಕ್ಕೆ ಚಿತ್ರ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಅನೇಕ ಸ್ಟಾರ್ ನಟರು ಅಭಿಷೇಕ್ ಮೊದಲ ಸಿನಿಮಾಗೆ ವಿಶ್ ಮಾಡಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಕನ್ನಡ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರವಿಶಂಕರ್, ದರ್ಶನ್, ಯಶ್ ಸೇರಿದಂತೆ ಅನೇಕರು ನಟರು ಅಭಿಯನ್ನು ಹರಿಸಿ ಬೆಳೆಸಿ ಎಂದು ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ..

  ಅಭಿಷೇಕ್ ಗೆ ಶುಭ ಹಾರೈಸಿದ ಪುನೀತ್

  ಅಭಿಷೇಕ್ ಅಂಬರೀಶ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಹಾರೈಸಿದ್ದಾರೆ. "ಅಭಿಷೇಕ್ ಗೆ ಒಳ್ಳೆಯದಾಗಲಿ. ಟ್ರೈಲರ್ ಮತ್ತು ಹಾಡುಗಳು ಅದ್ಭುತವಾಗಿವೆ. ಅವರ ತಂದೆಯ ಆಶೀರ್ವಾದ ಇದೆ. ಅವರ ತಂದೆ ಹೇಗೆ ಮೇಲೆ ಬಂದ್ರು, ಹಾಗೆ ಅವರನ್ನು ಇಷ್ಟಪಟ್ಟ ಅಭಿಮಾನಿಗಳು ಅಭಿಷೇಕ್ ಅವರನ್ನು ಮೆಚ್ಚಿಕೊಳ್ಳುತ್ತಾರೆ. ನನ್ನ ಕಡೆಯಿಂದ ಅಭಿಷೇಕ್ ಗೆ ಒಳ್ಳೆಯದಾಗಲಿ. ಸಿನಿಮಾ ಹಿಟ್ ಆಗಲಿ" ಎಂದು ಪವರ್ ಸ್ಟಾರ್ ಪವರ್ ಫುಲ್ ಮಾತುಗಳ ಮೂಲಕ ಶುಭಹಾರೈಸಿದ್ದಾರೆ.

  ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಕಾಯುತ್ತಿದ್ದೀನಿ

  ಸ್ಯಾಂಡಲ್ ವುಡ್ ನ ಖ್ಯಾತ ನಟ ರವಿಶಂಕರ್ ಅಭಿಷೇಕ್ ಮೊದಲ ಸಿನಿಮಾಗೆ ಶುಭಕೋರಿದ್ದಾರೆ. "ಅಂಬರೀಶ್ ಅಪ್ಪಾಜಿಯ ಆಶೀರ್ವಾದ, ಸುಮಲತಕ್ಕನ ಆಶೀರ್ವಾದ ಹಾಗೂ ಇಡೀ ಕರ್ನಾಟಕ ಜನರ ಆಶೀರ್ವಾದ ಸಿಕ್ಕಿದೆ.

  ಇದು ಸದಾ ನಿನ್ನ ಜೊತೆಯೆ ಇರಲಿ. ಅಮರ್ ಚಿತ್ರಕ್ಕೆ ಆಲ್ ದಿ ಬೆಸ್ಟ್. ಎಲ್ಲ ಅಭಿಮಾನಿಗಳ ಜೊತೆ ನಾನು ಸಿನಿಮಾ ನೋಡಲು ಕಾಯುತ್ತಿದ್ದೀನಿ. ಒಳ್ಳೆಯದಾಗಲಿ ಅಭಿಷೇಕ್"

  ಅಮರ್ ಗೆ ಸಿಕ್ತು ರಜನಿಕಾಂತ್ ಆಶೀರ್ವಾದ

  ಸೂಪರ್ ಸ್ಟಾರ್ ರಜನಿಕಾಂತ್ ಸಹ 'ಅಮರ್' ಚಿತ್ರಕ್ಕೆ ವಿಶ್ ಮಾಡಿದ್ದಾರೆ.

