ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?
ನೂರು ಕೋಟಿ, ಇನ್ನೂರು ಕೋಟಿ ಎನ್ನುವುದು ಬರಿ ಬಾಲಿವುಡ್ ಗೆ ಮಾತ್ರ ಸೀಮಿತವಾಗಿತ್ತು. ದಕ್ಷಿಣ ಭಾರತದ ಚಿತ್ರಗಳು ಈ ಸಾಧನೆ ಮಾಡುವಲ್ಲಿ ಭಾರಿ ಸಾಹಸ ಮಾಡಬೇಕಿತ್ತು. ಬಹುಶಃ ವರ್ಲ್ಡ್ ವೈಡ್ ಅಭಿಮಾನಿಗಳನ್ನ ಹೊಂದಿರುವ ರಜನಿಕಾಂತ್ ಸಿನಿಮಾ ಮಾತ್ರ ಈ ಸಾಧನೆ ಮಾಡಲು ಸಾಧ್ಯ ಎನ್ನುವ ಸಮಯವೂ ಇತ್ತು.
ಈಗ ಕಾಲ ಬದಲಾಗಿದೆ. ಸೌತ್ ಇಂಡಸ್ಟ್ರಿ ಸಿನಿಮಾಗಳು ನೂರು ಕೋಟಿ, ಇನ್ನೂರು ಕೋಟಿ, ಮೂನ್ನೂರು ಕೋಟಿ ಗಡಿ ದಾಟಿ ಹೋಗುತ್ತಿದೆ. ಈ ಟ್ರೆಂಡ್ ನಲ್ಲಿ ಸ್ಯಾಂಡಲ್ ವುಡ್ ಸಿನಿಮಾಗಳು ಇದೆ ಎಂಬುದು ಖುಷಿಯ ವಿಚಾರ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಯಾವುದು? ಯಾವ ನಟ ಚಿತ್ರಗಳು ಟಾಪ್ ಹತ್ತರ ಪಟ್ಟಿಯಲ್ಲಿದೆ. ಕನ್ನಡದಿಂದ ಯಾವ ಸಿನಿಮಾ ಈ ಪಟ್ಟಿಯಲ್ಲಿದೆ? ಮುಂದೆ ಓದಿ...

200 ಕೋಟಿ ಕ್ಲಬ್ ಸೇರಿದ ಚಿತ್ರಗಳು
2019ನೇ ವರ್ಷದಲ್ಲಿ ಬಿಡುಗಡೆಯಾದ ನಾಲ್ಕು ಚಿತ್ರಗಳು ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಕಂಡಿದೆ. ರಜನಿಕಾಂತ್ ನಟಿಸಿದ್ದ ಪೇಟಾ, ಅಜಿತ್ ನಟಿಸಿದ್ದ ವಿಶ್ವಾಸಂ, ಪ್ರಭಾಸ್ ನಟನೆಯ ಸಾಹೋ ಹಾಗೂ ಚಿರಂಜೀವಿ ನಟಿಸಿದ್ದ ಸೈರಾ ನರಸಿಂಹ ರೆಡ್ಡಿ ಈ ಸಾಧನೆ ಮಾಡಿದೆ ಎಂದು ದಕ್ಷಿಣ ಭಾರತದ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ. ಆದರೆ, ಅಜಿತ್ ವಿಶ್ವಾಸಂ ಚಿತ್ರದ ಗಳಿಕೆ ಇಷ್ಟು ಆಗಿಲ್ಲ ಎಂಬ ವಿರೋಧವಿದೆ.

ಪ್ರಭಾಸ್ ಮೂರು ಚಿತ್ರಗಳು
ಸಾರ್ವಕಾಲಿಕ ಸೌತ್ ಇಂಡಸ್ಟ್ರಿ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಗಳಿಕೆ ಚಿತ್ರಗಳ ಪೈಕಿ ಪ್ರಭಾಸ್ ಅಭಿನಯದ ಮೂರು ಸಿನಿಮಾ ಇದೆ. ಬಾಹುಹಲಿ ದಿ ಬಿಗಿನಿಂಗ್ (500+), ಬಾಹುಬಲಿ ದಿ ಕನ್ ಕ್ಲೂಷನ್ ಹಾಗೂ ಸಾಹೋ (439 ಕೋಟಿ) ಸಿನಿಮಾ. ಬಾಹುಬಲಿ ದಿ ಕನ್ ಕ್ಲೂಷನ್ 1800 ಕೋಟಿ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ ಈ ಮೂರು ಚಿತ್ರಗಳು 400 ಕೋಟಿ ಕ್ಲಬ್ ಗಡಿದಾಟಿದೆ.

ರಜನಿಕಾಂತ್ ಸಿನಿಮಾ
ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ 2.0 ಸಿನಿಮಾ 821 ಕೋಟಿ ಗಳಿಸಿದೆ. ಸಾರ್ವಕಾಲಿಕ ಗಳಿಕೆ ಪಟ್ಟಿಯಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನುಳಿದಂತೆ ರಜನಿ ಅಭಿನಯದ ಪೇಟಾ (250+), ಕಾಲಾ (150+), ಕಬಾಲಿ, ಎಂಥೀರನ್ ಚಿತ್ರಗಳು 100 ಕೋಟಿ ಕ್ಲಬ್ ಗಡಿದಾಟಿದೆ.

ಎರಡು ವಿಜಯ್ ಚಿತ್ರಗಳು
ತಮಿಳು ನಟ ವಿಜಯ್ ನಟಿಸಿರುವ ಎರಡು ಚಿತ್ರಗಳು ನೂರು ಕೋಟಿ ಕ್ಲಬ್ ದಾಟಿದೆ. ಮೆರ್ಸಲ್ ಮತ್ತು ಸರ್ಕಾರ್ ಚಿತ್ರಗಳು ಸೌತ್ ಇಂಡಸ್ಟ್ರಿಯ ಟಾಪ್ ಹತ್ತರಲ್ಲಿದೆ. ಎರಡೂ ಸಿನಿಮಾಗಳು 250+ ಕೋಟಿ ಸಂಪಾದನೆ ಮಾಡಿದೆ ಎಂದು ವರದಿ ಆಗಿದೆ.

ಕನ್ನಡದ ಕೆಜಿಎಫ್ ಚಾಪ್ಟರ್ 1
ತಮಿಳು ನಟ ವಿಕ್ರಂ ಅಭಿನಯದ 'ಐ', ಮಹೇಶ್ ಬಾಬು ನಟನೆಯ ಭರತ್ ಅನೇ ನೇನು, ರಾಮ್ ಚರಣ್ ಅಭಿನಯದ ರಗಸ್ಥಲಂ ಚಿತ್ರಗಳು ನೂರು ಕೋಟಿ ಗಡಿದಾಟಿದೆ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕೂಡ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಕೆ ಚಿತ್ರಗಳ ಪೈಕಿ ಸ್ಥಾನ ಪಡೆದುಕೊಂಡಿದೆ. ಕನ್ನಡದಲ್ಲಿ ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ನೂರು ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ, ಕೆಜಿಎಫ್ ಹೆಚ್ಚು ಗಳಿಸಿರುವ ಸಿನಿಮಾ ಆಗಿದೆ.


Click it and Unblock the Notifications