  ವಿಡಿಯೋ ಮೂಲಕ ಶುಭ ಹಾರೈಸಿರುವ ಅವರು ''ನನ್ನ ಆತ್ಮೀಯ ಗೆಳೆಯ ಅಂಬರೀಶ್ ಹಾಗೂ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ದೊಡ್ಡ ಯಶಸ್ಸು ಗಳಿಸಲಿ. ಅಂಬರೀಶ್ ಹೇಗೆ ಕನ್ನಡ ಜನಗಳ ಹೃದಯದಲ್ಲಿ ಹೇಗೆ ವಿಜೃಂಭಿಸಿದನೋ ಅದೇ ರೀತಿ ಅಭಿಷೇಕ್ ಸಹ ಕನ್ನಡ ಚಿತ್ರರಂಗದಲ್ಲಿ, ಕನ್ನಡ ಜನಗಳ ಹೃದಯಲ್ಲಿಯೂ ವಿಜೃಂಭಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.'' ಎಂದು ಹೇಳಿದ್ದಾರೆ.

  ಅಮರ್ ಗೆ ಜೋಡೆತ್ತುಗಳ ಸಾಥ್

  ಅಮರ್ ಗೆ ಜೋಡೆತ್ತುಗಳ ಸಾಥ್

  ಅಭಿಷೇಕ್ ಮೊದಲ ಸಿನಿಮಾಗೆ ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಇಬ್ಬರು ಸಾಥ್ ನೀಡಿದ್ದಾರೆ. 'ಅಮರ್' ಸಿನಿಮಾವನ್ನು ನೋಡಿ ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಭಿಷೇಕ್ ಅನ್ನು ಆಶೀರ್ವಾದ ಮಾಡಿ, ಬೆಳೆಸಿ ಎಂದು ಪ್ರೀತಿಯ ತಮ್ಮನ ಬಗ್ಗೆ ಅಣ್ಣಂದಿರಾದ ದರ್ಶನ್ ಹಾಗು ಯಶ್ ಕೇಳಿಕೊಂಡಿದ್ದಾರೆ. 'ಅಮರ್' ಸಿನಿಮಾ ಸೆಟ್ಟೇರಿದಾಗಿನಿಂದಲು ಪ್ರೋತ್ಸಾಹ ನೀಡುತ್ತಲೆ ಬಂದಿದ್ದ ಜೋಡೆತ್ತುಗಳು, ಸ್ವಾಭಿಮಾನಿ ಸಮಾವೇಶದಲ್ಲೂ ಮಂಡ್ಯ ಜನರ ಮುಂದೆ ನಿಂತು ಕೇಳಿಕೊಂಡಿದ್ದಾರೆ. 'ಅಮರ್' ಚಿತ್ರದಲ್ಲಿ ದರ್ಶನ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಗೆಳೆಯನಿಗೆ ಶುಭ ಹಾರೈಸಿದ ನಿಖಿಲ್

  ಗೆಳೆಯನಿಗೆ ಶುಭ ಹಾರೈಸಿದ ನಿಖಿಲ್

  ''ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ 'ಅಮರ್' ಭಾರಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾವನ್ನು ನೋಡಿ. ಅಭಿ ಚೆನ್ನಾಗಿ ನಟಿಸಿರುತ್ತಾನೆ ಎನ್ನುವ ಭರವಸೆ ಇದೆ.'' ಎಂದು ಹೇಳಿದ್ದಾರೆ. ಚುನಾವಣೆಯ ನಂತರ ನಿಖಿಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ ಅಭಿಷೇಕ್ ಗೆ ವಿಶ್ ಮಾಡಿದ್ದಾರೆ.

  English summary
  South Indian stars like Rajinikanth, Puneeth Rajkumar, Darshan and yash are a great wellcome to abhishek ambareesh starrer 'Amar' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X